ನಗರದ ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಗಳು ಅವಳಿ ಬಡಾವಣೆಗಳಾಗಿದ್ದು ಇತ್ತೀಚೆಗೆ ಅಭಿವೃದ್ಧಿ ಹೊಂದುತ್ತಿದ್ದು ಇಲ್ಲಿ ಹೆಚ್ಚಾಗಿ ನೌಕರರು ನಿವೃತ್ತ ನೌಕರರು ವ್ಯಾಪಾರಸ್ಥರು ಹಾಗೂ ಉದ್ದಿಮೆದಾರರು ವಾಸಿಸುತ್ತಿದ್ದು ಸಾಮಾನ್ಯವಾಗಿ ದಿನ ಪ್ರತಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಹೋಗುವುದು ಇಲ್ಲಿನ ನಿವಾಸಿಗಳ ಅಭ್ಯಾಸ ಆದರೆ ಇತ್ತೀಚಿನ ದಿನಗಳಲ್ಲಿ ವಾಯುವಿವಾರಕ್ಕೆ ಹಾಗೂ ತಮ್ಮ ದಿನನಿತ್ಯದ ಕೆಲಸ ಮುಗಿಸಿ ಮನೆಗೆ ಬರುವ ಒಂಟಿ ವ್ಯಕ್ತಿಗಳನ್ನು ಅಡ್ಡಗಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರ ಬಳಿ ಇರುವ ಬಂಗಾರದ ಒಡವೆಗಳು ಆಳ ಮತ್ತು ಮೊಬೈಲ್ ಮುಂತಾದ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುವ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು ಬಡಾವಣೆಯ ನಿವಾಸಿಗಳು ಭಯಭೀತರಾಗಿ ಓಡಾಡುವಂತಾಗಿದೆ. ಜೊತೆಗೆ ಬೀಗ ಹಾಕಿರುವ ಮನೆಗಳ ಬಾಗಿಲು ಮುರಿದು ದೋಚುವ ಮನೆ ಕಳ್ಳತನ ಪ್ರಕರಣಗಳು ಹೆಚ್ಚಿದ್ದು ನಿವಾಸಿಗಳು ಅತ್ಯಂತ ಆತಂಕದಿಂದ ಜೀವಿಸುವಂತಾಗಿದೆ ಬಡಾವಣೆಯ ಪಾರ್ಕ್ ಗಳು ಖಾಲಿ ನಿವೇಶನ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು ಗಾಂಜಾ ಮದ್ಯ ಸೇವನೆಯ ಅಡ್ಡಾಗಳಾಗಿವೆ. ಬಡಾವಣೆಯ ಕೆಟ್ಟ ಬೀದಿದೀಪಗಳು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ದಟ್ಟವಾಗಿ ಬೆಳೆದ ಗಿಡಗಂಟಿಗಳು ಅಪರಾಧ ಚಟುವಟಿಕೆ ಎಸಗುವವರಿಗೆ ವರದಾನವಾಗಿದ್ದು ಇಂತಹ ಅವಕಾಶಗಳನ್ನು ಬಳಸಿಕೊಂಡು ದುಷ್ಕರ್ಮಿಗಳು ನಿರಂತರವಾಗಿ ನಿರಂತರ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದು ಬಡಾವಣೆಯ ನಿವಾಸಿಗಳು ಆತಂಕದಿಂದ ಜೀವಿಸುವಂತಾಗಿದೆ ಇಂತಹ ಘಟನೆಗಳು ನಡೆದ ಇಂಥ ಸಂದರ್ಭಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಗೆ ಮನವಿ ಮಾಡಿದರೂ ಅಪರಾಧ ಪ್ರಕರಣಗಳು ಕಡಿಮೆಯಾಗಿಲ್ಲ ಮತ್ತೆ ಮತ್ತೆ ಇಂಥ ಪ್ರಕರಣಗಳು ಮರುಕಳಿಸು ಇರುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಭಯ ಭೀತರಾಗಿದ್ದಾರೆ ಆದ್ದರಿಂದ ತಾವುಗಳು ಈ ಗಂಭೀರ ಪ್ರಕರಣಗಳ ಬಗ್ಗೆ ಸೂಕ್ತ ಗಮನಹರಿಸಿ ದೃಷ್ಕೃತ್ಯವೆಸಗಿರುವವರನ್ನು ಪತ್ತೆಹಚ್ಚಿ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಕೊಡಿಸುವುದರ ಜತೆಗೆ ಈ ಭಾಗದಲ್ಲಿ ನಡೆದ ಪತ್ತೆಯಾಗದ ಪ್ರಕರಣಗಳನ್ನು ಪತ್ತೆಹಚ್ಚಿ ನಿವಾಸಿಗಳಿಗೆ ನ್ಯಾಯ ಒದಗಿಸಬೇಕಾಗಿ ಹಾಗೂ ನಿವಾಸಿಗಳು ನಿರ್ಭಯವಾಗಿ ವಾಸಿಸುವಂತಹ ವಾತಾವರಣ ಕಲ್ಪಿಸಿ ಕೊಡ ಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ