ನಾಡಹಬ್ಬವಾದ ದಸರಾ 14-10-2021 ಹಾಗೂ 15-10-2021 ರಂದು ಇರುವ ಕಾರಣ ಈ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆದಿರಲಿಲ್ಲ ಈಗಾಗಲೇ ಮೈಸೂರು ದಸರಾ ಹಬ್ಬದ ಆಚರಣೆಯ ಬಗ್ಗೆ ಚರ್ಚೆ ನಡೆದಿತ್ತು ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸುತಿರುತ್ತಾರೆ. ನಮ್ಮ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ನಾಡಹಬ್ಬವಾದ ದಸರಾವನ್ನು ಬಹಳ ವಿಜೃಂಭಣೆಯಿಂದ ನಡೆಸುತ್ತಾ ಬಂದಿರುತ್ತದೆ ಆದರೆ ಕಳೆದ ವರ್ಷದಿಂದ ಕೋವಿಡ್ ನ ಕಾರಣದಿಂದಾಗಿ ದಸರಾ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ನಡೆಸಿದ್ದೇವೆ ಆದ ಕಾರಣ ಈ ವರ್ಷ ದಸರಾ ಹಬ್ಬವನ್ನು ಹಿಂದೆ ನಡೆಸಿದಂತೆ 9 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಬನ್ನಿಮಂಟಪದ ಸಿದ್ಧತೆ ಕೂಡ ಸ್ಪರ್ಧೆ ಹಾಗೂ ವಿವಿಧ ಕಾರ್ಯಕ್ರಮಗಳು ಮಾಡುವ ಬಗ್ಗೆ ಹಾಗೂ ಸರ್ಕಾರದಿಂದ ಅನುದಾನ (ದಸರಾ ಹಬ್ಬ ನಡೆಸಲು) ತರುವ ಬಗ್ಗೆ ಚರ್ಚಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153