ಕೊರೋನಾದ ತುರ್ತುಪರಿಸ್ಥಿತಿಯಲ್ಲಿ ನಿಮ್ಮ ಪ್ರೀತಿ ದೈರ್ಯ ಆರೈಕೆಯ ಸೇವೆ ನಮ್ಮೂರಿಗೆ ಬೇಕು

ಮನೆ ಕುಟುಂಬ ಮಕ್ಕಳನ್ನು ಬಿಟ್ಟು ಕೊರೋನಾದ ವಿರುದ್ಧ ಹಳ್ಳಿಗಳಲ್ಲಿ ಜನ ಜಾಗೃತಿಯನ್ನು ಮೂಡಿಸುತ್ತಾ, ಸೋಂಕಿತರಿಗೆ ತುರ್ತುಚಿಕಿತ್ಸೆ, ಆರೈಕೆ, ಮುತುವರ್ಜಿ ವಹಿಸುವ ನಿಮ್ಮ ಸೇವೆಗೆ ನಮ್ಮ ನಮನ

 ಲಯನ್ಸ್ ಕ್ಲಬ್ ಆಗುಂಬೆ ದಿನಾಂಕ 24- 5- 2021ರಂದು ಆಗುಂಬೆ ಪ್ರಾಥಮಿಕ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿ ಕರೋನ ಎರಡನೇ ಅಲೆಯ ನಡುವೆ ಆರೋಗ್ಯ ಇಲಾಖೆಯ ಸೇವೆಯ ನೆನೆದು ಧನ್ಯವಾದಗಳನ್ನು ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
   ಲಯನ್ಸ್ ಕ್ಲಬ್ ಆಗುಂಬೆಯ ಕಾರ್ಯದರ್ಶಿ ಅರುಣ್ ಗುಡ್ಡೆಕೇರಿ ಮಾತನಾಡಿ ನಿಮ್ಮ ವಿಶ್ವಾಸಪೂರ್ವಕ ಸೇವೆಗೆ  ಇದು ನಮ್ಮ ಗೌರವಪೂರ್ವಕ ನಮನ. ಕೋವಿಡ್ ಮುಕ್ತ ವ್ಯಾಪ್ತಿಯ ನ್ನಾಗಿ ಮಾಡಲು ನಿಮ್ಮೊಂದಿಗೆ ನಾವಿದ್ದೇವೆ ಎಂದರು .ಅಧ್ಯಕ್ಷ ರಾದ ಸುಧೀಂದ್ರ ಮಲ್ಯ ತುರ್ತುಪರಿಸ್ಥಿತಿ ವಾಹನ ಸೇವೆ ಸಲ್ಲಿಸಲು ಯಾವಾಗಲು ಸಿದ್ಧವಿರುವುದಾಗಿ ಘೋಷಿಸಿದರು. ಆಶಾ  ಕಾರ್ಯಕರ್ತೆ ಅನುಸೂಯ ಲಯನ್ಸ್ ಆರಂಭದಿಂದಲೂ ನಮ್ಮೊಂದಿಗೆ ಅನೇಕ ಸಹಕಾರ ನೀಡಿರುವುದನ್ನು ನೆನಪಿಸಿಕೊಂಡು, ಸ್ಯಾನಿಟೈಸರ್ ,ಪಲ್ಸ್ ಆಕ್ಸಿ ಮೀಟರ್, ಮಾಸ್ಕ್ ಲಯನ್ಸ್ ಸಹಾಯವಾಣಿಯನ್ನು ಆರಂಭಿಸುವುದಕ್ಕೆ ಕೃತಜ್ಞತೆ ಅರ್ಪಿಸಿದರು 
   ಕಾರ್ಯಕ್ರಮದಲ್ಲಿ ಲಯನ್ಸ್ ಮುಖಂಡರಾದ ಮಯೂರ್ ಹೆಗಡೆ ಗುಡ್ಡೆಕೇರಿ ,ಸುದೀಪ್ ಕಾರೆಕುಂಬ್ರಿ, ಶೇಷಾದ್ರಿ ವಿದ್ಯಾರ್ಥ ನಾಲೂರು, ಆಣ್ಣು ಪೂಜಾರಿ ಆಗುಂಬೆ ಮತ್ತು ಆರೋಗ್ಯ ಕೇಂದ್ರ ಸಿಬ್ಬಂದಿ ಆಶಾ ಕಾರ್ಯಕರ್ತರು ಹಾಜರಿದ್ದರು

ವರದಿ ಮಂಜುನಾಥ್ ಶೆಟ್ಟಿ  ಶಿವಮೊಗ್ಗ