ಜಿಲ್ಲಾ ಮಟ್ಟದ ರೋರ‍್ಸ್ ಮತ್ತು ರೇಂರ‍್ಸ್ ಪರೀಕ್ಷಾ ಶಿಬಿರದ ಉದ್ಘಾಟನಾ ಸಮಾರಂಭ ನೆರವೇರಿಸಲಾಯಿತು. ಸ್ಪರ್ಧಾತ್ಮಕ ಯುಗದಲ್ಲಿ ಮಾನವೀಯ ಮೌಲ್ಯಗಳ ಕೊರತೆ ಕಾಣುತ್ತಿದೆ” ಎಂದು ಡಾ. ಅಮಿತ್ ಕುಮಾರ್ ಹೇಳಿಕೆ
ಶಿಕ್ಷಣ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರದೆ, ಮಕ್ಕಳ ಸವೋತೋಮುಖ ಬೆಳವಣಿಗೆಗೆ ಸೀಮಿತವಾಗಿರಬೇಕು. ಪುಸ್ತಕದ ಕಲಿಕೆಯಿಂದ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯವಿಲ,್ಲ ಜೀವನದ ಪ್ರತಿಯೊಂದು ಕ್ಷಣವನ್ನು ಸದುಪಯೋಗ ಮಾಡಿಕೊಂಡು ನಮ್ಮಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಮಕ್ಕಳು ಪರಿಸರದೊಂದಿಗೆ ಬೆರೆತು ಕಲಿಯಬೇಕು, ಸಮಾಜಸೇವೆ ಮತ್ತು ದೇಶ ಸೇವೆಯೇ ಮುಖ್ಯ ಧ್ಯೇಯವಾಗಿರಬೇಕು ಎಂದು ಅಶೋಕ ಸಂಜೀವಿನಿ ವೈಧ್ಯರಾದ ಡಾ. ಅಮಿತ್ ಕುಮಾರ್‌ರವರು ಜಿಲ್ಲಾ ಮಟ್ಟದ ರೋರ‍್ಸ್ ಮತ್ತು ರೇಂರ‍್ಸ್ ಪರೀಕ್ಷಾ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ನಾನು ಸಹ ರಾಷ್ಟçಪತಿ ಸ್ಕೌಟ್ ಆಗಿ ತುಂಬಾ ಅನುಭವವನ್ನು ಸ್ಕೌಟಿಂಗ್‌ನಿAದ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶ್ ಶಾಸ್ತಿçಯವರು ಇಂದಿನ ಯುವ ಪೀಳಿಗೆ ತಮ್ಮ ಅಮೂಲ್ಯವಾದ ಸಮಯವನ್ನು ಅಂತರ್ಜಾಲದಲ್ಲಿ ಕಳಿಯುತ್ತಿರುವುದು ವಿಶಾದನಿಯ, ಸಮಯದ ಸದುಪಯೋಗ ಪಡಿಸಿಕೊಂಡು ಜೀವನದ ಗುರಿಯತ್ತ ಗಮನವಹಿಸಬೇಕೆಂದು ಹೇಳಿದರು.
ಈ ಶಿಬಿರಕ್ಕೆ ಜಿಲ್ಲೆಯ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ೧೪೦ ರೇಂರ‍್ಸ್ (ವಿದ್ಯಾರ್ಥಿನಿಯರು) ೯೭ ರೋರ‍್ಸ್ (ವಿದ್ಯಾರ್ಥಿಗಳು) ಒಟ್ಟು ೨೧ ಕಾಲೇಜಿನಿಂದ ಭಾಗವಹಿಸಿರುತ್ತಾರೆ. ಈ ಶಿಬಿರದ ಸಂಘಟನೆಯನ್ನು ಹಾಗೂ ನಾಯಕರಾಗಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ ರವರು ಕಾರ್ಯನಿರ್ವಹಿಸುತ್ತಿದ್ದು, ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಜಿಲ್ಲಾ ಸಹ ಕಾರ್ಯದರ್ಶಿಯವರಾದ ಶ್ರೀ ವೈ.ಆರ್.ವೀರೇಶಪ್ಪನವರು ವಹಿಸಿದ್ದರು. ಉದ್ಘಾಟನಾ ಸಮಾರಂಬಕ್ಕೆ ಜಿಲ್ಲಾ ಆಯುಕ್ತರುಗಳಾದ ಶ್ರೀ ಕೆ.ಪಿ ಬಿಂದುಕುಮಾರ, ಶ್ರೀಮತಿ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಈ ಪವಾರ, ಜಿಲ್ಲಾ ಕಾರ್ಯದರ್ಶಿ ಶ್ರೀ ಹೆಚ್. ಪರಮೇಶ್ವರ್, ಸಂಪನ್ಮೂಲ ವ್ಯಕ್ತಿಯಾಗಿ ಡಿಟಿಸಿ ಶ್ರೀಮತಿ ಕಾತ್ಯಾಯಿನಿ, ಶ್ರೀ ಹೆಚ್. ಶಿವಶಂಕರ್, ಶ್ರೀ ಪರಮೇಶ್ವರಯ್ಯ, ಶ್ರೀಮತಿ ರೇಣುಕಾ ಎಸ್.ಜಿ ವಿ ಕುಮಾರಿ ಸುಮಲತಾ, ಶ್ರೀ ನೂರ್ ಅಹಮದ್, ಕುಮಾರಿ ಸೌಮ್ಯ, ಕುಮಾರ ಲೋಹಿತ್ ಕಾಲೇಜಿನ ರೋವರ್ ಲೀಡರ್ ಹಾಗೂ ರೇಂಜರ್ ಲೀಡರ್‌ಗಳು ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ