ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಆಲ್ಕೊಳ ವೃತ್ತದ ಶ್ರೀಗಂಧ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪರಸ್ತರಿಂದ ಹಮ್ಮಿಕೊಳ್ಳಲಾದ ಸ್ವಚ್ಚತಾ ಸಪ್ತಾಹ ಆಂದೋಲನ ಕಾರ್ಯಕ್ಕೆ ಜಿಲ್ಲಾಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರು ಆವರಣದಲ್ಲಿ ಸ್ವಚ್ಛತೆಗೊಳಿಸಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಇಡಬೇಕು. ದೇಶದ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ, ಪ್ರತಿಯೊಬ್ಬ ನಾಗರಿಕರು ಒಂದೊಂದು ಗಿಡವ ನೆಡಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಗರದ ನಾಗರಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ ಪರಿಸರದ ಬಗ್ಗೆ ಒಲವು ಮೂಡಿಸುವ ಕಾರ್ಯ ಬೀದಿ ಬದಿ ವ್ಯಾಪಾರಸ್ಥರು ಮಾಡಬೇಕು ಎಂದು ತಿಳಿಸಿದರು. ದೇವಾಲಯದ ಆವರಣ ಸ್ವಚ್ಛಗೊಳಿಸಿ ಸಂಗ್ರಹವಾದ ಕಸವನ್ನು ಪ್ಲಾಸ್ಟಿಕ್ ಬೇರ್ಪಡಿಸಿ ಗೊಬ್ಬರವಾಗಲು ಗಿಡಗಳ ಬುಡದಲ್ಲಿ ಕಸದ ರಾಶಿ ಹಾಕಲಾಯಿತು.
ಈ ಸಂದರ್ಭದಲ್ಲಿ ಸಂಪಿಗೆ, ಬಾದಾಮಿ, ಹೊಂಗೆಯ ಗಿಡಗಳನ್ನು ಆವರಣದಲ್ಲಿ ನೆಡಲಾಯಿತು. ಈ ಕಾರ್ಯಕ್ರಮದಲ್ಲಿ ಟಿವಿಸಿ ಸದಸ್ಯರಾದ ಶ್ರೀವಿನಯ್ ಕುಮಾರ್, ಶ್ರೀಬಾಬು, ಮತ್ತು ಶ್ರೀಗೋಪಾಲ್, ಶ್ರೀಅವಿನಾಶ್, ಶ್ರೀರವಿ, ಶ್ರೀಚಂದ್ರು, ಶ್ರೀಮತಿ ನೇತ್ರಾವತಿ, ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಸದಸ್ಯರು ಸಂಘದ ಪದಾಧಿಕಾರಿಗಳು ಹಾಗೂ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ