ಒಕ್ಕೂಟ ಸರ್ಕಾರದ 3ಕೃಷಿ ಕಾಯಿದೆಗಳನ್ನು ಘೋಷಣೆ ಮಾಡಿದ್ದ 1ವರ್ಷ ಹಾಗೂ ದೆಹಲಿ ರೈತ ಚಳುವಳಿಗೆ ಹತ್ತು ತಿಂಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ರೈತಾಪಿ ಕೃಷಿಯನ್ನು ನಾಶ ಮಾಡಿ ರೈತರ ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಜಾರಿಗೆ ತಂದಿರುವ 3ಕೃಷಿ ಕಾಯಿಲೆಗಳನ್ನು ಹೊತ್ತು ವಿದ್ಯುತ್ ಮಸೂದೆಯನ್ನು ರದ್ದುಮಾಡಬೇಕೆಂದು ಆಗ್ರಹಿಸಿ ಐನೂರಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27 ಭಾರತ್ ಬಂದ್ ಗೆ ಕರೆ ನೀಡಿದೆ. ನಮ್ಮ ಒಕ್ಕೂಟ ಸರ್ಕಾರಕ್ಕಿಂತಲೂ 1ಹೆಜ್ಜೆ ಮುಂದೆ ನಿಂತಿರುವ ನಮ್ಮ ರಾಜ್ಯ ಸರ್ಕಾರದ ನಡೆ ಅಪಾಯಕಾರಿಯಾದದ್ದು ಸರ್ಕಾರ ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಕೃಷಿ ಭೂಮಿಯನ್ನು ಕೃಷಿಕರಲ್ಲದ ಶ್ರೀಮಂತರು ಮತ್ತು ಅತಿ ದೊಡ್ಡ ಕಾರ್ಪೊರೇಟ್ ಕಂಪನಿಗಳ ಕೈಗೆ ರತ್ನ ಕಂಬಳಿ ಹಾಸಿ ನೀಡುತ್ತಿದೆ ಕೋವಿಡ್ ನಂತಹ ಬಹಳ ತೀವ್ರ ಸಂಕಷ್ಟದಲ್ಲಿಯೂ ಭೂ ನೊಂದಾವಣಿಗೆ ಗಳ ಸಂಖ್ಯೆ ಶೇಕಡಾ 50ಕ್ಕಿಂತಲೂ ಹೆಚ್ಚು ಇರುವುದನ್ನು ನೋಡಿದರೆ ಭೂಸುಧಾರಣೆ ಕಾಯ್ದೆಯ ತಿದ್ದುಪಡಿ ಹಿಂದಿನ ಮರ್ಮ ಅರ್ಥವಾಗುತ್ತದೆ ಈ ರೀತಿಯಲ್ಲಿ ಶ್ರೀಮಂತ ಕಂಪೆನಿಗಳಿಗೆ ವಹಿಸಲು ಜಾರಿಗೆ ತಂದಿರುವ ಈ ಕಾಯಿದೆಗಳು ಉತ್ಪಾದನೆಯ ಜತೆಗೆ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆಯಲು ಮುಂದಾಗುತ್ತಿದೆ ಅದಲ್ಲದೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುತ್ತಿರುವುದು ಕೂಡ ಇನ್ನೊಂದು ದೊಡ್ಡ ಗದ ಪ್ರಹಾರವಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ಅಸಂಖ್ಯಾತ ರೈತರು ಗೋಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ ಮಾಡುವುದರ ಮುಖಾಂತರ ಹೈನುಗಾರಿಕೆಯಲ್ಲಿ ತೊಡಗಿರುವ ಅಸಂಖ್ಯಾತ ರೈತರಿಗೆ ಮರಣ ಶಾಸನವಾಗಲಿದೆ ಇನ್ನೂ ಮುಂದೆ ಹೋಗಿ ರಾಷ್ಟ್ರೀಯತೆಯ ಮುಸುಕಿನಲ್ಲಿ ಲವ ಮನು ವಾದವನ್ನು ಅನುಷ್ಠಾನಕ್ಕೆ ತರುವ ನೂತನ ಶಿಕ್ಷಣ ನೀತಿ ಜಾರಿಗೆ ತರಲು ತುದಿಗಾಲಿನಲ್ಲಿ ರಾಜ್ಯ ಸರ್ಕಾರ ನಿಂತಿದೆ. ಇದು ಈ ಸಮಾಜವನ್ನು ಶತಮಾನಗಳ ಕಾಲ ಹಿಂದಕ್ಕೆ ತಳ್ಳುವ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ತಂದಿರುವ ಮಳೆಯಾಗಿದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಜನ ಸಾಮಾನ್ಯರ ಬದುಕನ್ನು ಹೈರಾಣಾಗಿಸಿದೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವಾರು ಬಡ ಕೂಲಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗುವುದನ್ನು ನೋಡುತ್ತೇವೆ ಕೃಷಿ ಬಿಕ್ಕಟ್ಟಿನ ಫಲವಾಗಿ ಲಕ್ಷಲಕ್ಷ ಅನ್ನದಾತರು ಅನಾಥರಾಗುತ್ತಿದ್ದಾರೆ ದೊಡ್ಡ ವಿಭಾಗದ ರೈತರು ಕಂಬನಿಯ ಕೃಷಿಯಿಂದ ಹೊರಗಟ್ಟಿ ಅವರನ್ನು ಅವರ ಹೊಲ ಗದ್ದೆಗಳಲ್ಲಿಯೇ ಕಾರ್ಪೊರೇಟ್ ಕಂಪೆನಿಗಳ ದೇಶ ದಾಳು ಗಳನ್ನಾಗಿ ಮಾಡಲು ಒಕ್ಕೂಟ ಸರ್ಕಾರ ನಿರ್ಧಾರ ಮಾಡಿದೆ. ಸೇವಾ ವಲಯವಾಗಿ ಸಾರ್ವಜನಿಕ ಆಸ್ತಿಯಾಗಿದ್ದು ವಿದ್ಯುತ್ ಕ್ಷೇತ್ರವನ್ನು ಅಂಬಾನಿ ಅದಾನಿಗಳಿಗೆ 3ಕಾಸಿಗೆ ಮಾರಾಟ ಮಾಡಲು ವಿದ್ಯುತ್ ಮಸೂದೆ 2020 ಸಂಸತ್ತಿನಲ್ಲಿ ಮಂಡನೆಯಾಗಿದೆ ಮುಂದಿನ ದಿನಗಳಲ್ಲಿ ರೈತರು ಪಂಪ್ ಸೆಟ್ ಗಳು ಭಾಗ್ಯಜ್ಯೋತಿ ಕುಟೀರ ಜ್ಯೋತಿ ಯೋಜನೆ ಗಳಿಗೆ ಉಚಿತವಾಗಿ ನೀಡುತ್ತಿದ್ದ ವಿದ್ಯುತನ್ನು ನಿಲ್ಲಿಸಲಾಗುತ್ತದೆ . ಈ ಹಿನ್ನೆಲೆಯಲ್ಲಿ ದೆಹಲಿಯ ಗಡಿಗಳಲ್ಲಿ ಹತ್ತು ತಿಂಗಳಿಗೆ ನಂದಲು ಲಕ್ಷಾಂತರ ರೈತರು ನಡೆಸುತ್ತಿರುವಂತಹ ಈ ಹೋರಾಟದ ಬೇಡಿಕೆಗಳಲ್ಲಿ ನ್ಯಾಯಯುತವಾಗಿ ಪರಿಹರಿಸಲು ಒಕ್ಕೂಟ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಅದು ಮಾತ್ರವಲ್ಲ ಈ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಪ್ರಭುತ್ವದ ಈ ಹೋರಾಟವನ್ನು ಹತ್ತಿಕ್ಕಲು ಸರ್ವೇ ಪ್ರಯತ್ನವನ್ನು ನಡೆಸುತ್ತಿದೆ. ಈ ರೀತಿಯಲ್ಲಿ ಕರಾಳ ಮತ್ತು ಜೀವ ವಿರೋಧಿ ಮಸೂದೆ ಕಾಯ್ದೆಗಳನ್ನು ಬೇಷರತ್ತಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂಪಡೆಯಬೇಕೆಂದು ಒತ್ತಾಯಿಸುವಂತಹ ಚಾರಿತ್ರಿಕ ಹೋರಾಟಕ್ಕೆ ನಾವು ಮುಂದಾಗುತ್ತಿದ್ದೇವೆ ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಸಮಾನತೆಯ ಆಶಯಗಳನ್ನು ಬುಡಮೇಲು ಮಾಡುವಂತಹ ಈ ಷಡ್ಯಂತ್ರಕ್ಕೆ ಸೆಡ್ಡು ಹೊಡೆಯಲು ತಯಾರಾಗಿರುವ ಈ ಭಾರತ ಬಂದ್ ಭಾಗವಾಗಿ ಶಿವಮೊಗ್ಗದಲ್ಲೂ ಬಂದನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ. ಸ್ನೇಹಿತರೆ ವ್ಯಾಪಾರಸ್ಥರೇ ಉದ್ಯಮಿಗಳೇ ಹಾಗೂ ಎಲ್ಲಾ ಬಡ ಕೂಲಿ ಕಾರ್ಮಿಕರೇ ತಮಗೆಲ್ಲಾ ತಿಳಿದಿರುವಂತೆ ಕೋವಿಡ್ ಮೊದಲ ಮತ್ತು ಎರಡನೇ ಅಲೆಗಳಲ್ಲಿ ತಮ್ಮ ಒಟ್ಟಾರೆ ವ್ಯಾಪಾರ ವಹಿವಾಟು ಕೆಟ್ಟ ಬಿಕ್ಕಟ್ಟಿನಲ್ಲಿದೆ ಎಂಬುದನ್ನು ನಮಗೆ ಅರಿವಿದೆ ಪ್ರತಿನಿತ್ಯ ನೀವು ದುಡಿದು ಆ ದಿನದ ಒಲೆ ಹೊತ್ತಿಸುವ ಬೇಕಾದಂತಹ ತುರ್ತು ಸನ್ನಿವೇಶ ಎದುರಾಗಿರುವುದು ನಮಗೆ ಮಾಹಿತಿಯಿದೆ ಈ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಬದುಕನ್ನೇ ಸಂಪೂರ್ಣ ನಾಶಮಾಡುವ ನಮ್ಮ ಬದುಕನ್ನೇ ಹೈರಾಣಗಿಸುವ ಇದಕ್ಕಿಂತ ದೊಡ್ಡ ಗದಾಪ್ರಹಾರ ಮಾಡುವ ಈ ಕಾಯಿದೆಗಳ ವಿರುದ್ಧ ಹೋರಾಟ ಮಾಡುವುದು ನಮ್ಮ ಜೀವನ್ಮರಣದ ಹೋರಾಟವಾಗಿದೆ. ಹಾಗಾಗಿ ತಾವೆಲ್ಲರೂ ಈ 1ದಿನ ರೈತರಿಗಾಗಿ ಬಡವರಿಗಾಗಿ ಅದಕ್ಕೆ ಎಲ್ಲಕ್ಕಿಂತಲೂ ಮುಖ್ಯವಾಗಿ ಸಣ್ಣ ಪುಟ್ಟ ವ್ಯಾಪಾರಿಗಳು ಚಾಲಕರು ವರ್ತಕರು ನಿಮಗೋಸ್ಕರ ಈ ಒಂದು ದಿನದ ಬಂದ್ ಅನ್ನು ಸಂಪೂರ್ಣವಾಗಿ ಸಹಕರಿಸಬೇಕೆಂದು ವಿನಂತಿಸುತ್ತೇನೆ .

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ