ಮನುಕುಲದ ಸೇವೆ ನಮ್ಮನ್ನು ಸದಾ ಕಾಪಾಡುತ್ತದೆ. ಸಮಾಜ ಸೇವಾ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಇನ್ನರ್‌ವ್ಹೀಲ್ ಚರ‍್ಮನ್ ಪುಷ್ಪಾ ಗುರುರಾಜ್ ಹೇಳಿದರು. ನಗರದ ಕಾಶೀಪುರದಲ್ಲಿರುವ ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಊಟದ ಟೇಬಲ್ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿದರು. ವೃದ್ಧರು, ಅನಾಥರು, ಪಾರ್ಶ್ವವಾಯು ಪೀಡಿತ ಹಾಗೂ ಬುದ್ದಿಮಾಂದ್ಯರನ್ನು ಆರೈಕೆ ಮಾಡಿ ತಾಳ್ಮೆಯಿಂದ ಸೇವೆ ಮಾಡುವುದು ಅತ್ಯಂತ ಅಭಿನಂದನೀಯ ಕಾರ್ಯ. ಇಂತಹ ಕಾರ್ಯ ನಡೆಸುತ್ತಿರುವ ಎಲ್ಲ ಸಿಬ್ಬಂದಿಯ ಶ್ರಮ ಅಪಾರ. ಇನ್ನರ್‌ವ್ಹೀಲ್ ಸಂಸ್ಥೆಯು ಈ ಕೇಂದ್ರದ ಸೇವಾ ಕಾರ್ಯದಲ್ಲಿ ಕೈಜೋಡಿಸುವ ಕಾರ್ಯ ನಡೆಸಿದೆ ಎಂದು ತಿಳಿಸಿದರು. ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯು ನಿರಂತರವಾಗಿ ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬರುತ್ತಿದೆ. ನಿಜವಾಗಿ ಸಂಕಷ್ಟದಲ್ಲಿ ಇರುವ ಅರ್ಹರನ್ನು ಗುರುತಿಸಿ ಅವರಿಗೆ ಸೇವೆಗಳನ್ನು ತಲುಪಿಸುವ ಕಾರ್ಯ ನಡೆಸುತ್ತಿದೆ ಎಂದರು. ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಜಯಂತಿ ವಾಲಿ ಮಾತನಾಡಿ, ನಮ್ಮ ಸಂಸ್ಥೆಯು 10-15 ವರ್ಷಗಳಿಂದ ಪ್ರತಿ ವರ್ಷ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬಂದಿದ್ದು, ಆರೋಗ್ಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಆರೋಗ್ಯ ಶಿಬಿರಗಳನ್ನು ನಡೆಸುತ್ತದೆ. ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲ ಒದಗಿಸುತ್ತಿದೆ ಎಂದು ಹೇಳಿದರು.
ಗುಡ್‌ಲಕ್ ಆರೈಕೆ ಕೇಂದ್ರದ ಆಶ್ರಮವಾಸಿಗಳಿಗೆ ಕುಳಿತು ಊಟ ಮಾಡಲು 3 ಸ್ಟೀಲ್‌ನ ದೊಡ್ಡ ಟೇಬಲ್ ಹಾಗೂ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಆಶ್ರಮವಾಸಿಗಳಿಗೆ ಹಣ್ಣು, ಬ್ರೇಡ್, ಬಿಸ್ಕತ್ ಹಂಚಲಾಯಿತು. ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನಾಥ್ ಐತಾಳ್, ಶಿವಪ್ಪಗೌಡ, ಪಂಚಾಕ್ಷರಯ್ಯ, ಜಿ.ವಿಜಯ್‌ಕುಮಾರ್, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಬಿಂದು ವಿಜಯ್‌ಕುಮಾರ್, ವೀಣಾ ಹರ್ಷ, ರಾಜೇಶ್ವರಿ ಪ್ರತಾಪ್, ವಿಜಯ ರಾಯ್ಕರ್, ವಾಣಿ ಪ್ರವೀಣ್, ಮಮತಾ ಸುಧೀಂದ್ರ, ಸುಮಾ ರವಿ, ನಮಿತಾ, ವೀಣಾ ಸುರೇಶ್, ಶಬರಿ ಕಡಿದಾಳ್, ನಳಿನಿ ಐತಾಳ್ ಹಾಗೂ ಇನ್ನರ್‌ವ್ಹೀಲ್ ಸದಸ್ಯೆಯರು ಇದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153