ಕುಂಚೇನಹಳ್ಳಿ ಗ್ರಾಮದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಮತ್ತು ಐದೃಷ್ಟಿ ಕಣ್ಣಿನ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಕುಂಚೇನಹಳ್ಳಿ ಗ್ರಾಮಸ್ಥರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷರು ಮಂಜುನಾಥ್ ಕದಂ ಉದ್ಘಾಟಿಸಿ ಮಾತನಾಡುತ್ತಾ ರೋಟರಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರ ಮತ್ತು ಇತರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಆಧುನಿಕ ವ್ಯವಸ್ಥೆಯನ್ನು ದೊರಕಿಸುವ ಉದ್ದೇಶ ಹಾಗೂ ಅಭಿವೃದ್ಧಿ ಆರೋಗ್ಯದ ಬಗ್ಗೆ ಅರಿವು ಶಾಲಾ ಅಭಿವೃದ್ಧಿ ಗಳು ಇನ್ನಿತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ನಡೆಸುತ್ತಾ ಬಂದಿದ್ದು ಕುಂಚೇನಹಳ್ಳಿ ಗ್ರಾಮಸ್ಥರಿಗೆ ನಮ್ಮ ಸಂಸ್ಥೆಯ ಸದಸ್ಯರಾದ ಕುಂಚೇನಹಳ್ಳಿ ರೋಟರಿಯನ್ ಲೋಹಿತ್ ಗೌಡ ರವರ ನೇತೃತ್ವದಲ್ಲಿ ಎಲ್ಲಾ ಗ್ರಾಮಸ್ಥರಿಗೂ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸುತ್ತಿದ್ದು ಎಲ್ಲಾರು ವೃದ್ಧರು ಯುವಕರು ವರ್ಷದಲ್ಲಿ ಒಂದು ಸಾರಿ ಕಣ್ಣಿನ ತಪಾಸಣೆ ಮಾಡಿಸಲೇಬೇಕು ಅಂತೆಯೇ ಈ ದಿನ ಐದೃಷ್ಟಿ ಕಣ್ಣಿನ ಆಸ್ಪತ್ರೆ ಸಿಬ್ಬಂದಿಗಳು ಕಣ್ಣು ಪರೀಕ್ಷೆ ಮಾಡಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳನ್ನು ಇದೆ ಗ್ರಾಮದಿಂದ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ಅದೇ ಊರಿಗೆ ಬಿಟ್ಟು ಬರುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ, ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲಾ ಗ್ರಾಮಸ್ಥರು ಪಡೆದುಕೊಳ್ಳಬೇಕಾಗಿ ಕೋರಿದರು,
ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಮಾಜಿ ಅಸಿಸ್ಟೆಂಟ್ ಗೌರ್ನರ್ ವಿಜಯಕುಮಾರ್ ಜಿ ರವರು ಮಾತನಾಡುತ್ತಾ ಈ ದಿನ ಉಚಿತ ನೇತ್ರ ತಪಾಸಣಾ ಶಿಬಿರ ವನ್ನು ಎಲ್ಲಾ ಗ್ರಾಮಸ್ಥರು ಸದುಪಯೋಗಪಡಿಸಿಕೊಂಡು ವೃದ್ಧರಲ್ಲಿ ಕಣ್ಣಿನ ಪೊರೆ ಹಾಗೂ ದೃಷ್ಟಿಹೀನತೆ ಇರುವುದು ಸರ್ವೇಸಾಮಾನ್ಯ ಆದರೆ ಈಗಿನ ಕಾಲದಲ್ಲಿ ಯುವಕರಿಗೂ ಕಣ್ಣಿನ ತೊಂದರೆಗಳು ಹೆಚ್ಚಾಗಿದೆ ಆಧುನಿಕತೆ ಬೆಳೆದಂತೆ ಟಿವಿ ನೋಡುವುದು, ಮೊಬೈಲ್ ಹೆಚ್ಚಿನ ಬಳಕೆಯಿಂದ ಕಣ್ಣಿನ ತೊಂದರೆ ಉಂಟಾಗುವುದು ಸಾಮಾನ್ಯ ಅಂತೆಯೇ ವರ್ಷಕ್ಕೆ ಒಂದು ಬಾರಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕು, ಎಲ್ಲರೂ ಕಣ್ಣು ದಾನ ಮಾಡಿರಿ ನಮ್ಮ ಕಣ್ಣುಗಳು ಮಣ್ಣಲ್ಲಿ ಮಣ್ಣಾಗಿ ಬೆಂಕಿಯಲ್ಲಿ ಬೂದಿಯಾಗುವ ಬದಲು ಇನ್ನೊಬ್ಬರಿಗೆ ದೃಷ್ಟಿ ನೀಡುವುದು ಎಷ್ಟು ಜನ್ಮದ ಪುಣ್ಯ ಇರುತ್ತದೆ ಹಾಗಾಗಿ ಎಲ್ಲರೂ ಸಾವಿನ ನಂತರ ತಮ್ಮ ದೃಷ್ಟಿಯನ್ನು ದಾನಮಾಡುವ ಮುಖಾಂತರ ಎಷ್ಟು ಮುಂದಿನ ಪೀಳಿಗೆಗಳಿಗೆ ಸಾಕಷ್ಟು ಜನರಿಗೆ ದೃಷ್ಟಿ ಆಗುವ ನಿಟ್ಟಿನಲ್ಲಿ ನಾವು ಬದುಕಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕುಂಚೇನಹಳ್ಳಿ ಗ್ರಾಮದವರೇ ಆದ ರೋಟರಿ ಶಿಮೊಗ್ಗ ಪೂರ್ವ ಸಂಸ್ಥೆಯ ಸದಸ್ಯರ ಲೋಹಿತ್ ಗೌಡ ರವರು ಮಾತನಾಡುತ್ತಾ ರೋಟರಿ ಸಂಸ್ಥೆಯು ಸಾಕಷ್ಟು ಗ್ರಾಮಕ್ಕೆ ಸಹಕರಿಸುತ್ತಾ ಬಂದಿದ್ದು ಈ ದಿನ ಕಣ್ಣಿನ ತಪಾಸಣಾ ಶಿಬಿರವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಶಿಬಿರವನ್ನು ಮಾಡಿಸಿ ಜನಜಾಗೃತಿ ಕೊಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಈ ಸುಸಂದರ್ಭವನ್ನು ಎಲ್ಲರೂ ಬಳಸಿಕೊಂಡು ತಮ್ಮ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಚಂದ್ರ ,ಗ್ರಾಮದ ಹಿರಿಯರು , ಗ್ರಾಮದ ಯುವಕರು ಐದೃಷ್ಟಿ ಆಸ್ಪತ್ರೆಯ ಮ್ಯಾನೇಜರ್
ಮುರಳಿ ಎಂ, ಆಸ್ಪತ್ರೆಯ ಸಿಬ್ಬಂದಿಗಳಾದ ಸುಮಿತ್ರ ,ಶ್ವೇತಾ ಕೆ.ಟಿ ,ಕೀರ್ತನ ಹಾಗೂ ಕುಂಚೇನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ