ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದರೂ ಕೂಡ ಪರಿಶಿಷ್ಟ ಜಾತಿಯವರು ಗೌರವಯುತವಾಗಿ ತಮ್ಮವರ ಶವ ಸಂಸ್ಕಾರ ಮಾಡಲು ಯಾವುದೇ ಸ್ಮಶಾನ ಭೂಮಿ ಇರಲಿಲ್ಲ ಇದು ಅತ್ಯಂತ ಬೇಸರದ ಸಂಗತಿಯಾಗಿತ್ತು. ಶಿವಮೊಗ್ಗ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿ ಇಲ್ಲದಿರುವುದನ್ನು ಗಮನಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳೆದ 2ದಶಕಗಳಿಂದ ಹೋರಾಟವನ್ನು ಮಾಡುತ್ತಾ ಬಂದಿತ್ತು ನಮ್ಮ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ 15-16ನೇ ಸಾಲಿನ ಆಯವ್ಯಯದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯವರಿಗಾಗಿ ಸ್ಮಶಾನ ಭೂಮಿ ಇಲ್ಲದಿರುವ ಕಡೆ ಸ್ಮಶಾನಕ್ಕಾಗಿ ಸರ್ಕಾರಿ ಜಮೀನು ಅಥವಾ ಖಾಸಗಿಯವರಿಂದ ಜಮೀನು ಖರೀದಿ ಮಾಡಿ ಕೊಡಿಬೇಕೆಂದು ಘೋಷಣೆ ಮಾಡಿ ದಿನಾಂಕ: 28-03-2016 ಎಂದು ಆದೇಶ ನೀಡಿದೆ. ಈ ಸಂಬಂಧ ಶಿವಮೊಗ್ಗ ತಾಲ್ಲೂಕು ನಿಧಿಗೆ 2 ನೇ ಹೋಬಳಿ ಹಾಲಲಕ್ಕವಳ್ಳಿ ಗ್ರಾಮದ ಸರ್ವೆ ನಂಬರ್ 19 ರಲ್ಲಿ 2ಎಕರೆ ಜಾಗವನ್ನು ಸರ್ಕಾರ ಎಂ ಆರ್ ಟಿ 11/2016-17 ದಿನಾಂಕ :06-10-2016 ರಂದು ಸ್ಮಶಾನಕ್ಕೆಂದು ಮಂಜೂರು ಮಾಡಿ ಕಾಯ್ದಿರಿಸಿತ್ತು ಆದರೆ ಸದರಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಮೇಲುಜಾತಿಯ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದು ಪರಿಶಿಷ್ಟರು ಶವಗಳನ್ನು ಹೂಳಲು ಜಾಗವಿಲ್ಲದೆ ಸುಮಾರು 4-5ಕಿಲೋ ಮೀಟರ್ ಕಾಡಿನಲ್ಲಿ ಹೋಗಿ ಹೂಳಬೇಕಾದ ದಾರುಣ ಸ್ಥಿತಿ ಉಂಟಾಗುತ್ತದೆ ಆದುದರಿಂದ ಸರ್ಕಾರ ಬಲಾಢ್ಯರು ಒತ್ತುವರಿಯಾಗಿರುವ ಸ್ಮಶಾನ ಭೂಮಿಯನ್ನು ತೆರವುಗೊಳಿಸಿ ಅದ್ದಬುಬಸ್ತ್ ಗೊಳಿಸಿ ಅಭಿವೃದ್ಧಿಪಡಿಸುವಂತೆ ಸಮಿತಿಯು ಈ ಮೂಲಕ ಒತ್ತಾಯಿಸುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ