ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ವ್ಯಾಪ್ತಿಯಲ್ಲಿ 2021-22 ನೇ ಶೈಕ್ಷಣಿಕ ಸಾಲಿಗೆ ಪಶುಸಂಗೋಪನೆಯಲ್ಲಿ 2 ವರ್ಷ ಅವಧಿಯ ಡಿಪ್ಲೊಮಾ ಕೋರ್ಸಿನ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಕುರಿತು.

  • ಕೋರ್ಸ್ ಗಳು : ಪಶುಸಂಗೋಪನೆ ಡಿಪ್ಲೊಮಾ ,
  • ವಿದ್ಯಾರ್ಹತೆ : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಎಸ್ಎಲ್ಸಿ ತತ್ಸಮ ಪರೀಕ್ಷೆಯೊಂದಿಗೆ ಕನ್ನಡವೊಂದು ವಿಷಯವನ್ನು ಕಡ್ಡಾಯವಾಗಿ ಓದಿ ಕನಿಷ್ಠ ಶೇಕಡಾ 45 ರಷ್ಟು ಅಂಕಗಳನ್ನು ಪಡೆದು ತೇರ್ಗಡೆ ಆಗಿರಬೇಕು. (ಪ.ಜಾತಿ /ಪ.ಪಂಗಡ /ಪ್ರವರ್ಗ -1ರ ಅಭ್ಯರ್ಥಿಗಳು ಶೇಕಡಾ 40 ರಷ್ಟು ಅಂಕಗಳನ್ನು ಪಡೆದು ತೇರ್ಗಡೆ ಆಗಿರಬೇಕು. ಮತ್ತು ಕಡ್ಡಾಯವಾಗಿ ಒಂದರಿಂದ ಹತ್ತನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.
  • ಪಾಲಿಟೆಕ್ನಿಕ್ : ಪಶುಸಂಗೋಪನಾ ಪಾಲಿಟೆಕ್ನಿಕ್ ಜಾನುವಾರು ಸಂಶೋಧನಾ ಹಾಗೂ ಮಾಹಿತಿ ಕೇಂದ್ರ ಕೊನೇಹಳ್ಳಿ ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆ : ಲಭ್ಯವಿರುವ ಒಟ್ಟು ಸೀಟು: 50.
  • ಪಶುಸಂಗೋಪನಾ ಪಾಲಿಟೆಕ್ನಿಕ್ ಕುನುಾರು ಶಿಗ್ಗಾಂವ ತಾಲೂಕು ಹಾವೇರಿ ಜಿಲ್ಲೆ ,ಒಟ್ಟು ಸೀಟ್ :50
  • ಪಶುಸಂಗೋಪನಾ ಪಾಲಿಟೆಕ್ನಿಕ್ ಕೋರಮಂಗಲ ಕ್ರಾಸ್ ಹಾಸನ ಜಿಲ್ಲೆ , ಒಟ್ಟು ಸೀಟು :50
  • ಪಶುಸಂಗೋಪನಾ ಪಾಲಿಟೆಕ್ನಿಕ್ ಬರ್ಗಿ ಗುಂಡ್ಲುಪೇಟೆ ತಾಲ್ಲೂಕು ಚಾಮರಾಜನಗರ ಜಿಲ್ಲೆ , ಒಟ್ಟು ಸೀಟು 50,
  • ಪಶುಸಂಗೋಪನಾ ಪಾಲಿಟೆಕ್ನಿಕ್ ಯ ಡೋರ ್ನಳ್ಳಿ ಶಹಾಪುರ ತಾಲ್ಲೂಕು ಯಾದಗಿರಿ ಜಿಲ್ಲೆ , ಒಟ್ಟು ಸೀಟು 50.
    ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 12.10.2021 ರಂದು ಅಭ್ಯರ್ಥಿಯ ವಯಸ್ಸು 20 ವರ್ಷ ಮೀರಿರಬಾರದು.
    ಬೋಧನಾ ಮಾಧ್ಯಮ: ಪಶುಸಂಗೋಪನಾ ಡಿಪ್ಲೋಮಾ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ನಡೆಸಲಾಗುವುದು.
    ಶಿಷ್ಯವೇತನ : ಪ್ರವೇಶ ಪಡೆದ ಎಲ್ಲಾ ಅಭ್ಯರ್ಥಿಗಳಿಗೆ ರೂ 1000/- ಗಳ ಮಾಸಿಕ ಶಿಷ್ಯ ವೇತನವನ್ನು ವ್ಯಾಸಂಗದ ಅವಧಿಯಲ್ಲಿ ನಿಯಮಾನುಸಾರ ನೀಡಲಾಗುವುದು.
    ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಡಕಗಳು: ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ಜಾಲತಾಣ (www.kvafsu.edu.in) ದಲ್ಲಿ ದಿನಾಂಕ 03.09.2021 ರಿಂದ ಪಡೆಯಬಹುದು.
    ಅರ್ಜಿಯೊಂದಿಗೆ ಡಿಡಿ ಒರಿಜಿನಲ್ ಯನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು. ಡಿಡಿ ಲಗತ್ತಿಸದ ಅರ್ಜಿಯನ್ನು ತಿರಸ್ಕರಿಸಲಾಗುವುದು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ