• ಭೋವಿ ಬಂಜಾರ ಚಲವಾದಿ ಕೊರಚ ಕೊರಮ ಅಲೆಮಾರಿ ಅರೆ ಅಲೆಮಾರಿ ಸುಡುಗಾಡು ಸಿದ್ಧ ಇನ್ನಿತರೆ ಸಮುದಾಯಗಳಿಗೆ ಕಂಟಕವಾಗಿರುವ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಈ ವರದಿಯನ್ನು ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆಮಾಡಬೇಕು ಸೋರಿಕೆಯಾಗಿರುವ ಈ ವರದಿಯ ಅಂಶಗಳನ್ನು ಗಮನಿಸಿದಾಗ ಇದಕ್ಕೆ ಪಾವಿತ್ರ್ಯತೆ ಇಲ್ಲ ಅನಿಸುತ್ತದೆ ಆಯೋಗ ತನ್ನ ಉದ್ದೇಶಕ್ಕೆ ವಿರುದ್ಧ ಶಿಫಾರಸ್ಸುಗಳನ್ನು ಮಾಡಿದೆ ಅಸಂವಿಧಾನಿಕ ಅಂಶಗಳು ಮತ್ತು ಅವಾಸ್ತವಿಕ ಅಂಕಿ ಅಂಶಗಳು ಈ ವರದಿಯಲ್ಲಿವೆ ಹೀಗಾಗಿ ಈ ವರದಿ ಈಗ ಅಪ್ರಸ್ತುತ ಇದು ಸ್ವೀಕಾರಕ್ಕೆ ಯೋಗ್ಯವಲ್ಲ .
  • ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಮಧ್ಯೆ ದ್ವೇಷ ಪ್ರಚೋದನೆ ಬಿತ್ತಲು ಹೊರಟಿರುವ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮತ್ತು ರಾಜ್ಯ ಸಚಿವ ಗೋವಿಂದ ಕಾರಜೋಳರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು.
  • ಹೋರಾಟಗಳ ಹೆಸರಿನಲ್ಲಿ ಬಂಜಾರಾ ಕುಲಗುರು ಸಂತ ಸೇವಾಲಾಲ್ ಮತ್ತು ಸಚಿವ ಪ್ರಭು ಚವ್ಹಾಣ್ ಅವರನ್ನು ಅವಹೇಳನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
  • ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಯತ್ನ ಮತ್ತು ಸಂವಿಧಾನಿಕ ನಿಯಮಗಳಡಿ ಪರಿಶಿಷ್ಟರಿಗೆ ಮೀಸಲಾತಿ ಸೌಲಭ್ಯ ಸಿಗುತ್ತದೆ ಆದರೆ ಸಂಘಪರಿವಾರದ ಕೆಲವರು ಮತ್ತು ರಾಜಕೀಯ ಪಕ್ಷಗಳ ಕೆಲ ಮುಖಂಡರು ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದು ಕಂಡುಬರುತ್ತದೆ ಸಹೋದರರ ಸಮುದಾಯಗಳಲ್ಲಿ ದ್ವೇಷ ಪ್ರೀತಿ ಒಡೆದಾಳುವ ಕುತಂತ್ರ ಗಳನ್ನು ನಿಲ್ಲಿಸಬೇಕು.
  • ಸರ್ಕಾರವು ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತಂದು ವರದಿಯಲ್ಲಿರುವ ಜಾತಿಗಳಿಗೆ ಅನ್ಯಾಯವಾದರೆ ಮುಂದಿನ ದಿನಗಳಲ್ಲಿ ಈ ಸಮಾಜಗಳ ವಿರೋಧವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಮೀಸಲಾತಿ ಸಂರಕ್ಷಣಾ ಒಕ್ಕೂಟ ಎಚ್ಚರಿಸಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ