ಈ ದೇಶದ ಮೂಲನಿವಾಸಿ ಶೂದ್ರರಿಗೆ ಜ್ಯೋತಿಬಾಪುಲೆ ಸಾವಿತ್ರಿ ಬಾಫುಲೆ ಮತ್ತು ಶಾಹುಮಹಾರಾಜಂತಹ ಹೋರಾಟದ ಫಲವಾಗಿ ವಿದ್ಯೆಯ ಅವಕಾಶ ದೊರಕಿ ಶಾಲೆಗಳ ಬಾಗಿಲು ತೆರೆಯಿತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶಿಕ್ಷಣವನ್ನು ಮೂಲಭೂತ ಹಕ್ಕಿನ ಕಾನೂನಾಗಿ ಸಂವಿಧಾನದಲ್ಲಿ ಅಳವಡಿಸಿದ್ದರಿಂದ ಇಂದು ಎಲ್ಲರೂ ಶಿಕ್ಷಣವನ್ನು ಪಡೆಯುವಂತಾಗಿದೆ. ಸಂವಿಧಾನ ವಿರೋಧಿಗಳು ಇಂತಹ ಸಮಯದಲ್ಲಿ ದಲಿತರ ಹಕ್ಕುಗಳನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ 2ವರ್ಷಗಳಿಂದ ಪ್ರಕೃತಿಯ “ಕೊರೋನಾ” ರೂಪದಲ್ಲಿ ಶಾಲೆಯನ್ನು ದೂರ ಇಟ್ಟರೆ ರಾಜ್ಯಸರ್ಕಾರ ಇದನ್ನೇ ನೆಪ ಮಾಡಿ ದಲಿತ ವಿದ್ಯಾರ್ಥಿಗಳ ಅವಕಾಶವನ್ನೇ ಕಿತ್ತುಕೊಂಡಿದೆ.ಆದೇಶ ಸಂಖ್ಯೆ ಸಕಇ240 ಪಕವಿ 2017 ಬೆಂಗಳೂರು ದಿನಾಂಕ 22/06/2017 ರಂತೆ ರಾಜ್ಯದಲ್ಲಿ ಗುರುತಿಸಲಾಗಿರುವ ಪ್ರತಿಷ್ಠಿತ ಶಾಲೆಗಳಿಗೆ ಪ್ರತಿಭಾವಂತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಪ್ರಸ್ತುತ 2021-22 ನೇ ಶೈಕ್ಷಣಿಕ ವರ್ಷದಲ್ಲಿ 1ಸಾವಿರ ಪರಿಶಿಷ್ಟಜಾತಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರವೇಶಾತಿ ಕಲ್ಪಿಸುವಂತೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆದರೆ 2020-21 ನೇ ಶೈಕ್ಷಣಿಕ ವರ್ಷದಲ್ಲಿ ಕೋವಿಡ್ -19 ಅನ್ವಯ ಕೊರೋನಾ ನೆಪದಲ್ಲಿ ತಡೆಹಿಡಿದು 2021-22 ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಿರುವುದು ದಲಿತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಾಡಿದ ಮೋಸವಾಗಿದೆ. ಆದ್ದರಿಂದ ಮಾನ್ಯ ಶಿಕ್ಷಣ ಸಚಿವರು ತಕ್ಷಣ ಕೊರೋನಾ ನೆಪವೊಡ್ಡಿ ತಡೆಹಿಡಿದಿ, 2020-21 ನೇ ಸಾಲಿನ ಹಿಂಬಾಕಿಯನ್ನು ಸೇರಿಸಿ ಪ್ರತಿಷ್ಠಿತ ಶಾಲೆಗಳಿಗೆ ಪ್ರತಿಭಾವಂತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರವೇಶಾತಿ ಕಲ್ಪಿಸುವಂತೆ ಸಮಿತಿಯು ಈ ಮೂಲಕ ಒತ್ತಾಯಿಸುತ್ತದೆ . ಈ ಸಂದರ್ಭದಲ್ಲಿ ಕೆ ಟಿ ರಮೇಶ್ ಜಿಲ್ಲಾ ಸಂ.ಸಂಚಾಲಕರು, ದಲಿತ ವಿದ್ಯಾರ್ಥಿ ಒಕ್ಕೂಟ , ಗೋವಿಂದರಾಜು ಜಿಲ್ಲಾ ಪ್ರಧಾನ ಸಂಚಾಲಕರು ದಲಿತ ವಿದ್ಯಾರ್ಥಿ ಒಕ್ಕೂಟ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153