ಹತ್ತಾರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತ, ಪತ್ರಿಕಾ ಮತ್ತು ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರಿಗೆ ಬಾಂಗ್ಲದೇಶದ ಪ್ರತಿಷ್ಠಿತ ಜೀನಿಯಸ್ (ಜಿ.ಎಪಿಎಸ್) ಡಿಸ್ಟಿಂಕ್ಷನ್ ಪ್ರಶಸ್ತಿ ಲಭಿಸಿದೆ.
ಇವರ ವನ್ಯಜೀವಿ, ಪ್ರವಾಸ, ಪತ್ರಿಕೋದ್ಯಮ, ವರ್ಣ, ಕಪ್ಪು-ಬಿಳುಪು, ಸ್ಟ್ರೀಟ್ & ಲ್ಯಾಂಡ್‌ಸ್ಕೇಪ್ ಫೋಟೋಗ್ರಾಫಿ ಮತ್ತು ಜನಜೀವನ ಸೇರಿದಂತೆ ೨೫ಕ್ಕೂ ಹೆಚ್ಚು ಛಾಯಾಚಿತ್ರಗಳು ಆಯ್ಕೆಯಾಗಿ ತೀರ್ಪುಗಾರರ ಪ್ರಶಂಸೆಗೆ ಪಾತ್ರವಾಗಿದೆ. ಮತ್ತು ಬಹುಮಾನ ಪಡೆದಿವೆ.
ಈ ಹಿನ್ನೆಲೆಯಲ್ಲಿ ಬಾಂಗ್ಲದೇಶದ ಅಗಿಲೆ ಫೋಟೋಗ್ರಾಫಿ ಸೊಸೈಟಿಯೂ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‌ಗೆ ಪ್ರತಿಷ್ಠಿತ ಜೀನಿಯಸ್ (ಜೀನಿಯಸ್ ಅಗಿಲೆ ಫೋಟೋಗ್ರಾಫಿ ಸೊಸೈಟಿ) ಡಿಸ್ಟಿಂಕ್ಷನ್ ಅವಾರ್ಡ್ ನೀಡಿ ಗೌರವಿಸಿದೆ.
ಅಲ್ಲದೆ ಫೋಟೋ ಜರ್ನಾಲಿಸಂ ವಿಭಾಗದಲ್ಲಿ ನಾಲ್ಕು ಚಿತ್ರಗಳು ಏಕಕಾಲಕ್ಕೆ ಆಯ್ಕೆಯಾಗಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ವಿಶೇಷ ಸಾಧನೆ ಎಂದು ಗುರುತಿಸಿ ಅಭಿನಂದಿಸಿದೆ. ದಶಕಕ್ಕೂ ಹೆಚ್ಚುಕಾಲ ವನ್ಯಜೀವಿ, ಪರಿಸರ, ಜನಜೀವನ ಸೇರಿದಂತೆ ವಿಶೇಷ ಛಾಯಾಗ್ರಹಣದಲ್ಲಿ ತೊಡಗಿ ಹಲವೆಡೆ ಛಾಯಾಚಿತ್ರ ಪ್ರದರ್ಶನ ಮತ್ತು ಪರಿಸರ ವನ್ಯಜೀವಿಗಳ ಉಳುವಿಗಾಗಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಇವರಿಗೆ ಚಿನ್ನ, ಬೆಳ್ಳಿ ಸೇರಿದಂತೆ ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿದ್ದು, ಇವರ ಈ ಸಾಧನೆಗೆ ಹಲವು ಸಂಘ, ಸಂಸ್ಥೆಗಳು ಗುರುತಿಸಿ ಗೌರವಿಸಿವೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ