ಕತ್ತಲೆಯ ಕಳೆದು
ಬೆಳಕು ಮೂಡುವಂತೆ
ಕಷ್ಟಗಳು ಕಳೆದು
ಸುಖವು ಬರುವಂತೆ
ಸೋಲಿನ ನಂತರ ಸತತ ಪ್ರಯತ್ನದಿ
ಗೆಲುವು ಖಚಿತ ಎಂದು ಆತ್ಮವಿಶ್ವಾಸದಿ…ಸಾಗುತ್ತಿರಬೇಕು
ಸಾಧನೆಯ ಹಾದಿಯಲಿ….

ಪ್ರತಿ ಸಾಧಕನ ಹಾದಿಯಲ್ಲಿ
ಕಲ್ಲು ಮುಳ್ಳುಗಳೇ ಸಾಲು ಸಾಲು
ಎದೆಗುಂದದೆ ಆತ್ಮಸ್ಥೈರ್ಯ ದಿ
ನಿರಂತರ ಪ್ರಯತ್ನದಿ ಗೆಲುವು
ಪಡೆದೇ ಪಡೆಯುವನೆಂಬ
ದೃಢನಿರ್ಧಾರದಿ ಮುನ್ನುಗ್ಗಿದರೆ
ಗೆಲುವು ಕಾಲಡಿಯಲಿ…

ಕಾಲು ಎಳೆಯುವವರ ಮಧ್ಯೆ
ಮಂದಹಾಸ ಬೀರುತ್ತಾ
ಹತ್ತೆಜ್ಜೆ ಮುಂದೆ ಸಾಗಿ
ಇರಬೇಕು ಕಾರ್ಯಪ್ರವೃತ್ತರಾಗಿ
ಮಾತೇ ಸಾಧನೆಯಾಗಬಾರದು
ಸಾಧನೆ ಮಾತಾಗಬೇಕು…

ಆಡಿಕೊಳ್ಳುವ ಜಗದಲಿ
ಗೆಲ್ಲುವ ಛಲವಿರಬೇಕು
ತುಳಿದು ನೋಡುವವರ ಮುಂದೆ
ಎದ್ದು ನಿಂತು ಗೆದ್ದು ತೋರಿಸಬೇಕು
ಅಸಾಧ್ಯವಾದದ್ದನ್ನು… ಸಾಧ್ಯವಾಗಿಸುವ ಮನವಿರಬೇಕು
ಅಸಾಧ್ಯವೆಂಬುದಿಲ್ಲ ಈ ಜಗದಲಿ…

ಅನಿತಕೃಷ್ಣ
ಶಿಕ್ಷಕಿ
ತೀರ್ಥಹಳ್ಳಿ