ಅತ್ಯಂತ ವಿಷಾದದ ಪರಿಸ್ಥಿತಿಯಲ್ಲಿರುವ ಈ ಯೋಜನೆಗಳನ್ನು ಮತ್ತು ಸ್ಕೀಂ ವರ್ಕರ್ಸ್ ಬೇಡಿಕೆಗಳಿಗೆ ಮತ್ತು ಫಲಾನುಭವಿಗಳ ಸವಲತ್ತುಗಳನ್ನು ಹೆಚ್ಚಿಸಲು ಸೂಕ್ತ ಕ್ರಮ ವಹಿಸಬೇಕೆಂದು ಸಿಐಟಿಯು ನೇತತ್ವದ ಅಂಗನವಾಡಿ ಬಿಸಿಯೂಟ ಮತ್ತು ಆಶಾ ಸಂಘಟನೆಗಳು ಮತ್ತು ಇತರ ಕೇಂದ್ರ ಕಾರ್ಮಿಕ ಸಂಘಟನೆಗಳು ಒಂದಾಗಿ ಸೆಪ್ಟೆಂಬರ್ 24 ರಂದು ದೇಶಾದ್ಯಂತ ಮುಷ್ಕರ ನಡೆಸಲಾಗುತ್ತಿದೆ ಈ ಕೆಳಕಂಡ ಬೇಡಿಕೆಗಳನ್ನು ಸ್ಪಂದಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ.
- ಮುಂಚೂಣಿಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮತ್ತು ಬಿಸಿಯೂಟ ನೌಕರರಿಗೆ ಕಾಲಮಿತಿಯೊಂದಿಗೆ ಉಚಿತವಾಗಿ ವ್ಯಾಕ್ಸಿನೇಷನ್ ಮಾಡುವುದು.
- ಮುಂಚೂಣಿಯಲ್ಲಿರುವ ಅಂಗನವಾಡಿ ಬಿಸಿಯೂಟ ಮತ್ತು ಆಶಾ ಸುರಕ್ಷತಾ ಸಾಧನಗಳನ್ನು ಒದಗಿಸುವುದು ಕೋವಿಡ್- 19 ರ ಕಡ್ಡಾಯವಾಗಿ ಮಾಡಿಸಿ ಸೋಂಕಿನಿಂದ ರಕ್ಷಿಸುವುದು.
- ಜೆ ಡಿ ಪಿ ಯ ಶೇಕಡಾ ಆರರಷ್ಟು ಹಣವನ್ನು ಆರೋಗ್ಯ ಇಲಾಖೆ ಮೀಸಲಿಟ್ಟು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಮೂಲಭೂತ ಸೌಕರ್ಯಗಳಾದ ಆಮ್ಲಜನಕ ಮೊದಲಾದವುಗಳನ್ನು ಒದಗಿಸುವುದು.
- ಹೆಚ್ಚುವರಿಯಾಗಿ ಮಾಸಿಕ ಹತ್ತು ಸಾವಿರಗಳ ಕೋವಿಡ್-19 ಭತ್ಯೆ ನೀಡುವುದು.
- ಸೇವೆಯಲ್ಲಿದ್ದಾಗ ಕೋವಿಡ್-19 ರ ಸೋಂಕಿನಿಂದ ಪೀಡಿತರಾದವರಿಗೆಲ ಕನಿಷ್ಠ ಹತ್ತು ಲಕ್ಷ ರೂಗಳ ಪರಿಹಾರ ನೀಡುವುದು.
- ಕಾರ್ಮಿಕ ವಿರೋಧಿ ಸಂಹಿತೆಗಳನ್ನು ವಾಪಸ್ಸು ಪಡೆಯಿರಿ ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಿ.
- ಕೇಂದ್ರ ಯೋಜನೆ ಸ್ಕೀಂ ನೌಕರರನ್ನು ಕಾಯಂಗೊಳಿಸಿ ಬಜೆಟ್ಟಿನಲ್ಲಿ ಅನುದಾನ ನೀಡುವುದು.
- ಇಂಡಿಯನ್ ಲೇಬರ್ ಕಾನ್ಫರೆನ್ಸ್ ನ ನಲವತ್ತೈದನೇ ಹಾಗೂ ಅರುವತ್ತಾರನೇ ಅಧಿವೇಶನದ ಶಿಫಾರಸ್ಸಿನಂತೆ ಸ್ಕೀಮ್ ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಿ ರೂ 21000 ಗಳ ಮಾಸಿಕ ಕನಿಷ್ಠ ವೇತನ ನೀಡುವುದು ಮಾಸಿಕ ಪಿಂಚಣಿ ರೂ ಹತ್ತು ಸಾವಿರ ನೀಡುವುದು ಹಾಗೂ ಇಎಸೈ ಮತ್ತು ಭವಿಷ್ಯ ನಿಧಿ ಸವಲತ್ತುಗಳನ್ನು ಕಲ್ಪಿಸುವುದು.
- ಹಾಲಿ ಇರುವ ವಿಮಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಂಗನವಾಡಿ ವರ್ಕರ್ಸ್ ಧನಶ್ರೀ ಭೀಮ್ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಬೇಕು ಈ ಯೋಜನೆಗಳನ್ನು ಅಂಗನವಾಡಿ ಬಿಸಿಯೂಟ ಆಶಾ ನೌಕರರಿಗೆ ಜಾರಿ ಮಾಡಬೇಕು.
- ಐಸಿ ಡಿಎಸ್ ಮತ್ತು ಬಿಸಿಯೂಟ ಯೋಜನೆ ನೇರ ನಗದು ವರ್ಗಾವಣೆ ಡಿಬಿಟಿ ತರಬಾರದು.
- ಯೋಜನೆಗಳ ಕೆಲಸಗಾರರಿಗೆ ಮಾಸಿಕ ತಲಾ ಹತ್ತು ಕೆಜಿ ಆಹಾರ ಧಾನ್ಯವನ್ನು ಕರೋನಾ ಅವಧಿಗೆ ನೀಡಬೇಕು ಬೆಲೆ ಏರಿಕೆ ತಡೆಗಟ್ಟಬೇಕು 6ತಿಂಗಳ ಅವಧಿಗೆ ತೆರಿಗೆದಾರರೆಲ್ಲ ಇಲ್ಲದ ಕುಟುಂಬಗಳಿಗೆ ರೂ ಹತ್ತು ಸಾವಿರ ಗಳನ್ನು ನೀಡುವುದು ಎಲ್ಲರಿಗೂ ಕೆಲಸ ನೀಡಬೇಕು.
- ಎಂ ಡಿ ಎಂ ಮತ್ತು ಐಸಿಡಿಎಸ್ ಸೇರಿದಂತೆ ಮೂಲ ಸೇವೆ ಒದಗಿಸುವ ಯೋಜನೆಗಳನ್ನು ಉದ್ದೇಶಪೂರ್ವಕವಾಗಿ ಖಾಸಗೀಕರಣಗೊಳಿಸುವುದು ಕೈಬಿಡುವುದು.
- ಬಿಸಿಯೂಟ ನೌಕರರಿಗೆ ಎಲ್ ಐಸಿ ಆಧಾರಿತ ಪೆನ್ಷನ್ ನಿಗದಿ ಮಾಡಬೇಕು ಮತ್ತು ಈ ಫ್ಯಾಷನ್ ನಿಗದಿಯಾಗುವರೆಗೂ ಕೂಡಲೇ ಬಿಡುಗಡೆ ಮಾಡಬೇಕಾದ ನೌಕರರಿಗೆ 1ಲಕ್ಷ ಐವತ್ತು ಸಾವಿರ ಹಿಡಿಗಂಟು ನೀಡಿ ಬಿಡುಗಡೆ ಮಾಡಬೇಕು.
- 60 ವರ್ಷ ವಯಸ್ಸಿನ ನೆಪವೊಡ್ಡಿ ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯಬಾರದು.
- ಶಾಲಾ ಅವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸ ನೀಡಿ ನರೇಗಾ ಯೋಜನೆಯಿಂದ ವೇತನ ನೀಡುವಂತಾಗಬೇಕು.
- ಶಾಲೆಗಳಲ್ಲಿ ಗ್ರೂಪ್ ಡಿ ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಛತೆ ನಿರ್ವಹಣೆ ಶಾಲಾ ಸಮಯದ ಗಂಟೆ ಬಾರಿಸೋದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿ ಗಳೆಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು.
- ಹಳ್ಳಿಯಲ್ಲಿರುವ ಆಹಾರದ ಹಕ್ಕು ಮತ್ತು ಶಿಕ್ಷಣದ ಹಕ್ಕಿನ ಬಗ್ಗೆ ಕಾಯ್ದೆ ಇರುವಂತೆ ಸಾರ್ವತ್ರಿಕ ಆರೋಗ್ಯ ಒದಗಿಸುವ ಬಗ್ಗೆ ಕಾಯ್ದೆ ರೂಪಿಸುವುದು.
- ಅತ್ಯಂತ ಶ್ರೀಮಂತ ನಿಗೆ ಅಧಿಕ ತೆರಿಗೆ ವಿಧಿಸಿ ಆರ್ಥಿಕ ಸಂಗ್ರಹಣೆ ಹೆಚ್ಚಿಸಬೇಕು ಸೆಂಟರ್ ಇಷ್ಟ ಪ್ರಾಜೆಕ್ಟ್ ನಂತಹ ಯೋಜನೆಗಳನ್ನು ಕೈಬಿಡುವುದು .
- ರಾಜ್ಯ ಸರ್ಕಾರದ 339.45 ಲಕ್ಷ ರೂಗಳ ಅನುದಾನ ಅಂಗನವಾಡಿ ನೌಕರರಿಗೆ ಕೂಡಲೇ ಕೈಬಿಡಬೇಕು.
- ನೂತನ ಶಿಕ್ಷಣ ನೀತಿ ಯಿಂದ ಐ ಸಿ ಡಿ ಎಸ್ ಮತ್ತು ಬಿಸಿಯೂಟ ಯೋಜನೆಗಳಲ್ಲಿ ರಕ್ಷಿಸಬೇಕು.
ಈ ಸಂದರ್ಭದಲ್ಲಿ ಭಾಗ್ಯಮ್ಮ, ಅಶ್ವಿನಿ, ತಾರಾ, ಚಂದ್ರಮ್ಮ, ಸುನೀತಾ, ಇನ್ನಿತರರು ಇದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ