ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಆಶಯದಿಂದ ವಿಶೇಷ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಪ್ರೊ. ಎ.ಎಸ್.ಚಂದ್ರಶೇಖರ್ ಹೇಳಿದರು.

ರೋಟರಿ ಉತ್ತರ ಸಂಸ್ಥೆ ವತಿಯಿಂದ ಗ್ಲೋಬ್ ಗ್ರಾö್ಯಂಟ್ ಅಡಿಯಲ್ಲಿಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ಜತೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿರುವಂತೆ ವಾತಾವರಣ ರೂಪಿಸಲು ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ. ಶಾಲೆಗಳಿಗೆ ಅವಶ್ಯವಿರುವ ಮೂಲಸೌಕರ್ಯಕ್ಕಾಗಿ ಅನುದಾನದ ನೆರವು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳು ಇದ್ದು, ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಶ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿರುವುದು ಅವಶ್ಯಕ. ಉತ್ತಮ ಫಲಿತಾಂಶ ಬರುವಂತೆ ಮಾಡಬೇಕಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ನಡೆಸಬೇಕು ಎಂದರು. ಈಗಾಗಲೇ ೨೨ ಶಾಲೆಗಳ ಅಭಿವೃದ್ಧಿಗೆ ಶುದ್ಧ ಕುಡಿಯುವ ನೀರಿನ ಘಟಕ, ೧೨ ಶಾಲೆಗಳಲ್ಲಿ ಸ್ಯಾನಿಟರ್ ಪ್ಯಾಡ್ ಬರ್ನಿಂಗ್ ಮಿಷನ್ ಹಾಗೂ ೯ ಶಾಲೆಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ರೋಟರಿ ಉತ್ತರ ಸಂಸ್ಥೆ ಹಾಗೂ ಅಂತರಾಷ್ಟಿçÃಯ ಸಂಸ್ಥೆಗಳ ದಾನಿಗಳ ನೆರವಿನಿಂದ ೨೬ ಲಕ್ಷ ರೂ. ವೆಚ್ಚ ಅನುದಾನ ನೀಡಲಾಗುತ್ತಿದೆ. ಶಾಲೆಗಳಿಗೆ ಕೈತೊಳೆಯುವ ಸಲಕರಣೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ಯೇಸುಪ್ರಕಾಶ್, ಸ್ವಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ, ಯೋಗೇಂದ್ರ, ಚಂದ್ರಕಲಾ ವಿ.ಶೇಟ್, ಡಾ. ಯಶೋಧಾ ದೇವರಮನಿ, ಕ್ಯಾತ್ಯಾಯಿನಿ ಸಿ.ಎಸ್., ಜಾನಕಿಬಾಯಿ ಟಿ.ಜಿ., ರಮೇಶ್, ರಾಮಪ್ಪ, ರೋಟರಿ ಸಂಸ್ಥೆಯ ಜಗದೀಶ್ ಸರ್ಜಾ, ಉಮೇಶ್, ಜಿ.ವಿಜಯ್‌ಕುಮಾರ್, ರವೀಂದ್ರನಾಥ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ