31 ನೇ ವಾರ್ಡ್ ಗೋಪಿಶೆಟ್ಟಿಕೊಪ್ಪ ವ್ಯಾಪ್ತಿಯಲ್ಲಿ ಬರುವ ಇಲ್ಯಾಜ್ ನಗರದ ಹೃದಯ ಭಾಗವಾದ ನಮ್ಮ ಏರಿಯಾದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿದ್ದು ಮಹಾನಗರ ಪಾಲಿಕೆಯ ಸದಸ್ಯರಾದ ಲಕ್ಷ್ಮಿ ಶಂಕರ್ ನಾಯಕ್ ರವರ ನಿರ್ಲಕ್ಷ್ಯತೆ ಬೇಜವಬ್ದಾರಿ ಉದಾಶಿತನದ ಕಾಮಗಾರಿಯಲ್ಲಿ ತಾರತಮ್ಯ ಮಾಡುತ್ತಿರುವುದರಿಂದ ಇಲ್ಯಾಜ್ ನಗರ 1 ನೇ ತಿರುವಿನಿಂದ ಹಿಡಿದು 12 ನೇ ತಿರುವಿನ 1ನೇ 2ನೇ 3ನೇ ಅಡ್ಡ ರಸ್ತೆಗಳು 31 ನೇ ವಾರ್ಡ್ ಗೋಪಿಶೆಟ್ಟಿಕೊಪ್ಪ ನಿವಾಸಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಮ್ಮ ಇಲ್ಯಾಜ್ ನಗರದಲ್ಲಿ ಯಾವುದೇ ರೀತಿಯ ಸೂಕ್ತವಾದ ಮೂಲಭೂತ ಸೌಲಭ್ಯ ನೀಡದೇ ದಿನನಿತ್ಯ ಕುಡಿಯುವ ನೀರಿನ ಸಮಸ್ಯೆ ರಸ್ತೆಗಳಿಗೆ ಟಾರ್ ಕಾಂಕ್ರೀಟ್ ಇಲ್ಲದೆ ಕೆಸರುಗದ್ದೆ ಗಳಾಗಿದ್ದು ಮಕ್ಕಳು ವೃದ್ಧರು ಮಹಿಳೆಯರು ಸಾರ್ವಜನಿಕರು ಓಡಾಡದ ಹಾಗಾಗಿದೆ. ಯುಜಿಡಿ ಗಳಿಲ್ಲದೆ ಕೆಲವೊಂದು ಕಡೆ ಚರಂಡಿಗಳಿಲ್ಲದೆ ಶೌಚಾಲಯಗಳ ಮೂಲಭೂತ ರಸ್ತೆಗಳ ಮೇಲೆ ಬರುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಕುಡಿಯುವ ನೀರು ಕೇವಲ ಅರ್ಧ ಮುಕ್ಕಾಲು ಗಂಟೆ ಮಾತ್ರ ಬಿಟ್ಟು ನೀರಿಗಾಗಿ ಸಾರ್ವಜನಿಕರು ಪರದಾಡುವ ಹಾಗಾಗಿದೆ ಇಲ್ಯಾಜ್ ನಗರ 7ನೇ ಕ್ರಾಸ್ ನಲ್ಲಿ ಕಳೆದ 1ತಿಂಗಳಿನಿಂದ ಕುಡಿಯುವ ನೀರಿನ ಪೈಪ್ ಒಡೆದು ಹೋಗಿ ನೀರು ಬರುತ್ತಿಲ್ಲ ಅಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ನ್ಯೂಮಂಡ್ಲಿ ಅಥವಾ ಸಿಗೆಹಟ್ಟಿಗೆ ಹೋಗಿ ನೀರು ತರುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿನ ಸ್ಥಳಿಯ ಕಾರ್ಪೊರೇಟ್ ರವರ ಗಮನಕ್ಕೆ ತಂದು ಒಂದು ತಿಂಗಳಾದರೂ ಇವತ್ತು ನಾಳೆಯೆಂದು ಚಾಕ್ ಲೆಟ್ ಕೊಡುತ್ತಿದ್ದಾರೆ. ನಗರದ ಅಡ್ಡರಸ್ತೆಗಳಿಗೆ ಬೀದಿದೀಪಗಳಿಲ್ಲದೆ ಮಹಾನಗರಪಾಲಿಕೆಯ ಸ್ವಚ್ಚತೆ, ಕರ್ಮಚಾರಿಗಳು ಬಾರದೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ ಅಲ್ಪಸಂಖ್ಯಾತರ ಮುಸ್ಲಿಂ ಏರಿಯಾಗಳ ವೀಕ್ಷಣೆ ಮಾಡಿದರೆ ಕೇಂದ್ರ ರಾಜ್ಯ ಸರ್ಕಾರದ ಅನುದಾನಗಳು ಮರೀಚಿಕೆ ಮಾತಾಗಿದೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆ ಆಯುಕ್ತರು ನಗರ ಅಭಿವೃದ್ಧಿ ಪಡಿಸುವ ಸಂಬಂಧಪಟ್ಟ ಸರ್ಕಾರದ ಅಧಿಕಾರಿಗಳು 31 ನೇ ವಾರ್ಡ್ ಇಲ್ಯಾಜ್ ನಗರ ಮತ್ತು ಶಿವಮೊಗ್ಗ ನಗರದ ಅಲ್ಪಸಂಖ್ಯಾತರ ಮುಸ್ಲಿಂ ಕಾಲೊನಿಗಳಿಗೆ ವಾರ್ಡ್ ಗಳಿಗೆ ಕೇರಿಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ವೀಕ್ಷಿಸಿ ಕೇಂದ್ರ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ ಮೂಲಭೂತ ಸೌಲಭ್ಯದಿಂದ ವಂಚಿತರಾಗಿ ಅಂತಹ ಅಲ್ಪಸಂಖ್ಯಾತರ ವಾರ್ಡ್ ಗಳಿಗೆ ಅಭಿವೃದ್ಧಿ ಪಡಿಸಬೇಕಾಗಿ ಕೇಳಿ ಕೊಳ್ಳುತ್ತೇವೆ.ಈ ಸಂದರ್ಭದಲ್ಲಿ ಕೌಸರ್ , ಸುಹೇಲ್ ಅಬ್ದುಲ್ ಸುಭಾನ್, ಜವಾದ್ ಅಹಮ್ಮದ್, ಇನ್ನಿತರರು ಇದ್ದರು .

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153