ಇಂದು ಶಿವಮೊಗ್ಗದಲ್ಲಿ ಜಿಲ್ಲಾಡಳಿತದ ವತಿಯಿಂದ ಗಣೇಶ ಹಬ್ಬದ ಆಚರಣೆಯ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಗಣೇಶೋತ್ಸವ ಸಮಿತಿ ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿತ್ತು.
ಸಭೆಯ ಮುಖ್ಯಾಂಶಗಳು
ಸಾರ್ವಜನಿಕರ ಅಹವಾಲು ಗಳು
ಮಹಾನಗರ ಪಾಲಿಕೆಯಲ್ಲಿ ಸರಿಯಾದ ಮಾಹಿತಿ ನೀಡುತ್ತಿಲ್ಲ .
ವಾರ್ಡಿಗೆ 1ಗಣಪತಿ ಬೇಡ ಇಪ್ಪತ್ತೈದು ಮೂವತ್ತು ವರ್ಷದಿಂದ ಇಡುತ್ತಿರುವ ಗಣಪತಿಯನ್ನು ನಿಲ್ಲಿಸುವುದು ಸರಿಯಲ್ಲ.
ಗಣೇಶ ಪೆಂಡಾಲ್ ಹತ್ತಿರ ವ್ಯಾಕ್ಸಿನೇಷನ್ ಡ್ರೈವ್ ಮಾಡುವುದರಿಂದ ಜನಜಂಗಳು ಹೆಚ್ಚಾಗಬಹುದು.
ಪ್ರಸಾದ ವಿನಿಯೋಗಕ್ಕೆ ಅನುಮತಿ ಬೇಕು.
ಮನೆಯಲ್ಲಿ ಕೂರಿಸುವ ಗಣಪತಿಗೆ ಎತ್ತರದ ಮಿತಿ ಸರಿಯಲ್ಲ.
ಮೆರವಣಿಗೆಯಲ್ಲಿ ವಾದ್ಯಕ್ಕೆ ಅನುಮತಿ ನೀಡಬೇಕು.
ಎಲ್ಲಾ ತಾಲ್ಲೂಕು ವ್ಯಾಪ್ತಿಯಲ್ಲಿ ಸಿಂಗಲ್ ವಿಂಡೋ ಸ್ಥಾಪಿಸಬೇಕು.
ರಾಜಕೀಯ ಬೆಂಬಲವಿರುವ ರಿಗೆ ಗಣಪತಿ ಕೂರಿಸಲು ಆದ್ಯತೆ ನೀಡುತ್ತಿರುವುದನ್ನು ತಡೆಯಬೇಕು.
ಸಾರ್ವಜನಿಕರ ಅಹವಾಲನ್ನು ಕೇಳಿದ ನಂತರ ಜಿಲ್ಲಾಧಿಕಾರಿಗಳು ಕೆಳಗಿನ ಮಾರ್ಗಸೂಚಿಗಳಂತೆ ಗಣೇಶೋತ್ಸವ ಆಚರಿಸಲು ಮನವಿ ಮಾಡಿಕೊಂಡರು.
ಜಿಲ್ಲಾ ರಕ್ಷಣಾಧಿಕಾರಿಗಳ ಪರಿಮಿತಿಯಲ್ಲಿ ಸಿಂಗಲ್ ವಿಂಡೋ ಮಾಡಿ ಎಲ್ಲ ಅನುಮತಿಗಳು ಒಂದೇ ಕಡೆ ಸಿಗುವಂತೆ ಮಾಡಲಾಗುವುದು .
ಗಣೇಶೋತ್ಸವದಲ್ಲಿ ಮೆರವಣಿಗೆಗೆ ಅವಕಾಶವಿಲ್ಲ.
ಧ್ವನಿವರ್ಧಕ ಬಳಸಿ ಭಕ್ತಿಗೀತೆಗಳನ್ನು ಹಾಕಲು ಆಸ್ಪದ.
ಪೆಂಡಾಲ್ ಗಳು ಕರೋನ ಆಗದಂತೆ ಹಾಟ್ ಸ್ಪಾಟ್ ಆಗದಂತೆ ಸಮಿತಿಯವರು ಜಾಗ್ರತೆ ವಹಿಸಬೇಕು .
ಎಲ್ಲ ಪೆಂಡಾಲ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲೇಬೇಕು.
ಮನೆಯಲ್ಲಿ ಇಟ್ಟಿರುವ ಗಣಪತಿಗಳಿಗೆ ವಿಸರ್ಜನೆ ಮಾಡಲು ಮಹಾನಗರ ಪಾಲಿಕೆಯಿಂದ ಪ್ರತಿ ವಾರ್ಡಿನಲ್ಲೂ ವಾಹನ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕ ಗಣಪತಿಗಳನ್ನು ವಿಸರ್ಜಿಸಲು ಮೂವತ್ತು ಜಾಗರಣ ನಿಗದಿಗೊಳಿಸಲಾಗಿದೆ ಎಂದವರು ತಿಳಿಸಿದರು. ಗಣೇಶೋತ್ಸವವನ್ನು ಹಬ್ಬದ ವಾತಾವರಣದಲ್ಲಿ ಆಚರಣೆ ಶುರು ಮಾಡಿದ್ದೀರ ಎಲ್ಲಾ ಸಮಿತಿಯವರು ಹಬ್ಬದ ವಾತಾವರಣದಲ್ಲಿ ಆಚರಣೆಯನ್ನು ಮುಗಿಸಬೇಕು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗ್ರತೆ ವಹಿಸಬೇಕು ಎಂದು ಕಿವಿಮಾತು ಹೇಳಿದರು .
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಲಕ್ಷ್ಮಿ ಪ್ರಸಾದ್, ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್ ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ಚಿದಾನಂದ ವಟಾರೆ ರವರು ಉಪಸ್ಥಿತರಿದ್ದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
