ಶಿವಮೊಗ್ಗ ನಗರದ ಡಿವಿಎಸ್ ಅಂಗ ಸಂಸ್ಥೆಯಾದ ಡಿವಿಎಸ್ ಪದವಿಪೂರ್ವ ಕಾಲೇಜು 1999-2001 ನೇ ಬ್ಯಾಚಿನ ವಿದ್ಯಾರ್ಥಿ ಶ್ರೀಯುತ ಎಲ್. ವೈ ಸುಹಾಸ್ ಅಧಿಕಾರಿಯಾಗಿರುವ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಬೆಳ್ಳಿ ಪದಕವನ್ನು ಪಡೆದು ದೇಶಕ್ಕೆ ಹಾಗೂ ಡಿವಿಎಸ್ ಸಂಸ್ಥೆಗೂ ಕೀರ್ತಿ ತಂದಿರುತ್ತಾರೆ. ಡಿವಿಎಸ್ ಪದವಿಪೂರ್ವ ಕಾಲೇಜು ವತಿಯಿಂದ ಸುಹಾಸ್ ಮತ್ತು ತರಬೇತುದಾರ ಸತ್ಯನಾರಾಯಣ್ ಅವರ ವಿಶೇಷ ಸಾಧನೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲರಲ್ಲೂ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಪ್ರೋತ್ಸಾಹ ನೀಡಿದಾಗ ಮಾತ್ರ ಪ್ರತಿಭೆ ಬೆಳಗಲು ಸಾಧ್ಯ ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮದಿಂದ ಅದನ್ನು ಸಾಧಿಸುವ ಛಲ ಹೊಂದಿದಾಗ ಎಲ್ಲ ಕ್ಷೇತ್ರದಲ್ಲೂ ಯಶಸ್ಸುಗಳು ಸಾಧ್ಯ. ಶಿವಮೊಗ್ಗದ ಡಿವಿಎಸ್ ಕಾಲೇಜು ಹಳೆ ವಿದ್ಯಾರ್ಥಿ ಎಂಬುದು ವಿಶೇಷ ಇವರ ಪ್ರತಿಭೆ ಕ್ರೀಡೆಗೆ ಮಾತ್ರ ಸೀಮಿತವಾಗಿಲ್ಲ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಡಾ. ಸತೀಶ್ ಕುಮಾರ್ ಶೆಟ್ಟಿ ,ಎಸ್. ರಾಜಶೇಖರ್ ಎ.ರಾಜಶೇಖರ್ , ಡಾ.ವೆಂಕಟೇಶ್, ಎಸ್ .ಪಿ ದಿನೇಶ್ ಉಪನ್ಯಾಸಕ ಕೆ .ಭಾಸ್ಕರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153