ಶಿವಮೊಗ್ಗ ನಗರದ ಇಂದಿಗೂ ಬಹಿರ್ದೆಸೆಯಿಂದ ಮುಕ್ತವಾಗದೆ ಮಲಮೂತ್ರಗಳನ್ನು ಅಭಿವೃದ್ಧಿಹೊಂದಿದ ಬಡಾವಣೆ ಸೇರಿದಂತೆ ಸಾಕಷ್ಟು ಸ್ಲಂ ಏರಿಯಾಗಳಲ್ಲಿ ಮಧ್ಯಮ ಅಭಿವೃದ್ಧಿ ಏರಿಯಾಗಳ ಸ್ವಚ್ಛತೆ ಕಾಣದ ಸ್ಥಳಗಳಲ್ಲಿ ಸಾರ್ವಜನಿಕರ ಬಹಿರಂಗ ಟಾಯ್ಲೆಟ್ ಗಳಾಗಿದೆ.ಇದಕ್ಕೆ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವ ಪಾಲಿಕೆಯ ಆರೋಗ್ಯಾಧಿಕಾರಿಗಳು ಕಮರ್ಷಿಯಲ್ ಕಟ್ಟಡಗಳಿಗೆ ಪರವಾನಿಗೆ ನೀಡುವ ಇಂಜಿನಿಯರ್ ಗಳು ಸೇರಿದಂತೆ ಪಾಲಿಕೆಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕರವೇ ಯುವಸೇನಾ ಈ ಮೂಲಕ ತಿಳಿಸುತ್ತದೆ. ಶಿವಮೊಗ್ಗ ನಗರದಲ್ಲಿರುವ ಎರಡಕ್ಕಿಂತ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಶೇಕಡಾ 80% ಕಾಂಪ್ಲೆಕ್ಸ್ ಗಳಿಗೆ ಶೌಚಾಲಯಗಳೇ ಇಲ್ಲವಾಗಿದೆ ಅಲ್ಲದೆ ಕೆಲ ಕಾಂಪ್ಲೆಕ್ಸ್ ಗಳು ಲಘು ವಾಹನ ನಿಲುಗಡೆಗೆ ಮೀಸಲಾಗಿರುವ ನೆಲಮಾಳಿಗೆಯನ್ನು ಕೂಡ ಬಿಡದೆ ವಾಣಿಜ್ಯ ಮಳಿಗೆಗಳನ್ನಾಗಿ ಪರಿವರ್ತಿಸಿ ಕೊಂಡಿದ್ದಾರೆ ಪರವಾನಿಗೆ ನೀಡುವ ಪಾಲಿಕೆ ಎಂಜಿನಿಯರ್ ಗಳು ಸೆಟ್ ಬ್ಯಾಕ್ ನಿಯಮಾವಳಿಗಳನ್ನು ಪರಿ ಗಣಿಸದೇ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ನೀಡಲಾಗುವ ಪರವಾನಿಗೆ ಸುಳ್ಳು ವರದಿಗಳನ್ನು ಪಾಲಿಕೆಗೆ ನೀಡಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದು ಇದರಿಂದ ಸಾಬೀತಾಗುತ್ತದೆ ಸೆಟ್ ಬ್ಯಾಕ್ ನಿಯಮಾವಳಿಯಲ್ಲಿ ನೆಲಮಾಳಿಗೆಗೆ ಲಘು ವಾಹನ ನಿಲುಗಡೆ ಹಾಗೂ ಶೌಚಾಲಯ ನಿರ್ಮಾಣ ಇರಬೇಕೆನ್ನುವುದು ಇದ್ದರೂ ಬಹುತೇಕ 80%ಕೌನ್ಸಿಲರ್ ಗಳಿಗೆ ಶೌಚಾಲಯಗಳೇ ಇಲ್ಲ ಎಂದರೆ ಇದು ಪಾಲಿಕೆಯ ಅಧಿಕಾರಿಗಳ ಅಧಿಕಾರ ದುರುಪಯೋಗ ಹಾಗೂ ಸುಳ್ಳು ವರದಿ ಎಂದು ದೃಢಪಡುತ್ತದೆ ಎನ್ನುವುದು ತಮ್ಮ ಅವಗಾಹನೆಗೆ ಕರ ಬಯಸುತ್ತೇವೆ. ಹಾಗೂ ಹಳೆಯ ದಾದ ಕಾಂಪ್ಲೆಕ್ಸ್ ಗಳು ಎಂದು ಸಬೂಬು ಹೇಳಿ ಸೆಟ್ ಬ್ಯಾಕ್ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಕಟ್ಟಡಗಳನ್ನು ಸೇರಿದಂತೆ ಹೊಸ ಶೌಚಾಲಯ ನಿರ್ಮಿಸದೆ ಇರುವುದನ್ನು ಪರಿಶೀಲಿಸಿ ನೋಟಿಸ್ ಜಾರಿಗೊಳಿಸದೆ ಇರುವುದರಿಂದ ಶಿವಮೊಗ್ಗ ನಗರದಲ್ಲಿ ಕಾಂಪ್ಲೆಕ್ಸ್ ಗಳಿಗೆ ಶೌಚಾಲಯಗಳೇ ಹೊಂದಿಲ್ಲವಾಗಿದೆ ಎಂದು ಕರವೇ ಯುವಸೇನೆ ತಿಳಿಸುತ್ತದೆ. ಇಂತಹ ದುರ್ಘ ವ್ಯವಸ್ಥೆಗಳಿಂದ ಸಾರ್ವಜನಿಕ ಶೌಚಾಲಯಗಳು ಇಲ್ಲದೆ ಶೇಕಡಾ 80% ಖಾಸಗಿ ಕಾಂಪ್ಲೆಕ್ಸ್ ಗಳು ಶೌಚಾಲಯವೇ ಹೊಂದಿಲ್ಲದೇ ಇರುವುದರಿಂದ ಶಿವಮೊಗ್ಗ ನಗರ ಎಂದಿಗೂ ಬಹಿರ್ದೆಸೆಯಿದ ಮುಕ್ತವಾಗದೆ ಜನ ಓಡಾಟ ಪ್ರದೇಶಗಳನ್ನೇ ಮೂತ್ರವಿಸರ್ಜನೆಗೆ ಆಯ್ಕೆ ಮಾಡಿಕೊಂಡಿರುವ ಸಾರ್ವಜನಿಕವಾದ ಇಂತಹ ಸ್ಥಳಗಳು ಸಾಂಕ್ರಾಮಿಕ ರೋಗಗಳನ್ನು ಹರಡುವ ಪ್ರದೇಶಗಳಾಗಿ ಪರಿವರ್ತನೆ ಗೊಂಡಿವೆ ಸಾರ್ವಜನಿಕ ಆರೋಗ್ಯದ ಹಿತ ದೃಷ್ಟಿಯಿಂದ ಜಿಲ್ಲಾಡಳಿತ ಗಮನಹರಿಸಿ ಮಹಾನಗರಪಾಲಿಕೆಗೆ ತಕ್ಷಣವೇ ಆದೇಶಿಸಿ ಕಾನೂನುರೀತ್ಯ ಕ್ರಮ ಕೈಗೊಳ್ಳುವಂತೆ ಕರವೇ ಯುವಸೇನೆ ಆಗ್ರಹಿಸುತ್ತದೆ. ಸ್ಮಾರ್ಟ್ ಸಿಟಿ ಅಮೃತ್ ಯೋಜನೆಯ ಕಾಮಗಾರಿ ಪರಿಶೀಲನೆ ಇಂದು ಕೇವಲ ಪೊಲಿಟಿಕಲ್ ಗಿಮಿಕ್ ಗಾಗಿ ಕಾಮಗಾರಿ ಸ್ಥಳಗಳಲ್ಲಿ ಭೇಟಿ ನೀಡುವ ಸಚಿವರು ಹಾಗೂ ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಗಳು ಶಿವಮೊಗ್ಗ ನಗರದ ಬಹಿರ್ದೆಸೆ ಮುಕ್ತಕ್ಕೂ ಮುಂದಾಗಲಿ ತ್ವರಿತ ಕ್ರಮ ಕೈಗೊಳ್ಳಲಿ ಎನ್ನುವುದು ಕರವೇ ಯುವಸೇನೆ ತಿಳಿ ಹೇಳಲು ಬಯಸುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ