ಗೌರವಾನ್ವಿತ ಸುಪ್ರೀಂಕೋರ್ಟ್ ನ ದಿನಾಂಕ 29-09-2009 ರ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಶ್ರದ್ಧಾ ಕೇಂದ್ರಗಳು ದೇವಸ್ಥಾನ ಚರ್ಚ್ ಮಸೀದಿ ಗುರುದ್ವಾರ ಇತ್ಯಾದಿಗಳನ್ನು ಸಕ್ರಮಗೊಳಿಸುವ ಸ್ಥಳಾಂತರಿಸುವ ಅನಿವಾರ್ಯವಿದ್ದಾಗ ಮಾತ್ರ ತೆರವುಗೊಳಿಸುವ ಆದೇಶವನ್ನು ವಿಶ್ವ ಹಿಂದು ಪರಿಷತ್ ಗೌರವಿಸುತ್ತದೆ ಆದರೆ ಗೌರವಾನ್ವಿತ ಸುಪ್ರೀಂಕೋರ್ಟ್ ನ ಆದೇಶವನ್ನು ಪಾಲಿಸುವಾಗ ರಾಜ್ಯ ಸರ್ಕಾರವು ಪ್ರತಿಯೊಂದು ಶ್ರದ್ಧಾಕೇಂದ್ರದ ಬಗೆ ಪ್ರತ್ಯೇಕವಾಗಿ ವಿಮರ್ಶೆ ಮಾಡ(Case by case review ) ಸಕ್ರಮ ಸ್ಥಳಾಂತರ ಅನಿವಾರ್ಯ ಬಿದ್ದಾಗ ಮಾತ್ರ ತೆರವು ಮಾಡಲು ಕ್ರಮ ಜರಗಿಸಬೇಕೆಂದು ಇದ್ದರೂ ಸಹ ಮೈಸೂರು ಜಿಲ್ಲಾಡಳಿತವು ಮೇಲ್ಕಂಡ ಯಾವುದೇ ಕ್ರಮ ತೆಗೆದುಕೊಳ್ಳದೇ ಹಿಂದೂ ದೇವಸ್ಥಾನವನ್ನು ಮಾತ್ರ ಕೆಡವಿರುವುದು ಖಂಡನೀಯ. ಅಲ್ಲದೆ ಕೇವಲ ಹಿಂದೂ ಸಮಾಜಕ್ಕೆ ಸೇರಿರುವ ಪುರಾತನವಾದ ದೇವಸ್ಥಾನಗಳಲ್ಲೂ ಹೊತ್ತುಗೊತ್ತು ಇಲ್ಲದ ವೇಳೆಯಲ್ಲಿ ತುಗಲಕ್ ನೀತಿಯಂತೆ ಅಕ್ರಮವಾಗಿ ತೆಲುಗು ಗಳಿಸಿದವರನ್ನು ವಿಶ್ವಹಿಂದು ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಇದರಿಂದ ಇಡೀ ಹಿಂದೂ ಸಮಾಜದ ಭಾವನೆಗೆ ಅತೀವ್ರ ನೋವು ಉಂಟಾಗಿರುತ್ತದೆ. ಕಳೆದ 2ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ನಿಟ್ಟಿನಲ್ಲಿ ಇದೇ ರೀತಿಯಾಗಿ ಹಲವಾರು ಹಿಂದೂ ದೇವಸ್ಥಾನಗಳನ್ನು ಮಾತ್ರ ಕೆಡವಿದ್ದು ಮೈಸೂರಿನ ಹೃದಯಭಾಗದಲ್ಲಿರುವ ದೇವರಾಜು ಅರಸು ರಸ್ತೆಯಲ್ಲಿರುವ ಗೋರಿಯೂ ನಿಜವಾಗಿಯೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಹ ಜಿಲ್ಲಾಡಳಿತವು ಅದನ್ನು ಭಾಗಶಃ ತೆರವುಗೊಳಿಸಿ ಮತ್ತೆ ಈಗ 2ವರ್ಷಗಳ ಅಂತರ ಅರ್ಧಕ್ಕೆ ನಿಲ್ಲಿಸಿದ ಆ ಕೆಲಸವನ್ನು ಪೂರ್ಣಗೊಳಿಸದೆ ಕೈಬಿಟ್ಟು ಕೇವಲ ಹಿಂದೂ ದೇವಸ್ಥಾನಗಳನ್ನು ತೆರವುಗೊಳಿಸುವ ಮೂಲಕ ತಾರತಮ್ಯ ತೋರಿದ ಜಿಲ್ಲಾಡಳಿತವು ಕ್ರಮವು ಕೋಮು ಸೌಹಾರ್ದತೆಯನ್ನು ಮಾಡುವ ಕೋಮುವಾದವನ್ನು ಸೃಷ್ಟಿ ಮಾಡಿರುತ್ತದೆ ಜಿಲ್ಲಾಡಳಿತ ಈ ದ್ವಂದ್ವ ನೀತಿಯನ್ನು ಹಿಂದು ಪರಿಷತ್ ತೀವ್ರವಾಗಿ ಖಂಡಿಸುತ್ತದೆ.

ಸರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ