• ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕರ ನಿರ್ದೇಶಕರ ಹುದ್ದೆಗಳಿಗೆ ಪ್ರತ್ಯೇಕವಾಗಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ರಾಜ್ಯ ಸರ್ಕಾರದ ನಿಯಮ ಇದ್ದರೂ ಸ್ವ ಹಿತಕೋಸ್ಕರ ಈ 2ಇಲಾಖೆಯ ಅಧಿಕಾರವನ್ನು ಕೆಎಎಸ್ ಅಧಿಕಾರಿಯಾದ ಒಂದೇ ವ್ಯಕ್ತಿಗೆ ನೀಡಿ ಶಿವಮೊಗ್ಗ ಜನರಿಗೆ ಅನ್ಯಾಯ ಮಾಡಿರುತ್ತಾರೆ.
  • ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ನಗರದ ಕೆಲವು ವಾರ್ಡ್ ಗಳಲ್ಲಿ ಸುಮಾರು 3ವರ್ಷಗಳಿಂದ ಹಲವು ಕಾಮಗಾರಿಗಳು ನಡೆಯುತ್ತಿದ್ದು ಇದಕ್ಕಾಗಿ 1.485 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.ಕಾಮಗಾರಿಯಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದ್ದು ಸದರಿ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ನಿಕಿತಾ ಮುಖಾಂತರ ಮನವಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲ.
    *ಶಿವಮೊಗ್ಗ ಮಹಾನಗರ ಪಾಲಿಕೆಯ ಆಸ್ತಿಗಳು ಎಂದಿಗೂ ಕಬಳಿಕೆ ಹಾಗೂ ಒತ್ತುವರಿ ಆಗುತ್ತಲೇ ಇದೆ ಈ ಹಿಂದೆ 1ಚದರ ಅಡಿಗೆ ನೂರು ಇದ್ದ ಜಾಗಗಳು ಈಗ 3ಸಾವಿರದಿಂದ 5ಸಾವಿರ ಗಳ ವರೆಗೆ ಏರಿಕೆಯಾಗಿದೆ.
  • ವಿನೋಬಾನಗರ ನೂರು ಅಡಿ ರಸ್ತೆಯ ಶಿವಾಲಯ ದೇವಸ್ಥಾನದ ಪಕ್ಕದಲ್ಲಿ ಸುಮಾರು ಎಪ್ಪತ್ತೆರಡು ಮಳಿಗೆಗಳ ವಾಣಿಜ್ಯ ಕಟ್ಟಡವನ್ನು ವಿನೋಬಾನಗರ ಪೊಲೀಸ್ ಚೌಕಿ ಹಾಗೂ ಲಕ್ಷ್ಮೀ ಟಾಕೀಸ್ ಸರ್ಕಲ್ ನಲ್ಲಿ ರಸ್ತೆ ವ್ಯಾಪಾರಿಗಳಾದ ಹೂವು ಹಣ್ಣು ತರಕಾರಿ ಮುಂತಾದ ಚಿಲ್ಲರೆ ವ್ಯಾಪಾರಿಗಳು ನಿರ್ಮಾಣ ಮಾಡಿ 7ವರ್ಷ ಕಳೆದರೂ ಇಂದಿಗೂ ಕೂಡ ಬಾಡಿಗೆಗೆ ನೀಡದೆ ಕೋಟ್ಯಂತರ ರೂಪಾಯಿಗಳ ಬಾಡಿಗೆ ರೂಪದಲ್ಲಿ ಬರುವ ಆದಾಯವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ.
  • ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಸಾರ್ವಜನಿಕರು ನಿರಾಳವಾಗಿ ಗಾಂಧಿ ಬಜಾರ್ ರಸ್ತೆಗೆ ಹೋಗಲು ಪರ್ಯಾಯ ಸುರಂಗ ಮಾರ್ಗವನ್ನು ಮಾಡಿದ್ದು ಸದರಿ ಸುರಂಗ ಮಾರ್ಗಕ್ಕೆ ಸುಮಾರು ಒಂದೂವರೆ ಕೋಟಿ ರುಪಾಯಿಗಳಷ್ಟು ಹಣವನ್ನು ಖರ್ಚು ಮಾಡಿ 5ವರ್ಷ ಕಳೆದರೂ ಸುರಂಗ ಮಾರ್ಗವನ್ನು ಸಾರ್ವಜನಿಕರ ಉದ್ದೇಶಕ್ಕಾಗಿ ಬಳಸದೆ ಪಾಳಾಗಿ ಬಿದ್ದಿರುವುದು ನೋಡಿದರೆ ಜನಸಾಮಾನ್ಯರ ತೆರಿಗೆ ಹಣದ ಬಗ್ಗೆ ಅಧಿಕಾರಿ ವರ್ಗ ನಾಗರಿಕರು ಅರ್ಥಮಾಡಿಕೊಳ್ಳಬೇಕಾಗುತ್ತದೆ.
  • ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೆಯುಡಬ್ಲ್ಯುಎಸ್ ಡಿ ಬೋರ್ಡ್ ನಿಂದ 24*7 ನೀರು ಸರಬರಾಜು ಮಾಡುವ ಯೋಜನೆಯಲ್ಲಿ ಹಲವಾರು ಅಕ್ರಮಗಳು ಕಂಡು ಬಂದಿದ್ದು ಸದರಿ ಕಾಮಗಾರಿಗಳಲ್ಲಿ ಬಳಸಿರುವ ನೀರಿನ ಪೈಪು ಹಾಗೂ ಅದಕ್ಕೆ ಸಂಬಂಧಪಟ್ಟ ಉಪಕರಣಗಳು ಕಳಪೆ ಗುಣಮಟ್ಟದ ಇರುವುದು ಕಂಡುಬಂದಿದೆ.
  • ಶಿವಮೊಗ್ಗ ಪಾಲಿಕೆಯ ವ್ಯಾಪ್ತಿಯಲ್ಲಿ ದಿನೇದಿನೆ ಪಾರ್ಕಿಂಗ್ ಸಮಸ್ಯೆ ಅತಿರೇಕಕ್ಕೆ ಹೋಗಿರುವುದು ಯಾವುದೇ ರೀತಿಯಲ್ಲಿ ವೈಜ್ಞಾನಿಕವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ವಾಣಿಜ್ಯ ಕಟ್ಟಡಗಳಲ್ಲಿ ನಿರ್ಮಿಸಿದು ಪಾರ್ಕಿಂಗ್ ಬಳಕೆಗೆ ಉಪಯೋಗಿಸದೆ ಅಕ್ರಮವಾಗಿ ಬಾಡಿಗೆ ನೀಡುತ್ತಿದ್ದಾರೆ.
    *ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಡಿಯಲ್ಲಿ ರಸ್ತೆಯ ಒತ್ತುವರಿಯನ್ನು ತೆರವುಗೊಳಿಸದೆ ಅಗಲವಿರುವ ರಸ್ತೆಗಳಲ್ಲಿ ವೈಜ್ಞಾನಿಕವಾಗಿ ಕಿರಿದು ಮಾಡುವುದರಿಂದ ವಾಹನಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕ ಒತ್ತಡಕ್ಕೆ ಅನನುಕೂಲವಾಗಿದೆ.
  • ಮಹಾನಗರ ಪಾಲಿಕೆಯ ಆಡಳಿತ ವೈಖರಿ ಪಾರದರ್ಶಕ ವಾಗಬೇಕಾದರೆ ಪಾಲಿಕೆಗೆ ವಹಿವಾಟುಗಳ ಗಣಿ ಕರೀನಾ ಆಗಬೇಕೆಂದು ಬಹುವರ್ಷಗಳ ಸಾರ್ವಜನಿಕರ ಕೂಗಾಗಿದೆ ಪಾಲಿಕೆಯ ಹಿಂದಿನ ಆಯುಕ್ತರಾದ ಶ್ರೀ ರವಿಯವರು ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖಾತಾ ಬದಲಾವಣೆ ಹುಟ್ಟು ಸಾವುಗಳ ಪ್ರಮಾಣ ಪತ್ರ ಕಂದಾಯ ಪಾವತಿ ಮುಂತಾದವುಗಳ ಬಗ್ಗೆ ಮಾಹಿತಿ ಹಾಗೂ ಅದರ ಪ್ರತಿಯನ್ನು ಪಡೆಯಲು ವೈಜ್ಞಾನಿಕ ಕಾರ್ಯತಂತ್ರಗಳನ್ನು ರೂಪಿಸಿದರು.
  • ಶಿವಮೊಗ್ಗ ನಗರವು ಅತಿ ವೇಗದಲ್ಲಿ ಬೆಳೆಯುತ್ತಿರುವುದರಿಂದ ಹಲವು ರೀತಿಯ ಅಕ್ರಮ ಚಟುವಟಿಕೆಗಳಾದ ಜೂಜಾಟ ಸರಕಳ್ಳತನ ದರೋಡೆ ಹಾಗೂ ಶಾಲಾ ಕಾಲೇಜು ಆವರಣಗಳಲ್ಲಿ ಮಾದಕ ವಸ್ತುಗಳ ಸೇವನೆ ಮುಂತಾದ ಸಮಾಜ ವಿರೋಧಿ ದುರಂತಗಳು ನಡೆದ ತರುವುದಕ್ಕೆ ಕಠಿಣವಾಗಿ ಹಾಕಲು ಶಿವಮೊಗ್ಗ ನಗರದ ಎಲ್ಲ ರಸ್ತೆಗಳಲ್ಲಿ ಹಾಗೂ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡದೇ ಇರುವುದರಿಂದ ಹಾಗೂ ಇರುವಂತಹ ಸಿಸಿ ಕ್ಯಾಮೆರಾಗಳ ನಿರ್ವಹಣೆ ಮಾಡದೆ ವಿಶ್ಲೇಷಿಸಲಾಗುವುದು.
  • ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ರಾಜಕಾಲುವೆಗಳಲ್ಲಿ ಸುಮಾರು ವರ್ಷಗಳಿಂದ ಹೂಳು ತುಂಬಿಕೊಂಡಿದ್ದು ಸದರಿ ಕಾಲುವೆಗಳ ಹೂಳು ತೆಗೆಯುವ ಯೋಜನೆಯಲ್ಲಿ ಪ್ರತಿ ವರ್ಷ ಲಕ್ಷಾಂತರ₹ಖರ್ಚು ಮಾಡುತ್ತಿದ್ದರೂ ಹೂಳು ಮಾತ್ರ ಆಗಿರುತ್ತದೆ ಆದರೆ ನಮ್ಮ ತೆರಿಗೆ ಹಣ ಯಾವ ಮಟ್ಟಿಗೆ ಬಳಕೆ ಆಗುತ್ತಿದೆ ಎಂದು ನಾವುಗಳು ಅರ್ಥಮಾಡಿಕೊಳ್ಳಬೇಕಾಗಿದೆ ತಮ್ಮ ಸಮಿತಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದೆ ಅಧಿಕಾರಿಗಳು ಪ್ರತಿನಿಧಿಗಳು ನಿಲ್ಲಿಸುತ್ತಿದ್ದಾರೆ. ನಮಗೆ ಅನಾರೋಗ್ಯವಾದರೆ ವೈದ್ಯರಿದ್ದಾರೆ ಹಣ ಕಳೆದು ಹೋದರೆ ಮತ್ತೆ ದುಡಿದು ಸಂಪಾದಿಸಬಹುದು ದುರಭ್ಯಾಸಗಳಿಂದ ಹಾಳಾದರೂ ಛಲದಿಂದ ಮೇಲೇಳಬಹುದು ಆದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗುವುದು ಸತ್ಯ ಆದ್ದರಿಂದ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಅನಿವಾರ್ಯವಾಗುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ