ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಸ್ ಎಂ ಸಮುದಾಯ ರೇಡಿಯೋ ಕೇಂದ್ರ ಆರಂಭಿಸಲು ಕೇಂದ್ರ ದೂರಸಂಪರ್ಕ ಇಲಾಖೆ ಅನುಮತಿ ನೀಡಿದೆ ಪರಿಸರ ಅಧ್ಯಯನದ ಕೇಂದ್ರದ ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್ ಮೆಂಟ್ ಸೊಸೈಟಿಯಿಂದ ನಡೆಸಲಾಗುವ ಈ ಕೇಂದ್ರಕ್ಕೆ ರೇಡಿಯೋ ಶಿವಮೊಗ್ಗ 90.8 ಎಂದು ನಾಮಕರಣ ಮಾಡಲಾಗುವುದು.6ತಿಂಗಳೊಳಗೆ ಪ್ರಸಾರ ಆರಂಭಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ ಆದರೆ 4ತಿಂಗಳಲ್ಲೇ ಪ್ರಚಾರ ಆರಂಭಿಸಲಾಗುವುದು. ಕೃಷಿ ಕಾಲೇಜು ಸಮೀಪದ ರತ್ನಾಕರ ನಗರದಲ್ಲಿ ರೇಡಿಯೋ ಕೇಂದ್ರ ಕಾರ್ಯನಿರ್ವಹಿಸಲಿದೆ ಪ್ರತಿ ದಿನ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ಕಾರ್ಯಕ್ರಮ ಪ್ರಸಾರ ಮಾಡಲಾಗುವುದು. ಜಿಲ್ಲೆಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುವುದು ಧ್ವನಿಯಿಲ್ಲದವರ ಪಾಲಿಗೆ ಧ್ವನಿಯಾಗಿ ಕೆಲಸ ಮಾಡುವುದು ನಮ್ಮ ಗುರಿಯಾಗಿದೆ. ಶಿವಮೊಗ್ಗ ಕೇಂದ್ರವನ್ನಾಗಿಸಿಕೊಂಡು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೇಡಿಯೋ ಕಾರ್ಯಕ್ರಮಗಳನ್ನು ಅಲಿಸಬಹುದು. ವರ್ಷದಲ್ಲಿ ದಿನ ಮೂವತ್ತು ನಿಮಿಷದ ಕಾರ್ಯಕ್ರಮವನ್ನು ಎಫ್ ಎಂ ಮೂಲಕ ಉಚಿತವಾಗಿ ಪ್ರಸಾರ ಮಾಡಲಾಗುವುದು ಎಂದು ಜಿ ಎಲ್ ಜನಾರ್ದನ್ ತಿಳಿಸಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ