ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಭಾರತ ಸೀನಿಯರ್ ಹಾಕಿ ಮಹಿಳಾ ತಂಡದ ಕೋಚ್ ಆಗಿ ನಿಯುಕ್ತಿಗೊಂಡಿರುವ ಬಿ.ಎಸ್. ಅಂಕಿತಾ ಸುರೇಶ್ ಅವರಿಗೆ ಅಭಿನಂದನೆಗಳ ಸುರಿಮಳೆ ಹರಿದುಬಂದಿದೆ. ಅದುವರೆಗೆ ಹಾಕಿ ಕ್ರೀಡಾರಂಗದಲ್ಲಿ ಎಲೆಮರೆಯ ಕಾಯಿಯಂತಿದ್ದ ಅಂಕಿತಾರವರ ಮೇರು ಪ್ರತಿಭೆ ಬೆಳಕಿಗೆ ಬಂದು ಕೊಡಗಿನ ಐಕಾನ್ ಆಗಿದ್ದಾರೆ. ಅಂಕಿತಾರವರು ಮೂಲತಃ ಮಡಿಕೇರಿ ನಗರದ ನಿವಾಸಿಗಳಾಗಿರುವ ಸುರೇಶ್ ಮತ್ತು ಧರ್ಮವತಿ ದಂಪತಿಯ ಪುತ್ರಿ. ವಿದ್ಯಾರ್ಥಿ ದಿಸೆಯಲ್ಲಿ ಅಥ್ಲಿಟಿಕ್ಸ್ ಹಾಗೂ ಹಾಕಿಯ ಮೇಲೆ ಅಂಕುರವಾಗಿದ್ದ ಅಂಕಿತಾರವರ ವಿಶೇಷವಾದ ಆಸಕ್ತಿ, ಕಠಿಣ ಪರಿಶ್ರಮ ಹಾಗೂ ಆಸ್ಥೆಯು ಇಂದು ವಿಶ್ವವೇ ಪಾಲ್ಗೊಳ್ಳಲು ತವಕಿಸುವ ಹಾಗೂ ಈ ಕ್ರಿಡಾಕೂಟದಲ್ಲಿ ಭಾಗವಹಿಸುವುದೇ ಪ್ರತಿಷ್ಠೆ ಎನಿಸಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ತಾಯ್ನಾಡನ್ನು ಪ್ರತಿನಿಧಿಸುವಂತೆ ಮಾಡಿದೆ. ಬೆಳೆದಂತೆಲ್ಲಾ ಹಾಕಿ ಚೆಂಡು ಮತ್ತು ಸ್ಟಿಕ್ ಅಂಕಿತಾರವರ ಒಡನಾಡಿಗಳಾದವು. ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಬೇಕೆನ್ನುವ ಆಧ್ಯಮ್ಯ ಛಲ ಸಾಯಿ ಕ್ರೀಡಾ ತರಬೇತಿ ಶಾಲೆಗೆ ಆಯ್ಕೆಯಾಗುವಂತೆ ಮಾಡಿತು. ಹಾಕಿಯೊಂದಿಗೆ ಅಥ್ಲೀಟಿಕ್ ಪಟು ಕೂಡ ಆಗಿರುವ ಅಂಕಿತಾರವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾಭ್ಯಾಸ :-
ಮಡಿಕೇರಿ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವ್ಯಾಸಂಗ ಮುಗಿಸಿದ ಅಂಕಿತಾ ನಂತರ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಕಾಂ. ಪದವಿಧರೆಯಾದರು. 2014ರಲ್ಲಿ ಮಣಿಪಾಲ್ Institute ನಲ್ಲಿ ಡಿಪ್ಲಮೊ ಇನ್ ಇ-ಫೈನಾನ್ಸ್, 2015ರಲ್ಲಿ ಅಣ್ಣಾಮಲೈ ಯುನಿವರ್ಸಿಟಿಯಲ್ಲಿ ಡಿಪ್ಲಮೋ ಇನ್ ಜಿಮ್ ಇನ್ಸ್ ಸ್ಟ್ರಕ್ಟರ್ ಹಾಗೂ 2016ರಲ್ಲಿ ಇದೇ ಯುನಿವರ್ಸಿಟಿಯಲ್ಲಿ ಎಂ.ಕಾಂ. ಪದವಿಗಳಿಸಿದರು. 2017ರಲ್ಲಿ ಬೆಂಗಳೂರಿನ ನೇತಾಜಿ ಸುಭಾಷ್ ಸದರನ್ ಸೆಂಟರ್ ನಲ್ಲಿ ಸ್ಪೋರ್ಟ್ಸ್ ಕೋಚಿಂಗ್ ನಲ್ಲಿ ಡಿಪ್ಲಮೋ ಪದವಿಯನ್ನು ಮುಡಿಗೇರಿಸಿಕೊಂಡರು.

ಹಾಕಿ ಕೋಚಿಂಗ್ ತರಬೇತಿ
2019ರಲ್ಲಿ ಭುವನೇಶ್ವರದಲ್ಲಿ FIH LEVEL 1, FIH LEVEL -2, ಹಾಗೂ ಹಾಕಿ ಇಂಡಿಯಾ ಲೆವೆಲ್ 2, ಬೆಂಗಳೂರಿನಲ್ಲಿ ಹಾಕಿ ಇಂಡಿಯಾ ಲೆವೆಲ್ 1, 2018ರಲ್ಲಿ ಭುವನೇಶ್ವರದಲ್ಲಿ ಎಫ್.ಐ.ಹೆಚ್. ಹಾಕಿ ಅಕಾಡೆಮಿ ಲೆವೆಲ್ 2 ಟೆಕ್ನಿಕಲ್ ಅಫೀಶಿಯಲ್, ಆಂದ್ರಪ್ರದೇಶದಲ್ಲಿ ಹಾಕಿ ಕ್ಲಿನಿಕ್ ಕೋಚಿಂಗ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಹಾಕಿ ಪಂದ್ಯಾವಳಿಯಲ್ಲಿ ಸಾಧನೆ
2012 ಮತ್ತು 2013ರಲ್ಲಿ ಭೂಪಾಲ್ ನಲ್ಲಿ ನಡೆದ ಸೀನಿಯರ್ ನ್ಯಾಷನಲ್ಸ್ ಹಾಕಿ ಚಾಂಪಿಯನ್ ಶಿಫ್ ನಲ್ಲಿ, 2011ರಲ್ಲಿ ಪಂಜಾಬಿನ ಅಮೃತಸರದಲ್ಲಿ ನಡೆದ ಜೂನಿಯರ್ ನ್ಯಾಷನಲ್ಸ್ ಹಾಕಿ ಚಾಂಪಿಯನ್ ಶಿಫ್ ನಲ್ಲಿ ಭಾಗವಹಿಸಿ ಉತ್ತಮ ಹಾಕಿ ಪ್ರದರ್ಶನವನ್ನು ನೀಡುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದರು. 2011ರಲ್ಲಿ ಕರ್ನಾಟಕದಲ್ಲಿ ಏರ್ಪಟ್ಟ 56ನೇ ಐ.ಹೆಚ್.ಎಫ್. ಸೀನಿಯರ್ ವುಮೆನ್ಸ್ ನ್ಯಾಷನಲ್ ಹಾಕಿ ಚಾಂಪಿಯನ್ ಶಿಫ್ ನಲ್ಲಿ ಮತ್ತು ಆಂಧ್ರ ಪ್ರದೇಶದಲ್ಲಿ ನಡೆದ 5ನೇ ಸೌತ್ ಇಂಡಿಯಾ ಹಾಕಿ ಪಂದ್ಯಾವಳಿಯಲ್ಲಿ ಹಾಗೂ 2013ರಲ್ಲಿ ನ್ಯಾಷನಲ್ಸ್ ಹಾಕಿ ಚಾಂಪಿಯನ್ ಶಿಫ್ ನಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದ್ದರು. 2011 ರಲ್ಲಿ ಕರ್ನಾಟಕದಲ್ಲಿ ನಡೆದ ಆಲ್ ಇಂಡಿಯಾ ಇನ್ವಿಟೇಷನಲ್ ಹಾಕಿ ಟೂರ್ನ್ ಮೆಂಟ್ ಫಾರ್ ವುಮೆನ್ಸ್ ಹಾಕಿ ಪಂದ್ಯಾಟದಲ್ಲಿ ಪರಾಭವಗೊಂಡರಾದರೂ 2013ರಲ್ಲಿ ಏರ್ಪಡಿಸಲಾಗಿದ್ದ ಇದೇ ಹಣಾಹಣಿಯಲ್ಲಿ ತಮ್ಮ ತಂಡವನ್ನು ವಿಜಯಿನ್ನಾಗಿಸಿ ಹಿಂದಿನ ಸೋಲಿನ ಸೇಡನ್ನು ತೀರಿಸಿಕೊಂಡಿದ್ದರು. 2010-11ರಲ್ಲಿ ಇಂಡೋರ್, 2011-12 ರಲ್ಲಿ ಉತ್ತರ ಪ್ರದೇಶದಲ್ಲಿ ಮತ್ತು 2012-13ರಲ್ಲಿ ರಾಜಸ್ಥಾನದಲ್ಲಿ ನಡೆದ ಆಲ್ ಇಂಡಿಯಾ ಯುನಿವರ್ಸಿಟಿ ಹಾಕಿ ಪಂದ್ಯಾವಳಿಯಲ್ಲಿ ತಮ್ಮ ಹಾಕಿ ಕಲಾ ಪ್ರೌಢಿಮೆಯನ್ನು ಮೆರೆದಿದ್ದರು. 2011-12 ರಲ್ಲಿ ತಮಿಳುನಾಡಿನಲ್ಲಿ ಮತ್ತು 2012-13ರಲ್ಲಿ ಕೇರಳದಲ್ಲಿ ಏರ್ಪಟ್ಟ ಸೌತ್ ಝೋನ್ ಇಂಟರ್ ಯುನಿವರ್ಸಿಟಿ ಟೂರ್ನಮೆಂಟ್ ನಲ್ಲಿ ವಿಜಯಮಾಲೆ ಧರಿಸಿದ್ದರು. 2010-11ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಸೌತ್ ವೆಸ್ಟ್ ಝೋನ್ ಇಂಟರ್ ಯುನಿವರ್ಸಿಟಿ ಟೂರ್ನಮೆಂಟ್ ನಲ್ಲಿಯೂ ಕೂಡ ಭಾಗವಹಿಸಿ ಹಾಕಿ ಪ್ರಾಬಲ್ಯತೆಯನ್ನು ಮೆರೆದು, 2010 ಮತ್ತು 2013ರಲ್ಲಿ ಕರ್ನಾಟಕದಲ್ಲಿ ನಡೆದ ಸೌತ್ ಝೋನ್ ಇಂಟರ್ ಟೂರ್ನಮೆಂಟ್ ಫಾರ್ ಗರ್ಲ್ಸ್ ಹಾಕಿ ಪಂದ್ಯಾವಳಿಯಲ್ಲಿಯೂ ಗೆಲುವಿನ ನಗೆಯನ್ನು ಬೀರಿದ್ದರು.

ಅಥ್ಲೆಟಿಕ್ಸ್ ನಲ್ಲಿ
2009ರಲ್ಲಿ ಕೇರಳದ ಎರ್ನಾಕುಲಂ ನಲ್ಲಿ ನಡೆದ 54ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ನಲ್ಲಿ 5000 ಮೀ. ಓಟ, ಮತ್ತು ಅದೇ ವರ್ಷ ಪಂಜಾಬಿನ ಅಮೃತಸರದಲ್ಲಿ ಏರ್ಪಟ್ಟ 55ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ನಲ್ಲಿ 3000 ಮೀ. ಓಟ, ಹಾಗೂ 2009-10ರಲ್ಲಿ ಕರ್ನಾಟಕದ ಹಳಿಯಾಲದಲ್ಲಿ ನಡೆದ ಕರ್ನಾಟಕ ಸ್ಟೇಟ್ ಪ್ರೀ ಯುನಿವರ್ಸಿಟಿ ಅಥ್ಲೆಟಿಕ್ ಮೀಟ್ ನ 3000 ಮೀ. ಓಟದಲ್ಲಿ ಭಾಗವಹಿಸಿದ್ದರು. 2007ರಲ್ಲಿ ಮೈಸೂರಿನಲ್ಲಿ ನಡೆದ Karnataka State Junior & Athletics Championships ನ 3000 ಮೀ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 2008ರಲ್ಲಿ ಮಂಗಳೂರಿನಲ್ಲಿ ಜರುಗಿದ Pre-University State Level Athletics Championships ನಲ್ಲಿ 3000 ಮೀ. ಹಾಗೂ 2009ರಲ್ಲಿ ಹಳಿಯಾಳದಲ್ಲಿ ನಡೆದ Pre-University State Level Athletics Championships ನಲ್ಲಿ 5000 ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. ಅಲ್ಲದೇ 2009ರಲ್ಲಿ ಬೆಂಗಳೂರಿನಲ್ಲಿ ನಡೆದ 21st Karnataka State Junior & senior Athletics Championships ನ 5000 ಮೀ. ವಿಭಾಗದಲ್ಲಿಯೂ ದ್ವಿತೀಯ ಸ್ಥಾನ ಗಳಿಸಿದ್ದರು.

ಕೋಚಿಂಗ್ ಕ್ಷೇತ್ರದಲ್ಲಿ
ತಮಿಳುನಾಡು ಚೆನ್ನೈನ VELAMMAL MATRIC. HR. SEC. SCHOOL ನಲ್ಲಿ ಎರಡು ವರ್ಷ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ (PET) ಅನುಭವ ಗಳಿಸಿರುವ ಅಂಕಿತಾರವರು, 2017ರಲ್ಲಿ ನವದೆಹಲಿಯಲ್ಲಿ ಹಾಕಿ ಇಂಡಿಯಾ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ ಹಮ್ಮಿಕೊಂಡಿದ್ದ Level One Hockey Coaching Course ನಲ್ಲಿ ಪಾಲ್ಗೊಂಡಿದ್ದಾರೆ. 2017ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ Hockey Karnataka women’s team 2nd hockey India 5-A-Side Senior National Championship 2017 ರ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಅದೇ ವರ್ಷ ಜರುಗಿದ Hockey Karnataka women’s team for Bangalore ಕಪ್ ನ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. 2018ರಲ್ಲಿ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದ Hockey Karnataka women’s team 8th Hockey India Junior women National Championship 2018(A Division) ನಲ್ಲಿ ಕೋಚ್ ಆಗಿ ಭಾಗವಹಿಸಿದ್ದರು.
ಅದೇ ವರ್ಷ ಬೆಂಗಳೂರಿನಲ್ಲಿ ನಡೆದ Hockey Karnataka women’s team 3rd Hockey India 5-a-side Senior National Championship 2018 (Women) ನಲ್ಲಿಯೂ ಕೋಚ್ ಆಗಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ (DYES) ಹಾಕಿ ಕೋಚ್ ಆಗಿ ಕರ್ತವ್ಯ ನಿರ್ವಹಿಸಿರುವ ಅಂಕಿತಾ ಅವರು ಪ್ರಸ್ತುತ ಪೊನ್ನಂಪೇಟೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿ (DYES) ತರಬೇತಿದಾರಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಎರಡು ವರ್ಷಗಳಿಂದ ಹಾಕಿ ಇಂಡಿಯಾದ ಸೀನಿಯರ್ ವುಮೆನ್ ಇಂಡಿಯನ್ ತಂಡದ ಕೋಚ್ ಆಗಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ಅಂಪೈರ್ ಆಗಿ ಆಂಕಿತಾ
ಅಂಕಿತಾ ಅವರು ಹಲವಾರು ಹಾಕಿ ಪಂದ್ಯಾವಳಿಯಲ್ಲಿ ಅಂಪೈರ್ ಆಗಿಯೂ ಕಾರ್ಯ ನಿರ್ವಹಿಸಿದ್ದು, 2017ರ Hockey Karnataka League 1 ಹಾಗೂ 2018ರಲ್ಲಿ ನಡೆದ Hockey Karnataka League 1ಲೀಗ್ ಮ್ಯಾಚ್ ಗಳಲ್ಲಿ ಅಂಪೈರ್ ಆಗಿದ್ದರು.
2016ರಲ್ಲಿ ಮಡಿಕೇರಿಯಲ್ಲಿ ನಡೆದ Inter collage tournament ನಲ್ಲಿ, ಅದೇ ವರ್ಷ ಬೆಂಗಳೂರಿನಲ್ಲಿ ನಡೆದ Hockey Karnataka Inter collage tournament 2017 ಮತ್ತು 2018 ರಲ್ಲಿ ಬೆಂಗಳೂರಿನಲ್ಲಿ ನಡೆದ Hockey Karnataka Inter School tournamentನಲ್ಲಿ ಅಂಪೈರ್ ಆಗಿ, 2018ರಲ್ಲಿ ನಡೆದಿರುವ CHARANJIT RAI-25th Nehru Girls Hockey Tournament ನಲ್ಲಿ ಜಡ್ಜ್ ಆಗಿ 2019ರಲ್ಲಿ All India Invitational prize money Women’s Hockey Tournament ನಲ್ಲಿ ಟೆಕ್ನಿಕಲ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಅಂಕಿತಾ ಅವರು ಹಾಕಿ ಕ್ಷೇತ್ರದಲ್ಲಿ ತೋರಿರುವ ಸಾಧನೆಗಾಗಿ ಅವರನ್ನು ಇಂದು ರಾಷ್ಟ್ರದ ಸೀನಿಯರ್ ಮಹಿಳಾ ಹಾಕಿ ತಂಡದ ಕೋಚ್ ನ್ನಾಗಿ ಟೋಕಿಯೋ ಒಲಂಪಿಕ್ಸ್ ಗೆ ನಿಯೋಜಿಸಿರುವುದು ಅವರ ಕ್ರೀಡಾ ಪ್ರತಿಭೆಗೆ ಸಂದ ಮನ್ನಣೆಯಾಗಿದೆ. ಅಂಕಿತಾ ಅವರು ಎರಡು ವರ್ಷಗಳ ಹಿಂದೆ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಹೊನ್ನಂಪಾಡಿ ಸುರೇಶ್ ಕುಶಾಲಪ್ಪರವರನ್ನು ವರಿಸಿದ್ದಾರೆ. ಅಂಕಿತಾ ಸುರೇಶ್ ರವರ ಕೋಚಿಂಗ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಬಂಗಾರದ ಪದಕವನ್ನು ಬಾಚಿಕೊಳ್ಳಲಿ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153