ಶಿವಮೊಗ್ಗ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಬೋಧನಾ ಸಂಸ್ಥೆಯ ವತಿಯಿಂದ ವಿಶ್ವ ಫಾರ್ಮಸಿ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈದ್ಯಕೀಯ ಅಧೀಕ್ಷಕರಾದ ಡಾಕ್ಟರ್ ಶ್ರೀಧರ್ ಅವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರ್ಜನ್ ಡಾಕ್ಟರ್ ಸಿದ್ದನಗೌಡ ಪಾಟೀಲ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಐಪಿ ಶಾಂತರಾಜ್ ನರ್ಸಿಂಗ್ ಅಧೀಕ್ಷಕರಾದ ಶ್ರೀಮತಿ ಖಾತುನಬಿ ಸಾಬ್ ಉಪಸ್ಥಿತಿರಿದ್ದರು.

ಆಗಮಿಸಿದ ಫಾರ್ಮಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ವೈದ್ಯಕೀಯ ಅಧೀಕ್ಷಕ ಡಾಕ್ಟರ್ ಶ್ರೀಧರ್ ರವರು ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಫಾರ್ಮಸಿ ಅಧಿಕಾರಿಗಳ ಸೇವೆಯು ಅತ್ಯಂತ ಜವಾಬ್ದಾರಿಯುತವಾಗಿ ದ್ದು ಪ್ರತಿಯೊಬ್ಬ ಫಾರ್ಮಸಿ ಅಧಿಕಾರಿಯೂ ಸಹ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸಿ ಕೋವಿಡ್ ರೋಗದ ವಿರುದ್ದ ಯಶಸ್ವಿಯಾಗಿ ಚಿಕಿತ್ಸೆ ನೀಡಲು ಸಹಕರಿಸಿದ್ದಾರೆ ನಿರಂತರವಾಗಿ ಅವರ ಸೇವೆಯನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೆಂದರೂ

ಮತ್ತೂರು ಮುಖ್ಯಅತಿಥಿ ಡಾಕ್ಟರ್ ಸಿದ್ದನಗೌಡ ಪಾಟೀಲ್ ಮಾತನಾಡುತ್ತಾ ಫಾರ್ಮಸಿಸ್ಟ್ ನೌಕರರು ಪ್ರತಿ ಆರೋಗ್ಯ ಸಂಸ್ಥೆಯ ಆಧಾರ ಸ್ತಂಭಗಳು ಆಸ್ಪತ್ರೆಯಲ್ಲಿನ ಇವರ ಸೇವೆ ಅತ್ಯಂತ ಗಮನಾರ್ಹವಾಗಿದ್ದು ಇವರ ಸೇವೆ ಉನ್ನತೀಕರಿಸಲು ಯಾವುದೇ ವ್ಯವಸ್ಥೆಗಳನ್ನು ಸರ್ಕಾರದಿಂದ ಕಲ್ಪಿಸಿಕೊಡಲು ನಾನು ಸಿದ್ಧನಿದ್ದೇನೆ ಎಂದು ನುಡಿದರು

ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷ ವಿ ಪ್ರಭಾಕರ್ ಮಾತನಾಡುತ್ತಾ ನಮ್ಮ ವೃತ್ತಿ ಸೇವೆಯು ಮಾದರಿ ವೈದ್ಯಕೀಯ ವಿಜ್ಞಾನದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ನಂಬಿಕೆಯಿಂದ ಕೂಡಿದ್ದಾಗಿದ್ದು ರೋಗಿಗಳಿಗೆ ಅವಶ್ಯ ಸೇವೆಯಾಗಿದೆ, ಔಷಧಗಳ ದುಷ್ಪರಿಣಾಮದಿಂದ ತಪ್ಪು ಗ್ರಹಿಕೆ ಮತ್ತು ಬಳಕೆಯಿಂದಾಗಿ ಅತ್ಯಂತ ಹೆಚ್ಚಿನ ಸಾವುಗಳು ಸಂಭವಿಸುತ್ತಿದ್ದು ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಫಾರ್ಮಸಿ ಅಧಿಕಾರಿಗಳ ಸೇವೆಯು ಅತ್ಯಂತ ಅನಿವಾರ್ಯವಾಗಿದ್ದು ರಾಜ್ಯಾದ್ಯಂತ ಖಾಲಿ ಇರುವ ಫಾರ್ಮಸಿ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಬೇಕು ಎಂದರು ಫಾರ್ಮಸಿಸ್ಟ್ ಸೇವೆಗೆ ಪೂರಕವಾಗಿ ಸಹಕಾರ ನೀಡುವ ಶುಶ್ರೂಷಕ ಅಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಎಕ್ಸರೇ ತಂತ್ರಜ್ಞರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಿದರು

ಕಾರ್ಯಕ್ರಮದಲ್ಲಿ , ಶಿವಶೈಲ ಮೂರ್ತಿ,ರವಿಶಂಕರ್ ಕೆ ಎಸ್, ಸಾವನ್ ಕುಮಾರ್ ,ಸತ್ಯನ್ ದೇವ್, ಬೋರಯ್ಯ ಶಿವಕುಮಾರ್ ರಮೇಶ್, ಸಿದ್ದಪ್ಪ, ಪ್ರಶಾಂತ್, ಶ್ರೀಮತಿ ಆಶಾ, ಅನಿಲ್, ರಂಗನಾಥ್, ಥಾಮಸ್ ಮತ್ತು ಇತರೆ ಫಾರ್ಮಸಿ ಅಧಿಕಾರಿಗಳು ಭಾಗವಹಿಸಿದ್ದರು ಶ್ರೀಮತಿ ಗೀತಾ ಪ್ರಾರ್ಥಿಸಿ ವಿಜಯಕಾಂತ್ ನಿರೂಪಿಸಿ ರಮೇಶ ಹೆಗಡೆ ವಂದಿಸಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ