ಕೋಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಇರುವುದರಿಂದ ತಹಸೀಲ್ದಾರ್ ನಾಗರಾಜ್ ಅವರು 3ದಿನ ಸಂಪೂರ್ಣ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ . ದಿನಾಂಕ 28/5/2021 ರಂದು ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ 31/5/2021 ರಂದು ಬೆಳಿಗ್ಗೆ 6.00 ಗಂಟೆಯವರೆಗೆ ಶಿವಮೊಗ್ಗ ತಾಲ್ಲೂಕಿನ ಕೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ . ಈ ಆದೇಶವು ದಿನಾಂಕ 28/5/2021 ರಂದು ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ 31/5/2021 ಬೆಳಿಗ್ಗೆ 6.00 ಗಂಟೆಯ ವರೆಗೆ ಜಾರಿಗೊಳಿಸಿದೆ .
ರೂಲ್ಸ್ ಗಳು ಹೇಗಿವೆ ?
1.ಕಾನೂನುಭಂಗ ಉಂಟು ಮಾಡುವ ಉದ್ದೇಶದಿಂದ 3ಮತ್ತು ಮೂರಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಿದೆ.
- ಯಾವುದೇ ಮೆರವಣಿಗೆ ಅಥವಾ ಸಭೆ ಸಮಾರಂಭಗಳನ್ನು ಹಾಗೂ ಇತರ ಸಾರ್ವಜನಿಕ ಸಮಾವೇಶ ಗಳನ್ನು ನಿಷೇಧಿಸಿದೆ
- ಈಗಾಗಲೇ ಸರ್ಕಾರ ಕಾರ್ಯಕ್ರಮಗಳು ಮದುವೆ ಖಾಸಗಿ ಕಾರ್ಯಕ್ರಮಗಳು ನಿಗದಿಯಾಗಿದ್ದಲ್ಲಿ ತಹಸಿಲ್ದಾರ್ ಅನುಮತಿಯಿಲ್ಲದೆ ಮುಂದುವರೆಯ ತಕ್ಕದ್ದಲ್ಲ.
- ಸದರಿ ದಿನಗಳಂದು ಔಷಧಿ ಅಂಗಡಿಗಳು ಆಸ್ಪತ್ರೆ ಅಧಿಕೃತ ಹಾಲು ಕೇಂದ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚುವುದು .
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ