ತಾಯಿ ಮಡಿಲು ಸೇವಾ ಸಂಸ್ಥೆ (ರಿ) ಭದ್ರಾವತಿ, ವತಿಯಿಂದ ಗುರುವಂದನಾ ಕಾರ್ಯಕ್ರಮ ವನ್ನು ಆಯೋಜಿಸಲಾಗಿದ್ದು…ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅನಿತಮೇರಿ..ಅವರ ಅಧ್ಯತೆಯಲ್ಲಿ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸಿ, ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ಮಾನ್ಯ ಜಿಲ್ಲಾ ಉಪನಿರ್ದೇಶಕರಾದ ಎನ್.ಎಂ.ರಮೇಶ್..ಅವರು ನೆರವೇರಿಸಿದರು..ಕಾರ್ಯಕ್ರಮ ದಲ್ಲಿ ಸರ್ವರನ್ನು ಮೇರಿಡಿಸೋಜ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಅಪೇಕ್ಷಾ ಮಂಜುನಾಥ್ ನಿರೂಪಿಸಿದರು. ಜಿಲ್ಲೆಯ ವಿಶೇಷ ಸಾಧಕ ಶಿಕ್ಷಕರನ್ನು ಗುರುತಿಸಿ..ಶಿಕ್ಷಕ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಸನ್ಮಾನಿತ ಶಿಕ್ಷಕರು.. ಅರಳೆಹಳ್ಳಿ ಅಣ್ಣಪ್ಪ, ಮೇರಿ ಡಿಸೋಜ, ಅಪೇಕ್ಷಾಮಂಜುನಾಥ್, ಅನಿತಕೃಷ್ಣ, ಸುಶೀಲಾ ಮಾರ್ಗರೇಟ್, ರೇಣುಕಾರಾಧ್ಯ, ಶೋಭಾಸತೀಶ್, ಇವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಗಣಪತಿ ಡಿವೈಪಿಸಿ, ಉಮಾ ಮಹೇಶ್ ಡಿವೈಪಿಸಿ, ಪರಶುರಾಮ್, ಉಪಸ್ಥಿತರಿದ್ದರು. ಅವರನ್ನು ಸನ್ಮಾನಿಸಲಾಯಿತು. ಮಾನ್ಯ ಉಪನಿರ್ದೇಶಕರನ್ನು ಅನಿತಮೇರಿ ಅವರು ಹಾಗೂ ಶಿಕ್ಷಕವೃಂದ ದಿಂದ ಸನ್ಮಾನಿಸಲಾಯಿತು..ಉಪನಿರ್ದೇಶಕರಾದ ರಮೇಶ್ ರವರು ಅನಿತ ಮೇರಿ ಅವರ ಸೇವೆಯ ಸಾಧನೆ ಅಮೋಘವಾದದ್ದು. ಶಿಕ್ಷಕಿಯಾಗಿ ವೃತ್ತಿಯ ಜೊತೆಗೆ, ಸೇವೆಯ ಪ್ರವೃತ್ತಿಯನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ, ಹಲವು ಮಕ್ಕಳ ಜೀವ ಉಳಿಸಿದ್ದಾರೆ.ದೇವರು ಅವರಿಗೆ ಇನ್ನು ಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು..ಅನಿತ ಮೇರಿ ಶಿಕ್ಷಕ ಸಮುದಾಯಕ್ಕೆ ಮಾದರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮ ದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರು ಉಪಸ್ಥಿತರಿದ್ದರು.. ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸನ್ಮಾನಿತ ಶಿಕ್ಷಕರಿಗೆ ಶುಭಕೋರಿದರು.
ಅನಿತಮೇರಿ ಮಾತನಾಡಿ, ನಾನು 415 ಮಕ್ಕಳಿಗೆ ಈ ವರೆಗೆ ಚಿಕಿತ್ಸೆ ಕೊಡಿಸಿದ್ದೇನೆ.. ನಾನು ಸೇವೆ ಮಾಡಲು ಅನುಮತಿ ಕೇಳಿದಾಗ, ಉಪನಿರ್ದೇಶಕರು, ಭದ್ರಾವತಿ ಬಿಇಓ..ಶ್ರೀ.ಸೋಮಶೇಖರಯ್ಯ ರವರು ನನಗೆ ಅನುಮತಿ ನೀಡಿದ್ದಾರೆ..ಮತ್ತು ನನ್ನ ಸೇವೆಗೆ ಅಧಿಕಾರಿವರ್ಗದವರು ಪ್ರೋತ್ಸಾಹಿಸಿದ್ದಾರೆ, ಶಿಕ್ಷಕ ಸಂಘದ ಪಧಾಧಿಕಾರಿಗಳು , ಶಿಕ್ಷಕರು ಬೆಂಬಲಿಸಿದ್ದಾರೆ.ಎಂದು ಸ್ಮರಿಸಿದರು.
ಮುಂದಿನ ದಿನಗಳಲ್ಲಿ ಈ ಸಂಸ್ಥೆ ವತಿಯಿಂದ ಇನ್ನು ಹೆಚ್ಚಿನ ಸೇವೆ ಮಾಡುವು ದಾಗಿ ತಿಳಿಸಿದರು.
ನಂತರ ಅಣ್ಣಪ್ಪ ರವರು ವಂದಿಸಿದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153