ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2000ರಿಂದ 2021ರ ಅವಧಿಯ ವರೆಗೆ ನಿಯಮಾನುಸಾರವಾಗಿ ಆಯ್ಕೆಗೊಂಡ 14.564ಅತಿಥಿ ಉಪನ್ಯಾಸಕರುಗಳು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಗುಣಮಟ್ಟದ ಪಾಠ ಪ್ರವಚನ ಮಾಡುವ ದೃಷ್ಟಿಯಿಂದ ಸೇವಾ ಅನುಭವ ಹಾಗೂ ಭೋಜನ ಕೌಶಲ್ಯ ಹೊಂದಿರುವ ನಮ್ಮ ಗಳನ್ನು ಸೇವಾ ವಿಲೀನದ ವ್ಯಾಪ್ತಿಗೆ ತರಲು ಕೋರಿದೆ. ದೀರ್ಘಕಾಲದ ನಮ್ಮಗಳ ಸೇವೆಯನ್ನು ಬಳಸಿಕೊಂಡ ಇಲಾಖೆಯು ಸೇವಾ ವಿಲೀನಗೊಳಿಸಿ ಕಾಯಂಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಲ್ಲೇಖ ಪತ್ರ 1ಮತ್ತು 2 ಅನುಸಾರ ದಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಮತ್ತು ಶಾಶ್ವತ ನಿಯಮಾವಳಿ ರಚನೆ ಮಾಡುವ ಬಗ್ಗೆ ಪರಿಶೀಲಿಸಿ ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಬಹುದಾಗಿದೆ ಎಂಬ ಅಭಿಪ್ರಾಯವನ್ನು ಸರ್ಕಾರದ ಅವಗಾಹನೆಗೆ ಸಲ್ಲಿಸಿದ್ದಾರೆ ಆದ್ದರಿಂದ ತಾವು ಈ ಕೆಳಕಂಡ ನಿಯಮಗಳನ್ನು ಆಧರಿಸಿ ವೃಂದ ಮತ್ತು ನೇಮಕಾತಿ ನಿಯಮಗಳ ಖರೀದಿ ರಚಿಸಿ ಒಂದು ದಾರಿ ಮಾನವೀಯ ದೃಷ್ಟಿಯಿಂದ ಸೇವೆ ಕಾಯಂಗೊಳಿಸುವ ಕುರಿತು ಪ್ರಸ್ತಾಪನೆಯನ್ನು ಪ್ರಸ್ತುತ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಮಂಡಿಸಿ ಇತ್ಯರ್ಥಗೊಳಿಸಲು ಅಥವಾ ಸಚಿವ ಸಂಪುಟದ ಅನುಮತಿಗೆ ಸಲ್ಲಿಸಲು ಮಾನ್ಯ ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶಿಸುವಂತೆ ಒತ್ತಾಯಿಸಿ ದಿನಾಂಕ 14/09/2021ರಿಂದ 18/09/2021ರವರೆಗೆ ರಾಜ್ಯಾದ್ಯಂತ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಧರಣಿ ನಡೆಸುವ ಮೂಲಕ ಆಗ್ರಹ ಪೂರ್ವಕವಾಗಿ ವಿನಂತಿಸುತ್ತೇವೆ. ದಿನಾಂಕ 13/09/2021ಚಂದು ಮಾನ್ಯ ಉನ್ನತ ಶಿಕ್ಷಣ ಸಚಿವರು ವಿಧಾನಪರಿಷತ್ ಸದಸ್ಯರಿಗೆ ನೀಡಿರುವ ಲಿಖಿತ ಉತ್ತರವು ಸತ್ಯಕ್ಕೆ ಕಾರಣವಾಗಿದೆ. ಏಕೆಂದರೆ K.C.S.R( General Recruitment roles )1977ನಿಯಮ 1(3)(2)ಮತ್ತು 14ರ ಅಡಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಿಕೊಂಡು ತಾತ್ಕಾಲಿಕ ನೌಕರರನ್ನು ಸೇವೆಯಲ್ಲಿ ವಿಲೀನಗೊಳಿಸಿ ಕಾಯಂ ಮಾಡಲು ಅವಕಾಶವನ್ನು ಹಾಗೂ ಸಂವಿಧಾನದ 309ನೇ ವಿಧಿ ಪ್ರಕಾರ ತಾತ್ಕಾಲಿಕ ನೌಕರರನ್ನು ಖಾಯಂ ಮಾಡಲು ಇಲಾಖೆಯ ಸಿ&ಆರ್ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ ಜತೆಗೆ ಈ ನಿಯಮಾವಳಿಗಳನ್ನು ತಿದ್ದುಪಡಿ ಮಾಡಿಕೊಳ್ಳುವ ಪರಮಾಧಿಕಾರವು ಶಾಸಕಾಂಗ ಮತ್ತು ಸಂಪುಟಕ್ಕೆ ಇರುತ್ತದೆ. ಆದ್ದರಿಂದ ಗೌರವಾನ್ವಿತ ಮುಖ್ಯಮಂತ್ರಿಗಳು ಮತ್ತು ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಎಲ್ಲಾ ಗೌರವಾನ್ವಿತ ಸಭೆ ಮತ್ತು ವಿಧಾನಪರಿಷತ್ ಸದಸ್ಯರು ಹಾಗೂ ಮಾನ್ಯ ವಿರೋಧ ಪಕ್ಷದ ನಾಯಕರು ಮಧ್ಯಪ್ರವೇಶಿಸಿ ಕಾನೂನಾತ್ಮಕವಾಗಿ ಇತ್ಯರ್ಥ ಗೊಳಿಸಬೇಕು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153