ಕಣ್ಣುಗಳನ್ನು ಸಕಾಲದಲ್ಲಿ ಪರೀಕ್ಷಿಸಿ, ಕಣ್ಣುಗಳ ಬಗ್ಗೆ ನಿರ್ಲಕ್ಷೆ ಬೇಡ : ಕಣ್ಣುಗಳು ದೇಹದ ಪ್ರಮುಖ ಅಂಗ, ಕಣ್ಣುಗಳನ್ನು ಸಕಾಲದಲ್ಲಿ ಪರೀಕ್ಷಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣುಗಳ ಬಗ್ಗೆ ನಿರ್ಲಕ್ಷ ಬೇಡ ಎಂದು ಫ್ರೆಂಡ್ ಸೆಂಟರ್‌ನ ನೇತ್ರ ಭಂಡಾರದ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಜೆಸಿಐ ಸಹ್ಯಾದ್ರಿ, ರೋಟರಿ ಶಿವಮೊಗ್ಗ ಪೂರ್ವ, ನೆಪ್ಚೂನ್ ಆಟೋ ವರ್ಕ್ಸ್ ಹಾಗೂ ಐದೃಷ್ಟಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಸಾರ್ವಜನಿಕರಿಗೆ ಹಾಗೂ ಕಾರ್ಮಿಕರಿಗೆ ಹಮ್ಮಿಕೊಳ್ಳಲಾದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಆರು ತಿಂಗಳಿಗೆ ಒಂದು ಬಾರಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಮ್ಮ ಮರಣದ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸುವ ಬದಲಾಗಿ ನೇತ್ರದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು ಎಂದು ತಿಳಿಸಿದರು.
ಜೆಸಿಐ ಸಹ್ಯಾದ್ರಿ ಕಾರ್ಯದರ್ಶಿ ಸತೀಶ್‌ಚಂದ್ರ ಮಾತನಾಡಿ, ಕಣ್ಣು ದಾನ ಮಹಾದಾನ. ಕಣ್ಣುಗಳು ದಾನ ಮಾಡಿದರೆ ಕಣ್ಣು ಇಲ್ಲದ ಜನರಿಗೆ ದೃಷ್ಟಿ ಕೊಟ್ಟ ಪುಣ್ಯ ಸಿಗುತ್ತದೆ. ರಕ್ತದಾನ, ನೇತ್ರದಾನ, ದೇಹದಾನದಿಂದ ಸಮಾಜಕ್ಕೆ ತುಂಬಾ ಅನುಕೂಲ ಹಾಗೂ ಎಷ್ಟೋ ರೋಗಿಗಳಿಗೆ ಜೀವನ ದೊರಕಿಸಿಕೊಟ್ಟ ಪುಣ್ಯ ಸಿಗುತ್ತದೆ. ಕಣ್ಣು ದಾನ ಮಾಡುವುದರಿಂದ ಮುಂದಿನ ಪೀಳಿಗೆಯ ಜನರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಮಧುಮೇಹ ರೋಗಿಗಳು ಕಣ್ಣು ದೃಷ್ಟಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ದೃಷ್ಟಿಹೀನತೆಯಾಗುವುದು ಹಾಗೂ ಇತರೆ ಕಣ್ಣಿಗೆ ಸಂಬAಧ ತೊಂದರೆಗಳನ್ನು ತಡೆಗಟ್ಟಲು ಆರು ತಿಂಗಳಿಗೊಮ್ಮೆ ಕಣ್ಣುಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇಂತಹ ಆರೋಗ್ಯ ಶಿಬಿರಗಳು ಮಾಡುವುದರಿಂದ ಎಷ್ಟು ರೋಗಿಗಳಿಗೆ ಅನುಕೂಲವಾಗುತ್ತದೆ. ಅಂತಹ ಕೆಲಸಗಳಲ್ಲಿ ನೆಪ್ಚೂನ್ ಹಾಗೂ ಜೆಸಿಐ ಸಹ್ಯಾದ್ರಿ ಸಂಸ್ಥೆಗಳಿAದ ಅನೇಕ ಸಮಾಜಿಕ ಹಾಗೂ ಸಾರ್ವಜನಿಕಕ್ಕೆ ಸಹಾಯವಾಗುವಂತಹ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಹೀಗೆ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಮಾಡಲು ಸದಾ ಸಿದ್ಧವಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಸುದೇವ ಮೂರ್ತಿ ಮಾತನಾಡಿ, ಪ್ರತಿ ತಿಂಗಳು ಜೆಸಿಐನಿಂದ ಸೇವಾಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪ್ರಶಂಸಿದರು.
ಜೆಸಿಐ ಸಹ್ಯಾದ್ರಿ ಅಧ್ಯಕ್ಷ ಕಿಶೋರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರೋಟರಿ ಜಿಲ್ಲೆ ಉಪ ಸಂಪಾದಕರಾದ ರವೀಂದ್ರನಾಥ ಐತಾಳ್, ಕಣ್ಣಿನ ಸಂರಕ್ಷಣೆ ಕಾರ್ಯಕ್ರಮ ಮಾಡುತ್ತಿರುವುದನ್ನು ಶ್ಲಾಘಿಸಿದರು. ಜೆಸಿಐ ಐಪಿಪಿ ವಲಯ ವೈಸ್ ಚೇರ್ಮೆನ್ ಅನುಷ್ ಗೌಡ , ಮುರಳಿ, ರಮ್ಯಾ, ವನಜಾಕ್ಷಿ ನಾಗರಾಜ್ ಹಾಗೂ ಐದೃಷ್ಟಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153