ಕರ್ನಾಟಕದಲ್ಲಿ ಶ್ರೀ ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ದೇಶದಲ್ಲಿ ಸರ್ವೋಚ್ಛ ನ್ಯಾಯಲಯ ಇರುವುದು ಒಂದೇ. ಅದರ ಮುಖ್ಯ ನ್ಯಾಯಮೂರ್ತಿಗಳು ಭಾರತದ ಸರ್ಕಾರದ ಸುಗ್ರೀವಾಜ್ಞೆ ಹಾಗೂ ರೈತರು ನಡೆಸುತ್ತಿರುವ ಹೋರಾಟವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆಗಳನ್ನು ತಡೆಹಿಡಿಯುವಂತೆ ನಿರ್ದೇಶನ ನೀಡಿತ್ತು. ಸರ್ವೋಚ್ಚ ನ್ಯಾಯಾಲಯ ಒಂದು ವಿಷಯಕ್ಕೆ ಸಂಬಂಧ ಪಟ್ಟಂತೆ ಒಂದೇ ನಿರ್ದೇಶನವನ್ನು ಸರ್ಕಾರಗಳಿಗೆ ನೀಡಿದ ಮೇಲೆ ಅದನ್ನು ಪಾಲನೆ ಮಾಡುವುದು ಸರ್ಕಾರದ ಕರ್ತವ್ಯ ಆಗಿರುತ್ತದೆ. ರಾಜ್ಯದಲ್ಲಿ ಜಾರಿಗೊಳಿಸಿರುವ ಭೂ ಸುಧಾರಣಾ ಕಾಯಿದೆ ಕೃಷಿ ಮಾರುಕಟ್ಟೆ ಕಾಯಿದೆ ಭೂ ಸ್ವಾಧೀನ ಕಾಯಿದೆ 79A,B ಎಲ್ಲವನ್ನು ಮುಖ್ಯಮಂತ್ರಿಗಳು ಕಾನೂನು ಪಾಲನೆ ಮಾಡಿ ಈ ಕಾಯ್ದೆಗಳನ್ನು ತಡೆಹಿಡಿಯಬೇಕು ಮತ್ತು ಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಕಾಯಿದೆಗಳನ್ನು ಕೈ ಬಿಡಬೇಕೆಂದು ಒತ್ತಾಯಿಸಿ ವಿಧಾನಸಭೆ ಅಧಿವೇಶನದ ಮೊದಲನೆಯ ದಿನ ಬೆಂಗಳೂರಿನಲ್ಲಿ ವಿಧಾನಸೌಧ ಮುತ್ತಿಗೆ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ.ಇದಕ್ಕೂ ಮುಂಚೆ ಸರ್ಕಾರ ತಮ್ಮ ನಿರ್ಧಾರವನ್ನು ಪ್ರಕಟಿಸಬೇಕು. ನಮ್ಮ ಕಠಿಣ ಪರಿಶ್ರಮ ಮತ್ತು ಶ್ರಮಕ್ಕಾಗಿ ನಾವು ಕೇವಲ ನ್ಯಾಯಯುತ ಮತ್ತು ಲಾಭದಾಯಕ ಆದಾಯವನ್ನು ಮಾತ್ರ ಕೇಳುತ್ತಿದ್ದೇವೆ ನಮ್ಮ ಉತ್ಪನ್ನಗಳಿಗೆ ಬೆಲೆಯನ್ನು ನಿಗದಿ ಮಾಡುವ ಸಂದರ್ಭ ಬಂದಾಗ ನಾವು ಅಪಾರ ಶೋಷಣೆ ಮತ್ತು ಲೂಟಿಗೆ ಒಳಗಾಗುತ್ತೇವೆ. ಇದರಿಂದಾಗಿ ಕೃಷಿ ನಮಗೆ ನಷ್ಟದ ವೃತ್ತಿಯಾಗಿದೆ. ಮಾವು ವಿಪರೀತ ಸಾಲದಲ್ಲಿದ್ದೇನೆ ಮತ್ತು ಕಳೆದ 30 ವರ್ಷಗಳಲ್ಲಿ 4ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಯ ಮೂಲಕ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಡಾ॥ ಸ್ವಾಮಿನಾಥನ್ ಆಯೋಗದ ಸೂತ್ರವನ್ನು ಬಳಸಿಕೊಂಡು ಕನಿಷ್ಠ ಬೆಂಬಲ ಬೆಲೆ (ಎಂ.
ಎಸ್ .ಪಿ ) C2+50%ಎಂದು ನಿಗದಿಪಡಿಸಬೇಕು ಮತ್ತು ಅಂತಹ ಎಂ ಎಸ್ ಪಿಎ ಯನ್ನು ಎಲ್ಲ ರೈತರಿಗೆ ಕಾನೂನಿನ ಚೌಕಟ್ಟಿನಲ್ಲಿ ಖಾತರಿ ಪಡಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ.ಈ ವಿಚಾರದಲ್ಲಿ ತನ್ನ ಭರವಸೆಗಳು ಮತ್ತು ಬದ್ಧತೆಗಳನ್ನು ಈಡೇರಿಸುವ ಬದಲು ಭಾರತ ಸರ್ಕಾರವು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಸುಳ್ಳು ಹೇಳುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಅತಿವೃಷ್ಟಿಯಿಂದ ಮನೆ ಹಾನಿ ಜನ ಜಾನುವಾರುಗಳ ಮರಣ ಹೊಂದಿವೆ ಲಕ್ಷಾಂತರ ಎಕರೆಯಲ್ಲಿ ಫಸಲು ನಷ್ಟವಾಗಿದೆ ರಸ್ತೆಗಳು ಹಾಳಾಗಿವೆ ಇವೆಲ್ಲವನ್ನು ಗಂಭೀರ ಪ್ರಕರಣಗಳೆಂದು ಪರಿಗಣಿಸಿ ಈಗಿನ ಮಾರ್ಗಸೂಚಿ ಪ್ರಕಾರ ಕೊಡುವ ಪರಿಹಾರ ಕಡಿಮೆಯಾಗಿದ್ದು ನ್ಯಾಯಯುತವಾದ ಪರಿಹಾರ ಕೊಡಬೇಕು. ಈ ಮೇಲ್ಕಂಡ ವಿಚಾರಗಳಿಗೆ ಸಂಬಂಧಿಸಿದಂತೆ ದಿನಾಂಕ :13-09-2021ರ ಸೋಮವಾರ ವಿಧಾನಸೌಧ ಮುತ್ತಿಗೆ ಚಳವಳಿ ಯನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ರೈತರು ಕೃಷಿ ಕೂಲಿ ಕಾರ್ಮಿಕರು ರೈತ ಮಹಿಳೆಯರು ವಿದ್ಯಾರ್ಥಿಗಳು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಈ ಮೂಲಕ ಕೋರುತ್ತೇವೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್ ಶಿವಮೂರ್ತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಬಿ ಜಗದೀಶ್ ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು ಮುಖಂಡರಾದ ಡಿ ಹೆಚ್ ರಾಮಚಂದ್ರಪ್ಪ ಕೆ ರಾಘವೇಂದ್ರ ಸಿ ಚಂದ್ರಪ್ಪ ಜಿಎನ್ ಪಂಚಾಕ್ಷರಿ ಜ್ಞಾ

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153