ಭಾರತೀಯ ಹೆಣ್ಣುಮಗಳ ಜೊತೆಯಲ್ಲಿ ನಡೆದಿರುವ ಈ ರೀತಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕ್ಷಿಪ್ತವಾದ ತನಿಖೆ ನಡೆಸಬೇಕಾಗಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ಭಾರತ ಸಂವಿಧಾನ ಬದ್ಧವಾದ ಹೆಣ್ಣುಮಕ್ಕಳ ರಕ್ಷಣೆ ವಿಚಾರದಲ್ಲಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಸಂಘಟನೆಯು ಆಗ್ರಹಿಸುತ್ತಿದೆ.ಅದೂ ಅಲ್ಲದೆ ಸಾಬಿಯಸಾಫಿಯಾಳ ಹತ್ಯೆಯ ಪ್ರಕರಣವನ್ನು ಉನ್ನತ ತನಿಖಾಧಿಕಾರಿಗಳಿಗೆ ವಹಿಸಿ ಕೊಡುವುದರ ಮೂಲಕ ಭಾರತೀಯ ಹೆಣ್ಣು ಮಗಳಿಗೆ ಸೂಕ್ತವಾದ ನ್ಯಾಯ ದೊರಕಿಸಿಕೊಡಬೇಕೆಂದು ಮಾನ್ಯ ಕೇಂದ್ರ ರಕ್ಷಣಾ ಸಚಿವರಲ್ಲಿ ಮನವಿ ಮಾಡಿಕೊಳ್ಳುವುದರ ಮೂಲಕ ಈ ಹತ್ಯೆಯ ಹಾಗೂ ಕೊಲೆ ಪ್ರಕರಣವನ್ನು ಸಂಘಟನೆಯು ಖಂಡಿಸುವ ಮೂಲಕ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಈ ಮನವಿಯ ಮುಖಾಂತರ ನ್ಯಾಯಕ್ಕಾಗಿ ಮನವಿ ಮಾಡಿಕೊಳ್ಳುತ್ತೆವೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153