- ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ ಆಗಬೇಕು ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯಿದೆ 2008 ಜಾರಿ ತಂದು 13 ವರ್ಷಗಳು ಕಳೆದಿದೆ. ಇದು ಜಾರಿ ಬಂದು ರೈತರಿಗೆ ಹಕ್ಕುಪತ್ರ ಸಿಗುತ್ತಿಲ್ಲ ಪ್ರಧಾನಿ ಮನಮೋಹನ್ ಸಿಂಗ್ 2009 ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ನವರಿಗೆ 3 ಪತ್ರಗಳನ್ನು ಬರೆದಿದ್ದರು ಕರ್ನಾಟಕದಲ್ಲಿ ಈ ಮಹತ್ವ ಕಾಯಿದೆ ಜಾರಿ ಮಾಡಿ 2009ರೊಳಗೆ ರೈತರಿಗೆ ಹಕ್ಕುಪತ್ರ ನೀಡಲು ತಿಳಿಸಿದರು ಆದರೆ ರಾಜ್ಯ ಸರ್ಕಾರ 3ಲಕ್ಷ ಅರ್ಜಿಗಳನ್ನು ಯಾವುದೇ ವಿಚಾರಣೆ ಮಾಡದೆ ವಜಾಮಾಡಲಾಯಿತು ಸಂಸದರಾಗಿದ್ದ ರಾಘವೇಂದ್ರ ಈಗಿನ ಗೃಹ ಸಚಿವರಾಗಿರುವ ಜ್ಞಾನೇಂದ್ರ ಈಗಿನ ಸಭಾಪತಿಯಾಗಿರುವ ವಿಶ್ವೇಶ್ವರ್ ಶಿಕಾರಿಪುರ ತೀರ್ಥಹಳ್ಳಿ ಜಿಗಡೆ ಇಕ್ಕೇರಿ ಸಿಸಿಯಲ್ಲಿ ಪ್ರತಿಭಟನೆ ನಡೆಸಿ ಯಾವುದೇ ರೈತರ ಅರ್ಜಿ ವಜಾ ಮಾಡಬಾರದು ಅರಣ್ಯಹಕ್ಕು ಕಾಯ್ದೆ ತಿದ್ದುಪಡಿ ಆಗಬೇಕು ಎಂದು ಒತ್ತಾಯಿಸಿದರು. ಈಗಿರುವ ಕಾಯ್ದೆಯಲ್ಲಿ ಎಸ್ಟಿಯವರಿಗೆ ಜಮೀನು ನೀಡುಲು 5 ವರ್ಷ ಅನುಭವ ನಿಗದಿಪಡಿಸಿದೆ ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ 3ತಲೆಮಾರು ಎಂದು ನಿಗದಿಪಡಿಸಿದೆ ಇದು ಸರಿಯಲ್ಲ ಎಂದಿದ್ದರು ಈಗ 7ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರೇ ಪ್ರಧಾನಿಯಾಗಿದ್ದರು ಅರಣ್ಯಹಕ್ಕು ಕಾಯ್ದೆ ತಿದ್ದುಪಡಿ ಆಗಿಲ್ಲ ಆಗ ಕಾಯಿದೆ ತಿದ್ದುಪಡಿಗೆ ಆಗ್ರಹಿಸಿದವರು ಈಗ ಬಾಯಿ ಬಿಡುತ್ತಿಲ್ಲ ಅರಣ್ಯ ಹಕ್ಕು ಕಾಯಿದೆ ಅನುಸಾರ ಅರ್ಹ ರೈತರಿಗೆ ಭೂಮಿ ಮಂಜೂರು ಮಾಡಲು ಕಾಯ್ದೆ ತಿದ್ದುಪಡಿ ಮಾಡಿ ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಜಮೀನು ನೀಡಲು ಹತ್ತು ವರ್ಷ ಅನುಭವ ನಿಗದಿಪಡಿಸಬೇಕು.
- ಅರಣ್ಯ ಹಕ್ಕು ಕಾಯ್ದೆಯಲ್ಲಿ ಸಣ್ಣಪುಟ್ಟ ಕಾರಣಗಳಿಗೆ ಅರ್ಜಿ ವಜಾ ಮಾಡಬಾರದು ನಿಗದಿಪಡಿಸಿದ 13ದಾಖಲೆಗಳಲ್ಲಿ ಒಂದಕ್ಕಿಂತ ಹೆಚ್ಚು ದಾಖಲೆ ಇದ್ದರೆ ಸಾಕು ಇಂತಹದ್ದೆ ದಾಖಲೆ ಬೇಕೆಂದು ಕೇಳಬಾರದೆದಿದೆ. ಅಧಿಕಾರಿಗಳು ದಾಖಲೆ ಹುಡುಕುವಲ್ಲಿ ರೈತರಿಗೆ ಸಹಾಯ ಮಾಡಬೇಕು ಎಂದು ಸುಪ್ರೀಂಕೋರ್ಟ್ ಸಹಾಯ ಹೇಳಿದೆ ಇಂದಿನ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅರಣ್ಯ ಹಕ್ಕು ಕಾಯ್ದೆ ಜಾರಿ ತರುವಾಗ ಭೂಮಿ ಅರಣ್ಯದ ಎಂಬ ಹೇಳಿಕೆ ಕೊಡುವುದು ಅರಣ್ಯ ಇಲಾಖೆ ಜವಾಬ್ದಾರಿ ಜಮೀನು ಮಂಜೂರು ಮಾಡುವ ಬಗ್ಗೆ ಅಭಿಪ್ರಾಯ ನೀಡಲು ಕರ್ತವ್ಯ ನಿರ್ವಹಿಸುತ್ತಿಲ್ಲ ಕಾವ್ಯ ಪ್ರಯೋಜನ ರೈತರಿಗೆ ದೊರೆಯಲು ಇದು ಅಡ್ಡಿಯಾಗಿದೆ.
- ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಹೋಬಳಿ ಮಲಂದೂರು ಗ್ರಾಮ ನಕ್ಸಲ್ ಪೀಡಿತ ಗ್ರಾಮ ಎಂದು ಸರ್ಕಾರ ಘೋಷಣೆ ಮಾಡಿದ ಕಾರಣಕ್ಕಾಗಿ ರಾತ್ರಿ ಬೆಳಗಾಗುವುದರೊಳಗೆ ಗ್ರಾಮ ಅರಣ್ಯ ಹಕ್ಕು ಸಮಿತಿ ನೀಡಲಾಯಿತು ಅರಣ್ಯ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಹಗಲು-ರಾತ್ರಿ ದಾಖಲೆ ಒದಗಿಸಲು ಸಹಕರಿಸಿದ್ದಕ್ಕೆ ಇದು ಸಾಧ್ಯವಾಯಿತು ಇದೇ ರೀತಿ ಜಿಲ್ಲಾ ದಂತ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.
- ಅರಣ್ಯ ಸಂರಕ್ಷಣೆ ಕಾಯ್ದೆ 1980 ರಂತೆ 1978 ರೊಳಗೆ ಅರಣ್ಯ ಭೂಮಿ ಸಾಗುವಳಿ ಮಾಡಿದ್ದ ಸಣ್ಣ ರೈತರು ಭೂ ರೈತರು ಪರಿಶಿಷ್ಟ ಜಾತಿಯವರಿಗೆ 3 ಎಕರೆ ಜಮೀನು ಮಂಜೂರು ಮಾಡಿ ಹಕ್ಕುಪತ್ರ ಕೊಡಬೇಕು ಇದರಂತೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯವರು 4300 ಜನರ ಹೆಸರು ಪಟ್ಟಿ ಮಾಡಿ ಸರ್ಕಾರಕ್ಕೆ ಕಳಿಸಿ 25 ವರ್ಷ ಕಳೆದರೂ ಇನ್ನು ಜಮೀನು ಮಂಜೂರಾತಿ ಆಗಿಲ್ಲ ಇವರೆಲ್ಲರಿಗೂ ಹಕ್ಕುಪತ್ರ ಕೊಡಬೇಕು ಕೆಲವರು ಹೆಸರು ಪಟ್ಟಿಯಲ್ಲಿಲ್ಲ 1978 ರ ಹಿಂದೆ ಸಾಗುವಳಿ ಮಾಡಿದ್ದಕ್ಕೆ ದಾಖಲೆ ಪಡೆದು ಇವರೆಲ್ಲರಿಗೂ ಭೂಮಿ ಮಂಜೂರಾತಿ ಮಾಡಬೇಕು.
- ಸೊರಬ ತಾಲೂಕು ಕೆರೆಹಳ್ಳಿ ತಾಳಗುಪ್ಪದಲ್ಲಿ ಕೋರ್ಟ್ ಆದೇಶದ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗಿದೆ ಫಾರೆಸ್ಟ್ ಸೆಟಲ್ ಮೆಂಟ್ ಕಮಿಟಿ 32 ಜನರಿಗೆ ಭೂಮಿ ಮಂಜೂರು ಮಾಡಬೇಕೆಂದಿದ್ದೆ ಆದರೂ ಓಕ್ಕಲೆಬ್ಬಿಸಲಾಗಿದೆ ರೈತರು ಬೀದಿಪಾಲಾಗಿದ್ದಾರೆ ಇವರಿಗೆ ದೊರಕಿಸಿಕೊಡಬೇಕು
- ಸೊರಬ ತಾಲೂಕಿನ ಎಣ್ಣಿಕೊಪ್ಪ ಗ್ರಾಮದಲ್ಲಿ 1961 ರಲ್ಲಿ ಭೂಮಿ ಸಾಗುವಳಿ ಮಾಡಿದ ಬಗ್ಗೆ ದಾಖಲಾಗಿದ್ದರು ಅವರನ್ನು ಭೂಮಿಯಿಂದ ಒಕ್ಕಲೆಬ್ಬಿಸಲಾಗಿದೆ 41 ಜನರಿಗೂ ಭೂಮಿ ಹಕ್ಕುಪತ್ರ ನೀಡಬೇಕು.
- ಸೊರಬ ತಾಲೂಕಿನ ಸಿಡ್ಡಿಹಳ್ಳಿ ಗ್ರಾಮದಲ್ಲಿ 121 ಜನ ರೈತರು ಅರಣ್ಯ ಹಕ್ಕು ಕಾಯ್ದೆ ಅನುಸಾರ ಅರ್ಜಿ ಸಲ್ಲಿಸಿದರು ಕೆಲವರ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ನ್ಯಾಯಾಲಕ್ಕೆ ಸುಳ್ಳು ದೂರು ಸಲ್ಲಿಸಿದ ಕಾರಣ ರೈತರ ಮೇಲೆ ಕೇಸು ದಾಖಲು ಮಾಡಿದ್ದನ್ನು ವಾಪಸ್ಸು ಪಡೆಯಬೇಕು ಹಕ್ಕುಕಾಯ್ದೆ ಅಂತೆ ಕ್ರಮ ಕೈಗೊಳ್ಳಬೇಕು
- ಜಿಲ್ಲೆಯಲ್ಲಿ ಫಾರಂ ನಂ 50,53,57 ರಲ್ಲಿ ಅರ್ಜಿ ಸಲ್ಲಿಸಿದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅರ್ಜಿದಾರ ಕಂದಾಯ ಜಮೀನು ಮಂಜೂರು ಮಾಡಬೇಕು ಪ್ರಾಂತ ಅಧಿಕಾರಿಗಳು ಜಿಲ್ಲಾಧಿಕಾರಿ ಗಳಲ್ಲಿರುವ ಸಾವಿರಾರು ಮೇಲ್ಮನವಿಯನ್ನು ಕೂಡಲೇ ಇತ್ಯರ್ಥಗೊಳಿಸಬೇಕು
- ಕೆಲವು ಅರಣ್ಯಾಧಿಕಾರಿಗಳು ನಕಲಿ ಪರಿಸರವಾದಿಗಳನ್ನು ಮುಮದೆ ಮಾಡಿ ನ್ಯಾಯಾಲಯಗಳಲ್ಲಿ ದಾಖಲಿಸಿ ಮುಳುಗಡೆ ಸಂತ್ರಸ್ತರಿಗೆ ಪರಂಪರಿಕ ಅರಣ್ಯ ಹಕ್ಕು ಪತ್ರಗಳನ್ನು ಪಡೆದವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಾಗಿದ್ದು ಸೂಕ್ತ ತನಿಖೆ ನಡೆಸಲು ಆಗ್ರಹ ಪಡಿಸುತ್ತೇವೆ
ಈ ಎಲ್ಲ ಬೇಡಿಕೆಗಳನ್ನು ತಕ್ಷಣ ಹಿಡೇರಬೇಕೆಂದು ಮಲೆನಾಡು ರೈತರ ಹೋರಾಟ ಸಮಿತಿ ಆಗ್ರಹಪಡಿಸಿದೆ ಇಲ್ಲವಾದಲ್ಲಿ ತೀವ್ರ ಹೋರಾಟದ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ ಸರ್ಕಾರ ವಿಳಂಬ ಮಾಡಿದ್ದಲ್ಲಿ ಕಾನೂನು ಭಂಗ ಚಳುವಳಿಯನ್ನು ಹಾಕಿಕೊಳ್ಳುವುದರಿಂದ ಎಚ್ಚರಿಸಿದ್ದೆವೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153