ಸ್ವ ಸಹಾಯ ಸಂಘಗಳ ಒಕ್ಕೂಟದ ಸದಸ್ಯರಾದ ನಾವು ಸಮೂದಾಯ ಆರೋಗ್ಯ ಕೇಂದ್ರಕ್ಕೆ ಒಳಪಡುವ ಎಲ್ಲ ಗ್ರಾಮಗಳಲ್ಲಿನ ಸ್ವಸಹಾಯ ಸಂಘದ ಮಹಿಳೆಯರು ಮತ್ತು ಗ್ರಾಮಸ್ಥರು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದು ಆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಚ್ಚುವರಿ ಮಹಿಳಾ ವೈದ್ಯಾಧಿಕಾರಿಗಳು ಇಲ್ಲವಾದ್ದರಿಂದ ಮಹಿಳೆಯರು ಈ ಕೆಳಕಂಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
- ರಾತ್ರಿ ವೇಳೆಯಲ್ಲಿ ವೈದ್ಯಾಧಿಕಾರಿಗಳು ಲಭ್ಯವಿಲ್ಲದ ಕಾರಣ ಗರ್ಭಿಣಿ ಬಾಣಂತಿಯರು ವಯೋವೃದ್ಧರು ಆರೋಗ್ಯ ಸೇವೆಗಾಗಿ ನಗರ ಪ್ರದೇಶಗಳಿಗೆ ತೆರಳುತ್ತಿದ್ದಾರೆ * ತುರ್ತು ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಇಲ್ಲದ ಕಾರಣ ಸಕಾಲಕೆ ಸೇವೆ ದೊರಕದೇ ಪ್ರಾಣ ಹಾನಿಯಾಗುತ್ತಿದೆ * ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ಮಹಿಳಾ ವೈದ್ಯಾಧಿಕಾರಿ ಗಳು ಇರುವುದರಿಂದ ಮಹಿಳೆಯರಿಗೆ ಸಕಾಲಕ್ಕೆ ಸೂಕ್ತ ಸೇವೆಗಳು ದೊರಕುವುದಿಲ್ಲ * ರಾತ್ರಿ ವೇಳೆಯಲ್ಲಿ ನವಜಾತ ಶಿಶುಗಳಿಗೆ ಹಾಗೂ ಗರ್ಭಿಣಿ ಬಾಣಂತಿಯರಿಗೆ ವೈದ್ಯಾಧಿಕಾರಿಗಳ ಸೇವೆ ಲಭ್ಯವಿಲ್ಲದ ಕಾರಣ ಕಾಯಿಲೆ ಉಲ್ಬಣ ಗೊಂಡಿದೆ. * ವೈದ್ಯಾಧಿಕಾರಿಗಳ ಕೊರತೆ ಯಿಂದಾಗಿ ವಿವಿಧ ತಪಾಸಣೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಅಪಾರ ಹಣ ವಿನಿಯೋಗವಾಗುತ್ತಿದೆ. ಹಲವಾರು ಸಮಸ್ಯೆಗಳನ್ನು ಸಮುದಾಯದ ಜನರಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತರು ಕೂಲಿ ಕಾರ್ಮಿಕರು ಸಣ್ಣ ಮತ್ತು ಅತಿಸಣ್ಣ ರೈತರು ವಯೋವೃದ್ಧರು ಎದುರಿಸುತ್ತಿದ್ದು ಮಾನ್ಯರಾದ ತಾವುಗಳು ಈ ಎಲ್ಲಾ ಗಂಭೀರವಾದ ಸಮಸ್ಯೆಗಳನ್ನು ಪರಿಶೀಲಿಸಿ ಶೀಘ್ರವೇ ನಮ್ಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ನುರಿತ ಕರ್ತವ್ಯ ಇಷ್ಟ ದಕ್ಷ ಪ್ರಾಮಾಣಿಕ ಹಾಗೂ ಸಮರ್ಪಣಾ ಮನೋಭಾವ ಇರುವ ಮಹಿಳಾ ವೈದ್ಯಾಧಿಕಾರಿಗಳನ್ನು ತಕ್ಷಣ ನೇಮಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇವೆ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ