ಫ್ರೆಂಡ್ಸ್ ಸೆಂಟರ್ ನಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕತ ಶ್ರೀಮತಿ ತುಳಸಿ ಅಡಿಗ ರವರಿಗೆ ಸನ್ಮಾನ.
ಶಿಕ್ಷಕ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಮತಿ ತುಳಸಿ ಅಡಿಗ ರವರಿಗೆ ಇಂದು ಬೆಳಿಗ್ಗೆ ಫ್ರೆಂಡ್ಸ್ ಸೆಂಟರ್ ವತಿಯಿಂದ ಸವಳಂಗ ರಸ್ತೆಯಲ್ಲಿ ಇರುವ ರೋಟರಿ ಯುವಕೇಂದ್ರ ದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ತುಳಸಿ ಅಡಿಗ ರವರು ಮಾತನಾಡುತ್ತಾ ” ಶಿಕ್ಷಕ ವೃತ್ತಿ ಸಮಾಜದಲ್ಲಿ ಗೌರವ ಮತ್ತು ಸಮಾಜದ ಮುಂದಿನ ಪೀಳಿಗೆಯನ್ನು ತಿದ್ದಿ ಉತ್ತಮ ವ್ಯಕ್ತಿ ಗಳನ್ನಾಗಿ ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊಂದಿದೆ. ಮಕ್ಕಳ ಮದ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸಲು ತುಂಬಾ ಇಷ್ಟ ಪಟ್ಟು ಈ ಕಾರ್ಯದಲ್ಲಿ ತೊಡಗಿಕೊಂಡಿರುವೆ. ಶಿಕ್ಷಕರು ತಮ್ಮ ಜವಾಬ್ದಾರಿ ಯನ್ನು ಅರಿತು ಮಕ್ಕಳನ್ನು ಸಮಾಜಮುಖಿ ಯಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿ ಕೊಳ್ಳ ಬೇಕಾಗುತ್ತದೆ. ಸಮಾಜದಲ್ಲಿ ಇರುವ ಸಂಘಸಂಸ್ಥೆಗಳ ಸಹಕಾರದೊಂದಿಗೆ ಇಂತಹ ಕಾರ್ಯ ನಡೆಯ ಬೇಕಿದೆ.
ಸಭೆಯಲ್ಲಿ ಫ್ರೆಂಡ್ಸ್ ಸೆಂಟರ್ ನ ಅಧ್ಯಕ್ಷ ವಿ ನಾಗರಾಜ್ ಹಾಗೂ ಕಾರ್ಯದರ್ಶಿ ಆರ್ ಎಸ್ ಗೋಪಾಲಕೃಷ್ಣ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮ ದ ನಿರ್ವಹಣೆ ಯನ್ನು ಸಂಸ್ಥೆಯ ಮಾಜಿ ಅಧ್ಯಕ್ಷ ರಾದ ಜಿ ವಿಜಯ ಕುಮಾರ್ ನಡೆಸಿ ಕೊಟ್ಟರು. ಅಧ್ಯಕ್ಷ ಪೀಠ ದಿಂದ ನಾಗರಾಜ್ ಮಾತನಾಡಿ ಗುರು ತರ ಹೊಣೆಗಾರಿಕೆ ಇರುವ ಶಿಕ್ಷಕರು ಇಂದು ಸಮಾಜಕ್ಕೆ ಅವಶ್ಯಕತೆ ಇದೆ. ಸಾಮಾಜಿಕ ಜೀವನದಲ್ಲಿ ಮಕ್ಕಳನ್ನು ಅಂಕಗಳ ಹಿಂದೆ ಹೋಗದೆ ಜವಾಬ್ದಾರಿ ಹೊರುವಂತ ಪ್ರಜೆಗಳಾನ್ನಾಗಿ ಬೆಳಸುವಂತ ಶಿಕ್ಷಕರು ಬೇಕಾಗಿದೆ ಎಂದು ತಿಳಿಸಿದರು.
ಜಿ ವಿಜಯ ಕುಮಾರ್ ರಿಂದ ಸ್ವಾಗತ ಹಾಗೂ ಸಂಸ್ಥೆಯ ಬಗ್ಗೆ ಪ್ರಸ್ತಾವನೆ ಕೊನೆಗೆ ಜಗನ್ನಾಥ ರವರಿಂದ ವಂದನಾರ್ಪಣೆ ಯೊಂದಿಗೆ ಸಭೆ ಮುಕ್ತಾಯ ವಾಯಿತು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153