ಬಿಜೆಪಿಯ ಶಾಸಕರಾದ ಸಿಟಿ ರವಿ ಅವರು ಭಾರತದ ಮದ್ರಸ ಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ಎನ್ನುವ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ತೀವ್ರವಾಗಿ ಖಂಡಿಸುತ್ತದೆ. ಸಿಟಿ ರವಿ ಅವರ ಬಾಯಿಂದ ಅಭಿವೃದ್ಧಿಯ ವಿಚಾರವಾಗಲಿ ಶಾಂತಿಯ ವಿಚಾರವಾಗಿ ಸಹೋದರತೆ ವಿಚಾರವಾಗಿ ಬರುವುದಿಲ್ಲ. ಬಾಯಿ ಬಿಚ್ಚಿದರೆ ಇವರು ದರ್ಗಾ ಮಂದಿರ-ಮಸೀದಿ ಮದ್ರಸಾ ಕೋಮುಗಲಭೆ ಇದರಲ್ಲೇ ಇವರು ಕಾಲಕಳೆಯುತ್ತಿದ್ದಾರೆ ಹೊರತು ಅಭಿವೃದ್ಧಿಯ ಕಡೆ ಕೊಂಚವು ಗಮನಹರಿಸುತ್ತಿಲ್ಲ ಇಂತಹ ನೀಚ ಶಾಸಕರನ್ನು ತಾವುಗಳು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ಮನವಿ ಮಾಡುತ್ತದೆ. ಭಾರತದ ಮದ್ರಸ ಗಳಲ್ಲಿ ವಿದ್ಯಾಭ್ಯಾಸ ಪಡೆದಂತಹ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎನ್ನುವ ಮಾತನ್ನು ಇವರು ಮರೆತಿರಬಹುದು ಇವರು ಪಡೆದಂತಹ ಶಿಕ್ಷಣವು ಆರ್ ಎಸ್ ಎಸ್ ಕಚೇರಿಗಳಲ್ಲಿ ಸ್ವಾತಂತ್ರ್ಯ ದಿಂದ ಹಿಡಿದು ಇಲ್ಲಿಯವರೆಗೂ ಭಾರತದ ಧ್ವಜವನ್ನು ಧ್ವಜಾರೋಹಣ ಮಾಡಿರುವುದಿಲ್ಲ ಇಂತಹ ವ್ಯಕ್ತಿಗಳು ನಮ್ಮ ಮದರಸಾಗಳ ಬಗ್ಗೆ ಮಾತನಾಡಲು ಯಾವುದೇ ತರದ ಹಾಕಿಲ್ಲ ಸಿಟಿ ರವಿ ಅವರ ಇಂತಹ ಮಾತುಗಳಿಂದ ಶಾಂತಿ ಭಂಗ ಮಾಡಲು ಪ್ರಯತ್ನಿಸಿದ್ದು ಇಂತಹ ಶಾಸಕರನ್ನು ತಾವು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಬಿಜೆಪಿಯ ಯಾವುದೇ ಶಾಸಕ ಆಗಲಿ ಯಾವುದೇ ವ್ಯಕ್ತಿಯಾಗಲಿ ಇಂತಹ ಮಾತುಗಳನ್ನಾಡಿದರೆ ಅವರ ಮೇಲೆ ಕಠಿಣ ಕ್ರಮವನ್ನು ಜರಗಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ. ಮಹಮ್ಮದ್ ಆರಿಫ್ ಉಲ್ಲಾ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗ ಶಿವಮೊಗ್ಗ
ಮಹಮ್ಮದ್ ನಿಹಾಲ್, ರಹಮತ್ ಉಲ್ಲಾ, ಆಸಿಫ್ ಮಸುದ್, ಅಹಮದ್ ಬೆಗ್,ಇಕ್ಬಾಲ್ ನೆತಜಿ, ಮಜರ್ ಇರಫನ್ ಖಾನ್, ಅಬ್ದುಲ್ಲಾ, ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ