ಎಲ್ಲಾ ಪಡಿತರ ಕಾರ್ಡ್ ಹೊಂದಿರುವವರಿಗೆ ಬಡವರಿಗೆ ಅಡಕೆಗಾಗಿ ಸೀಮೆಎಣ್ಣೆ ನೀಡಲಾಗುತ್ತಿತ್ತು ಆದರೆ ಬಿಜೆಪಿ ಸರ್ಕಾರ ಒಂದು ಹೆಜ್ಜೆ ಮುಂದೆ ಬಂದು ಬಡವರಿಗಾಗಿ ಉಚಿತ ಗ್ಯಾಸ್ ಗಳನ್ನು ನೀಡಿ ಗ್ಯಾಸ್ ಅನಿಲ ಖರೀದಿಯೊಂದಿಗೆ ಸಬ್ಸಿಡಿ ನೀಡಿ ಜನಮೆಚ್ಚುಗೆ ಪಡೆದಿದ್ದರು. ಆದರೆ ಈಗ ಯಾವುದೇ ಸಬ್ಸಿಡಿಯೂ ಇಲ್ಲ ಸದಾ ಬಡವರ ಬಗ್ಗೆ ಮಾತನಾಡುವ ಸರ್ಕಾರ ಕೂಡಲೇ ಬಿಪಿಎಲ್ ಕಾರ್ಡ್ ನಲ್ಲಿ ನೀಡುವ ಉಚಿತ ಅಕ್ಕಿ ನೀಡುವಂತೆ ಈಗ ಗ್ಯಾಸ್ ದುಬಾರಿ ಆಗಿರುವುದರಿಂದ ಕಾರ್ಡ್ ದಾರರಿಗೆ 2ತಿಂಗಳಿಗೆ 1ಸಿಲಿಂಡರ್ ಆದರೂ ಕೂಪನ್ ಗಳ ಮೂಲಕ ನೀಡಿ ಎಂದು ಸಂಘಟನೆ ಆಗ್ರಹಿಸುತ್ತದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ಉಪವಾಸ ಪಡದಂತೆ ಅಡುಗೆ ಅನಿಲ ಗ್ಯಾಸ್ ಅನಿಲವನ್ನು ಉಚಿತವಾಗಿ ನೀಡಿ. ಸದಾಕಾಲವೂ ದೇಶದ ಸಂಸ್ಕೃತಿ ಬಗ್ಗೆ ಮಾತನಾಡುವ ಕೇಂದ್ರ ರಾಜ್ಯ ಸರ್ಕಾರ ಮಾಜಿ ಮುಖ್ಯಮಂತ್ರಿ ಮಾಜಿ ಕೇಂದ್ರ ಸಚಿವ ಸದಾನಂದಗೌಡರು ಎನ್ನಲಾದ ಅಶ್ಲೀಲ ಸೆಕ್ಸ್ ಪ್ರಚೋದಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕೂಡಲೇ ಇದರ ಬಗ್ಗೆ ಸರ್ಕಾರ ಸತ್ಯಸತ್ತತೆ ಬಗ್ಗೆ ಸೂಕ್ತ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿ ಹಾಗೂ ಸತ್ಯವಾಗಿದ್ದಲ್ಲಿ ಕೂಡಲೇ ಉನ್ನತ ಹುದ್ದೆಗಳಲ್ಲಿದ್ದು ಕಾಮಪ್ರಚೋದನೆ ಅತ್ಯಾಚಾರ ಪ್ರಚೋದನೆ ಪ್ರಕರಣಕ್ಕೆ ಪ್ರಚೋದಕ ನೆಂಬ ಕಾಮುಕ ಸದಾನಂದಗೌಡರನ್ನು ಬಂಧಿಸಿ ಸಂಸದ ಸ್ಥಾನ ಹಾಗೂ ಸಾಂಸ್ಕೃತಿ ಬಿಂಬಿಸುವ ಬಿಜೆಪಿ ಪಕ್ಷದಿಂದ ಉದ್ಘಾಟಿಸಿ ಅಧಿಕಾರಿ ದುರುಪಯೋಗದಿಂದ ಹೆಣ್ಣು ಮಕ್ಕಳನ್ನು ಈ ರೀತಿ ಉಪಯೋಗಿಸುತ್ತಿರುವ ಯಾವುದೇ ಸಂಸದನಾಗಿರಲಿ ಶಾಸಕನಾಗಿರಲಿ ಪಕ್ಷಗಳು ಕಠಿಣ ಕ್ರಮ ಜರುಗಿಸಿ ಸಂಬಂಧಿಸಿದ ಇಲಾಖೆಗೆ ಸ್ವಯಂ ದೂರು ದಾಖಲಿಸಿ ಈಗಾಗಲೇ ಮಕ್ಕಳು ಮೊಮ್ಮಕ್ಕಳ ಈ ರೀತಿಯಾದರೆ ಯುವ ಸಮೂಹ ಹಾದಿ ತಪ್ಪಿ ಅತ್ಯಾಚಾರಿಗಳ ಆಗುತ್ತಿದ್ದಾರೆ.ಈಗಾಗಲೇ ಅತ್ಯಾಚಾರ ಪ್ರಕರಣಗಳು ದೇಶದ ಎಲ್ಲೆಡೆ ಹೆಚ್ಚಿದ್ದು ಭಯವೇ ಇಲ್ಲವಾಗಿದೆ ಹೊಸದಾಗಿ ಇಂತಹ ಪ್ರಕರಣಗಳಿಗಾಗಿಯೇ ಶೀಘ್ರ ನ್ಯಾಯ ಪರಿಹಾರಕ್ಕಾಗಿ ವಿಶೇಷ ನ್ಯಾಯಾಲಯ ಹಾಗೂ ಶೀಘ್ರ ಗಲ್ಲಿಗೇರಿಸುವ ಶಿಕ್ಷೆ ಜಾರಿ ಮಾಡಿ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಬೇಕೆಂದು ಸಂಘಟನೆ ಆಗ್ರಹಿಸುತ್ತದೆ. ಈ ಸಂದರ್ಭದಲ್ಲಿ ಮಂಜುನಾಥ್ ಆರ್ ಪಿ, ನಜೀರ್ ಅಹ್ಮದ್ , ರಮೇಶ್, ಸೂರಜ್, ರವಿಪ್ರಕಾಶ್ ,ಇನ್ನಿತರರು ಇದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ