ನಮ್ಮ ರಾಜ್ಯದಲ್ಲಿ NHM ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಆರ್ಯುವೇದ ಡಾಕ್ಟರ್ ಗಳು 1500 ಲ್ಯಾಬ್ ಟೆಕ್ನಿಷಿಯನ್ ಗಳು 1000 ಡಿ ಗ್ರೂಪ್ ನೌಕರರು 4000 ನರ್ಸ್ ಗಳು 8000 ಹಾಗೂ ಇತರೆ ಸಿಬ್ಬಂದಿಗಳು ಸೇರಿ 13000 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರ್ಯುವೇದ ಬಿ ಎ ಎಂ ಎಸ್ ಡಾಕ್ಟರ್ ಗಳಿಗೆ 15000 ರೂ ಉಳಿದ ಎಲ್ಲ ಲ್ಯಾಬ್ ಟೆಕ್ನಿಷಿಯನ್ ಗಳು ನರ್ಸ್ ಗಳು ಡಿ ಗ್ರೂಪ್ ನೌಕರರು ಕೇವಲ 8500 ಗೌರವಧನ ನೀಡುತ್ತಿದ್ದು ಸಂಬಳದಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಲೇಬರ್ ಆಕ್ಟ್ ಪ್ರಕಾರ ಪ್ರತಿಯೊಬ್ಬ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ 14300 ರೂಯಿಂದ 23000 ಇವುಗಳನ್ನು ನೀಡಬೇಕೆಂದು ಸ್ಪಷ್ಟವಾಗಿ ನಿಯಮವಿದೆ. ಆದರೆ ಈ ಕೊರೋನಾ ಸಮಯದಲ್ಲಿ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವಾ ಆರೋಗ್ಯ ಸಿಬ್ಬಂದಿಗಳಿಗೆ ಯಾವುದೇ ಸರ್ಕಾರ ಕೂಡ ಸ್ಪಂದಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಶೇಕಡಾ 80 ರಷ್ಟು ಆರೋಗ್ಯ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಆಗಿ ಚೇತರಿಸಿಕೊಂಡಿರುತ್ತಾರೆ. ಆದ್ದರಿಂದ ಮಾನ್ಯರಾದ ತಾವುಗಳು ಈ ಮೇಲ್ಕಂಡ ಎಲ್ಲಾ ಆರೋಗ್ಯ ಸಿಬ್ಬಂದಿಗಳಿಗೆ ಸೇವೆ ಖಾಯಂಗೊಳಿಸಿ ಆರ್ಯುವೇದ (ಬಿಎಎಂಎಸ್) ಡಾ. 30000 ಉಳಿದ ಎಲ್ಲ ಆರೋಗ್ಯ ಸಿಬ್ಬಂದಿಗಳಿಗೆ ಕನಿಷ್ಠ 14300 ಇಂದ 23000 ರುಾ ವೇತನವನ್ನು ನೀಡಿ ಅವರ ಸೇವೆಯನ್ನು ಗೌರವಿಸಬೇಕಾಗಿ ತಮ್ಮಲ್ಲಿ ವಿನಯ ಪೂರ್ವಕವಾಗಿ ನಮ್ಮ ಪಕ್ಷದ ವತಿಯಿಂದ ಕೇಳಿಕೊಳ್ಳುತ್ತೇವೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153