ರಂಗಭೂಮಿಯಲ್ಲಿ ಯಶಸ್ಸು ಸಾಧಿಸಲು ಆರೋಗ್ಯ ಮತ್ತು ಮನಸ್ಸು ಸದೃಢವಾಗಿಟ್ಟುಕೊಳ್ಳಬೇಕು ಎಂದು ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಹೇಳಿದರು.
ಶಿವಮೊಗ್ಗ ನಗರದ ಶಿವಗಂಗಾ ಯೋಗಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಂಗಭೂಮಿಗೂ ಯೋಗಕ್ಕೂ ಬಹಳ ನಂಟಿದ್ದು, ಮನಸ್ಸು ಸದೃಢವಾಗಿ ಇಟ್ಟುಕೊಳ್ಳಬೇಕಾದರೆ ಯೋಗ, ಪ್ರಾಣಾಯಮ, ಧ್ಯಾನದ ಅವಶ್ಯಕತೆ ಇದೆ. ಆಧುನಿಕ ಯುಗದಲ್ಲಿ ಕೆಲಸದ ಒತ್ತಡದಿಂದ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೆಲಸ ಸರಿಯಾಗಿ ಸಾಗುವುದಿಲ್ಲ. ಯೋಗದ ಅಭ್ಯಾಸದಿಂದ ಮನಸ್ಸು ಸದೃಢವಾಗಿಟ್ಟುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಕಲಾವಿದರು ದಿನನಿತ್ಯದ ಜೀವನದಲ್ಲಿ ಯೋಗದ ಅಭ್ಯಾಸವನ್ನು ನಡೆಸಬೇಕು. ಆರೋಗ್ಯಯುತ ಜೀವನಶೈಲಿ ಸಿಗುವ ಜತೆಯಲ್ಲಿ ಕೆಲಸದಲ್ಲಿಯು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಶಿವಗAಗಾ ಯೋಗಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಮಾತನಾಡಿ, ನಮ್ಮ ಯೋಗ ಕೇಂದ್ರ ಪುಣ್ಯಭೂಮಿಯಾಗಿದ್ದು, ಎಲ್ಲ ಯೋಗಬಂಧು ಹಾಗೂ ದಾನಿಗಳ ಸಹಕಾರದಿಂದ ೮ ವರ್ಷಗಳ ಕಾಲದಿಂದ ಮುನ್ನಡೆಯುತ್ತಿದೆ. ಶಿವಮೊಗ್ಗದಲ್ಲಿ ಯೋಗದ ಆರೋಗ್ಯಧಾಮ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗುರುತಿಸಿ ಗೌರವಿಸುವ ಕಾರ್ಯವನ್ನು ಶಿವಗಂಗಾ ಯೋಗಕೇಂದ್ರದಿAದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ರಂಗಭೂಮಿಯಲ್ಲಿ ಸಾಧನೆ ಮಾಡಿರುವ ಕೃಷ್ಣಮೂರ್ತಿ ಕವತ್ತಾರ್ ಅವರಿಗೆ ಗೌರವಿಸಲಾಗುತ್ತಿದೆ. ಸಾಧಕರಿಗೆ ಗೌರವಿಸುವುದರಿಂದ ಇನ್ನಷ್ಟು ಜನರಿಗೆ ಅವರವರ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೇರಣೆ ಸಿಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಲನಚಿತ್ರ ನಟ, ರಂಗ ನಿರ್ದೇಶಕ, ಕಿರುತೆರೆ ಕಲಾವಿದ ಕೃಷ್ಣಮೂರ್ತಿ ಕವತ್ತಾರ್‌ಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಯೋಗಶಿಕ್ಷಕ ಬಸವರಾಜ್, ಓಂಕಾರ್, ರಂಗಭೂಮಿ ಕಲಾವಿದ ಹಾಲಸ್ವಾಮಿ, ಲಕ್ಷ ಜಿ.ವಿಜಯ್‌ಕುಮಾರ್ ಹಾಗೂ ಯೋಗಬಂಧುಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ