ದಿನಾಂಕ 19-09-2021ರಂದು ಸಂಜೆ 6.00 ಗಂಟೆಯ ವೇಳೆಯಲ್ಲಿ 5ವರ್ಷದ ಬಾಲಕಿ ಮನೆಯ ಬಾಗಿಲಲ್ಲಿ ಆಟವಾಡುತ್ತಿದ್ದಾಗ ಬಿಹಾರಿ ಮೂಲದ ಯುವಕ ಆ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುತ್ತಾನೆ ಕಳೆದ ತಿಂಗಳಲ್ಲಿ ಮೈಸೂರಿನ ಹೆಣ್ಣು ಮಗಳ ಮೇಲೆ ಗ್ಯಾಂಗ್ ರೇಪ್ ಆಗಿರುತ್ತದೆ ಮತ್ತು ಕಳೆದ ವಾರದ ಹಿಂದೆ ದಾಂಡೇಲಿಯಲ್ಲಿ ಕೂಡ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿರುತ್ತಾರೆ ಆದರೂ ಇಲ್ಲಿಯವರೆಗೂ ರಾಜ್ಯ ಸರ್ಕಾರವು ಯಾವುದೇ ರೀತಿಯ ಬಿಗಿಯಾದ ಶಿಸ್ತು ಕ್ರಮ ಕೈಗೊಂಡಿರುವುದಿಲ್ಲ ಮತ್ತು ಹೊರ ರಾಜ್ಯದಿಂದ ಬರುತ್ತಿರುವವರ ಮೇಲೆ ರಾಜ್ಯ ಸರ್ಕಾರ ಅವರ ಮೇಲೆ ಗಮನ ಹರಿಸುತ್ತಿಲ್ಲ ಶಿವಮೊಗ್ಗ ನಗರದಲ್ಲಿ ಗಾಂಜಾ ಮತ್ತು ಡ್ರಗ್ಸ್ ಮಾರಾಟ ಚಲಾವಣೆಯಲ್ಲಿರುತ್ತದೆ ಹಿಂದೆ ಶಿವಮೊಗ್ಗದ ಬಸ್ ಸ್ಟಾಂಡ್ ಸಮೀಪದಲ್ಲಿ ಭಿಕ್ಷೆ ಬೇಡುವ ಮಹಿಳೆಯ ಮೇಲೂ ಸಹ ಅತ್ಯಾಚಾರ ಮಾಡಿ ಕೊಲೆ ಮಾಡಲಾಯಿತು ಇಷ್ಟೇಲ್ಲ ನಡೆಯುತ್ತಿದ್ದರೂ ಸಹ ಯಾವುದೇ ರೀತಿಯ ಶಿಸ್ತು ಕಾನೂನು ಕ್ರಮ ಜರುಗಿಸುವುದಿಲ್ಲ ಆದುದರಿಂದ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಇನ್ನು ಮುಂದಾದರೂ ರಾಜ್ಯ ಸರ್ಕಾರ ಮತ್ತೆ ಶಿವಮೊಗ್ಗ ಜಿಲ್ಲಾಡಳಿತ ಕೃತ್ಯ ಎಸಗಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇವೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ