- ಪರೀಕ್ಷಾ ಶುಲ್ಕ ಹೆಚ್ಚಳ ಮತ್ತು ಪೂರ್ಣ ಪರೀಕ್ಷಾ ಶುಲ್ಕವನ್ನು ತೆಗೆದು ಕೊಳ್ಳು ವುದನ್ನು ಖಂಡಿಸಿ : ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳವಾಗಿರುತ್ತದೆ ಕೊರೊನಾದ ಈ ಸಂದರ್ಭದಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದು ಖಂಡನೀಯ ವಾಗಿರುತ್ತದೆ ಇದಷ್ಟೇ ಅಲ್ಲದೇ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕ್ರಮವಾಗಿ 2,4ಮತ್ತು 2ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಕೊರೊನಾದ ಸಂದರ್ಭದಲ್ಲಿ ಪ್ರಮೋಟ್ ಆಗಿರುತ್ತಾರೆ ಆದ್ದರಿಂದ ಈ ಸೆಮಿಸ್ಟರ್ ನ ಪರೀಕ್ಷೆಗಳು ನಡೆಯುತ್ತಿಲ್ಲ ವಾದ್ದರಿಂದ ವಿಶ್ವವಿದ್ಯಾಲಯವು ಇದನ್ನು ಪರಿಗಣಿಸಿ ಪಡೆದ ಪೂರ್ಣಪ್ರಮಾಣದ ಪರೀಕ್ಷಾ ಶುಲ್ಕವನ್ನು ಮುಂದಿನ ಸೆಮಿಸ್ಟರ್ ನ ಪರೀಕ್ಷೆ ಗಳಿಗೆ ಪರಿಗಣಿಸಬೇಕೆಂದು ನಿಮ್ಮನ್ನು ಆಗ್ರಹಿಸುತ್ತದೆ.
- ಮರುಮೌಲ್ಯಮಾಪನ ಅವ್ಯವಸ್ಥೆಯನ್ನು ಖಂಡಿಸಿ : ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಅಂಕಗಳು ಸಮಾಧಾನ ಇಲ್ಲದ ಪಕ್ಷದಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿರುತ್ತಾರೆ ಆದರೆ ಮರು ಮೌಲ್ಯಮಾಪನದ ಫಲಿತಾಂಶವನ್ನು ಪ್ರಕಟಿಸಿದೆ ಮುಂದಿನ ಸೆಮಿಸ್ಟರ್ ನ ಪರೀಕ್ಷಾ ಶುಲ್ಕವನ್ನು ಕಟ್ಟಿಸಿ ಕೊಳ್ಳುತ್ತಿರುವುದು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿದೆ ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಜಾಗೃತಗೊಂಡು ಆದಷ್ಟು ಬೇಗನೆ ಮರು ಮೌಲ್ಯಮಾಪನದ ಫಲಿತಾಂಶವನ್ನು ಕೊಡಬೇಕೆಂದು ಮತ್ತು ಪಾಸಾದ ವಿದ್ಯಾರ್ಥಿಗಳ ಕಟ್ಟಿದ ಪರೀಕ್ಷಾ ಶುಲ್ಕವನ್ನು ಪುನಃ ಭರಿಸಬೇಕೆಂದು ಈ ನಿಟ್ಟಿನಲ್ಲಿ ಆಗ್ರಹಿಸುತ್ತೇವೆ.
- ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ : ಕೊರೋನಾ ಕಾರಣದಿಂದಾಗಿ ಬಹುತೇಕ ಪಠ್ಯಕ್ರಮದ ಪಾಠಗಳು ಆನ್ ಲೈನ್ ನಲ್ಲೇ ನಡೆದಿದ್ದು ವಿದ್ಯಾರ್ಥಿಗಳಿಗೆ ಆಫ್ ಲೈನ್ ತರಗತಿಗಳು ಕೆಲವು ದಿನಗಳಷ್ಟೇ ನಡೆಯುವುದರಿಂದ ಪಠ್ಯಕ್ರಮವು ಸಂಪೂರ್ಣವಾಗಿ ಮುಗಿದಿರುವುದಿಲ್ಲ. ಆದ್ದರಿಂದ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸುತ್ತೇವೆ.
- ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲ ಕಾಲೇಜುಗಳಲ್ಲಿ ಹೆಚ್ಚಿನ ಪ್ರವೇಶಾತಿ ನೀಡಬೇಕೆಂದು ಆಗ್ರಹಿಸಿ : ಪ್ರಸಕ್ತ ವರ್ಷದಲ್ಲಿ ಎಲ್ಲ ಪಿಯು ವಿದ್ಯಾರ್ಥಿಗಳನ್ನು ಕೊರೋನಾ ವಿಶೇಷ ಸಂದರ್ಭದಲ್ಲಿ ತೇರ್ಗಡೆ ಮಾಡಿರುವ ಕಾರಣ ಸಾಮಾನ್ಯವಾಗಿ ಪದವಿ ತರಗತಿಗಳಿಗೆ ಪ್ರವೇಶಾತಿ ಬೇಡಿಕೆ ಹೆಚ್ಚಿದೆ ಆ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಅಗತ್ಯ ಇರುವ ಎಲ್ಲ ಪದವಿ ಕಾಲೇಜುಗಳಿಗೆ ಹೆಚ್ಚಿನ ಪ್ರವೇಶಾತಿಗೆ ಅವಕಾಶ ನೀಡಬೇಕೆಂದು ಈ ಮೂಲಕ ನಿಮ್ಮನ್ನು ಆಗ್ರಹಿಸುತ್ತೇವೆ.
- ಪ್ರಸಕ್ತ ಸಾಲಿನ 6ನೇ ಸೆಮಿಸ್ಟರ್ ನ ಪದವಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾ ಪಟ್ಟಿಗೆ ಆಕ್ಷೇಪಣೆ ವ್ಯಕ್ತಪಡಿಸಿ : ಕುವೆಂಪು ವಿಶ್ವವಿದ್ಯಾಲಯವು 2020-21 ಮೇ ರಿಂದ ಪದವಿಯ 6ನೇ ಸೆಮಿಸ್ಟರ್ ನ ಎಲ್ಲಾ ಕೋರ್ಸ್ ಗಳ ಲಿಖಿತ ಪರೀಕ್ಷೆಯ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಆದರೆ ಈ ವೇಳಾಪಟ್ಟಿಯ ಪ್ರಕಾರ ವಿದ್ಯಾರ್ಥಿಗಳ ಪರೀಕ್ಷೆಗಳು ಸತತವಾಗಿ ಇರುವುದರಿಂದ ವಿದ್ಯಾರ್ಥಿಗಳಿಗೆ ಓದಲು ಸಮಯ ಇಲ್ಲದಂತಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಂಭವವಿದೆ .ಕೊರೋನಾ ಕಾರಣದಿಂದ ಸರಿಯಾಗಿ ಪಾಠ ಪ್ರವಚನಗಳು ನಡೆಯದೆ ಈ ಸಂದರ್ಭದಲ್ಲಿ ಈ ರೀತಿಯ ವೇಳಾಪಟ್ಟಿಯು ವಿದ್ಯಾರ್ಥಿಗಳನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ ಆದ್ದರಿಂದ ತಾವುಗಳು ಈ ಕೂಡಲೇ ಸದರಿ ವೇಳಾಪಟ್ಟಿಯನ್ನು ಪರಿಶೀಲನೆ ಮಾಡಿ ವಿದ್ಯಾರ್ಥಿಗಳಿಗೆ ಪೂರಕವಾಗಿ ವೇಳಾ ಪಟ್ಟಿಯನ್ನು ತಯಾರು ಮಾಡಿ ಕೊಡಬೇಕೆಂದು ನಿಮ್ಮಲ್ಲಿ ಆಗ್ರಹಿಸುತ್ತೇವೆ.
ಈ ಮೇಲ್ಕಂಡ ಸಮಸ್ಯೆಗಳಷ್ಟೆ ಅಲ್ಲದೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ಟೂಡೆಂಟ್ ಪೋರ್ಟಲ್ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಆದ್ದರಿಂದ ವಿಶ್ವವಿದ್ಯಾಲಯ ಆದಷ್ಟು ಬೇಗನೆ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಮ್ಮನ್ನು ಆಗ್ರಹಿಸುತ್ತದೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ