ರೈತರು ಸ್ವಂತಕ್ಕಾಗಿ 1ವರ್ಷದಲ್ಲಿ 1ರಿಂದ 3ತಿಂಗಳು ಮಾತ್ರ ಅಡಿಕೆ ಸುಲಿಯುವ ಯಂತ್ರವನ್ನು ಉಪಯೋಗಿಸುತ್ತೇವೆ ಅಡಿಕೆ ಸುಗ್ಗಿಯಲ್ಲಿ ಮೊದಲನೇ ಕೊಯಿಲು 1ವಾರ ನಂತರ ಪ್ರತಿ ಕೊಯ್ಲಿನ ಮಧ್ಯೆ 45 ದಿನಗಳ ಅಂತರದ ನಂತರ 15ದಿನಗಳು ಮಾತ್ರ ಒಟ್ಟು 4 ಕೊಯ್ಲು ನಿಂದ 60ರಿಂದ 90ದಿನಗಳು ಮಾತ್ರ ವರ್ಷದಲ್ಲಿ ಅಡಿಕೆ ಸುಲಿಯುವ ಯಂತ್ರವನ್ನು ಉಪಯೋಗಿಸುತ್ತೇವೆ ಸ್ವಂತ ತೋಟದಿಂದ ಅಡಿಕೆ ಕೊಯ್ದು ಪರಿಷ್ಕರಣೆ ಮಾಡಿ ಮಾರಾಟ ಮಾಡುತ್ತೇವೆ ಈಗಾಗಲೇ ಮನೆಗಳಿಗೆ ವಿದ್ಯುಚ್ಛಕ್ತಿ ಸಂಪರ್ಕ ಇದ್ದು ಮನೆಯ ಮೀಟರ್ ನಿಂದಲೇ ವಿದ್ಯುತ್ ಉಪಯೋಗಿಸಿ LT-2 ದರ ಪಟ್ಟಿಯಂತೆ ಬಿಲ್ ಪಾವತಿ ಮಾಡುತ್ತಿದ್ದೇವೆ. ಈಗ ವಿದ್ಯುಚ್ಛಕ್ತಿ ಇಲಾಖೆಯವರು ಕೈಗಾರಿಕೆಗಳಿಗೆ ಉಪಯೋಗಿಸುವ LT-5 ವಿದ್ಯುತ್ ಸಂಪರ್ಕ ಪಡೆದುಕೊಂಡು ಅಡಿಕೆ ಸುಲಿಯುವ ಯಂತ್ರವನ್ನು ಉಪಯೋಗಿಸಬೇಕೆಂದು ತೊಂದರೆ ಕೊಡುತ್ತಿದ್ದಾರೆ ಈಗಾಗಲೇ ರೈತರು ವ್ಯವಸಾಯದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ ಹೊಸ ದರ ಪಟ್ಟಿ ಪ್ರಕಾರ ಇನ್ನೂ 9ತಿಂಗಳು ರೈತರು ವಿದ್ಯುಚ್ಛಕ್ತಿ ಉಪಯೋಗಿಸದೆ ಇದ್ದರೂ ಸಹ ಕನಿಷ್ಠ ಶುಲ್ಕವನ್ನು ಕಟ್ಟಲೇಬೇಕಾಗುತ್ತದೆ ಅಲ್ಲದೆ ಮನೆಗಳಿಗೆ ನೀಡಿರುವ ವಿದ್ಯುತ್ ಸಂಪರ್ಕ LT-2 ಗಿಂತ ಕೈಗಾರಿಕೆಗಳಿಗೆ ನೀಡಿರುವ ವಿದ್ಯುತ್ ಸಂಪರ್ಕ LT -5 ದರ ಹೆಚ್ಚಿದೆ ನಾವು ವರ್ಷವಿಡೀ ಕೈಗಾರಿಕೆ ಅವರ ಹಾಗೆ ವಿದ್ಯುಚ್ಛಕ್ತಿ ಬಳಕೆ ಮಾಡುತ್ತಿಲ್ಲ ಮನೆಯ ವಿದ್ಯುತ್ ಸಂಪರ್ಕದ ಜೊತೆ ಹೊಸದಾಗಿ ಸಂಪರ್ಕ ಪಡೆಯಲು ಮುಂಗಡ ಠೇವಣಿ ಮೀಟರ್ ಠೇವಣಿ ಮತ್ತು ದುಬಾರಿ ಹಣ ಸಹ ಕಟ್ಟ ಬೇಕಾಗುತ್ತದೆ ರೈತರಿಗೆ ಇದು ಸಾಧ್ಯವಿಲ್ಲ ಆದ್ದರಿಂದ ಮನೆಯ ವಿದ್ಯುತ್ ಸಂಪರ್ಕ LT-2 ನಲ್ಲಿ ಅಡಿಕೆ ಸುಲಿಯುವ ಯಂತ್ರವನ್ನು ಉಪಯೋಗಿಸಲು ಅವಕಾಶ ಕೊಡಬೇಕು ಜೊತೆಗೆ ಈ ಕೆಳಕಂಡ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.
- ಅಡಿಕೆ ಸುಲಿಯುವ ಯಂತ್ರ ಗಳನ್ನು LT-5 ಬದಲಾಗಿ ಮನೆಯ ವಿದ್ಯುತ್ ಸಂಪರ್ಕ LT- 2 ಉಪಯೋಗಿಸಲು ಅನುಮತಿ ಕೊಡಬೇಕು.
- 63kv TC ಗಳು ದಾಸ್ತಾನು ಇಲ್ಲವೆಂದು ಹೇಳುತ್ತಿದ್ದಾರೆ ಸುಟ್ಟುಹೋದ ಎಲ್ಲಾ TC ಗಳಲ್ಲೂ ಕಾನೂನು ಪ್ರಕಾರ 72 ಗಂಟೆಯೊಳಗೆ ಮರು ಸ್ಥಾಪಿಸಬೇಕು.
- IP ಸೆಟ್ ಗಳಿಗೆ ಕನಿಷ್ಠ ಹತ್ತು ಗಂಟೆ 3ಫೇಸ್ ನಿರಂತರ ವಿದ್ಯುತ್ ಶಕ್ತಿ ನೀಡಬೇಕು.
- IP ಸೆಟ್ ಗಳಿಗೆ ಅಕ್ರಮ ಸಕ್ರಮ ಹತ್ತುಸಾವಿರ ಠೇವಣಿಗೆ 5ಎಚ್ ಪಿ ಗೆ7500 ರೂ ಒಟ್ಟು 17.500 ರೂ ಮಾತ್ರ ಕಟ್ಟಿ ಕೊಳ್ಳಬೇಕು ಬದಲಾಗಿ ವಿದ್ಯುಚ್ಛಕ್ತಿ ಗುತ್ತಿಗೆದಾರರು25.000 ರೂ ವರೆಗೂ ಪಡೆಯುತ್ತಿದ್ದಾರೆ ಇದನ್ನು ತಕ್ಷಣವೇ ನಿಲ್ಲಿಸಬೇಕು.
- ಅಕ್ರಮ ಸಕ್ರಮದಡಿಯಲ್ಲಿ ಹಣ ಕಟ್ಟಿಸಿಕೊಂಡು 4ವರ್ಷ ಕಳೆದರೂ ಸಹ ಕಂಬ ತಂತಿ ಹಾಕಿಲ್ಲ ತಕ್ಷ ಣದಿಂದಲೇ ಹಾಕಿಸಿಕೊಡಬೇಕು.
- ಗ್ರಾಮಠಾಣಾ ಅಲ್ಲ ಪ್ರದೇಶಗಳಲ್ಲಿ 1ಕಿಲೋವ್ಯಾಟ್ ಗೆ 8.500 ರೂ ನಂತೆ ಹಣ ಪಡೆಯುತ್ತಿರುವುದನ್ನು ನಿಲ್ಲಿಸಬೇಕು ಮತ್ತು ಗ್ರಾಮಠಾಣೆಯಲ್ಲಿ ಪಡೆಯುವಷ್ಟು ಹಣವನ್ನು ಮಾತ್ರ ತೆಗೆದುಕೊಂಡು ಸಂಪರ್ಕ ಕೊಡಬೇಕು .
- ಹಳ್ಳಿಗಳಲ್ಲಿ ಸುಮಾರು ವರ್ಷಗಳಿಂದ ಹಾಕಿರುವ ಕಂಬಗಳು ಶಿಥಿಲ ಗೊಳ್ಳುತ್ತಿದ್ದು ಅಪಾಯವಾಗುವ ಮುಂಚೆಯೇ ಅಂತಹ ಕಂಬ ಮತ್ತು ತಂತಿಗಳನ್ನು ಬದಲಿಸಬೇಕು.
- ಗ್ರಾಮಗಳಲ್ಲಿ ವಿಧಿಸುತ್ತಿರುವ ಮಾಸಿಕ ನಿಗದಿತ ಶುಲ್ಕವನ್ನು ಕೈಬಿಡಬೇಕು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ