ಇಂದು ಶಿವಮೊಗ್ಗ ಕರಾಟೆ ಅಸೋಸಿಯೇಶನ್ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಸುನಿತಾ ಅಣ್ಣಪ್ಪ ನವರಿಗೆ ದಸರಾ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ನಡೆಯುವ ಯುವ ದಸರಾ ದಲ್ಲಿ ಕರಾಟೆ ಕ್ರೀಡೆಯನ್ನು ಸೇರಿಸಿ ಎಂದು ವಿನಂತಿಸಿಕೊಳ್ಳಲಾಯಿತು
ಕರಾಟೆ ಕ್ರೀಡೆಯು ನೂರಾರು ವರ್ಷದ ಇತಿಹಾಸವನ್ನು ಹೊಂದಿದ್ದು ಇತ್ತೀಚೆಗೆ ಒಲಂಪಿಕ್ಸ್ನಲ್ಲಿ ಸೇರ್ಪಡೆಯಾಗಿದ್ದು ಶಿವಮೊಗ್ಗದ ಭಾಗಶಃ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕರಾಟೆ ತರಬೇತಿಯನ್ನು ಪಡೆಯುತ್ತಿದ್ದು ಅವರ ಗಮನಕ್ಕೆ ತಿಳಿಸಿ ಯುವ ದಸರಾದಲ್ಲಿ ಕರಾಟೆ ಕ್ರೀಡೆಯನ್ನು ಸೇರಿಸಿದಲ್ಲಿ ಕರಾಟೆ ಕ್ರೀಡೆಗೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ವಿನಂತಿಸಲಾಯಿತು
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಶಿವಮೊಗ್ಗ ವಿನೋದ್ ಮತ್ತು ಪ್ರಮುಖರಾದ ಅಣ್ಣಪ್ಪ ಹರ್ಷಿತ್ ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ