ಶಿವಮೊಗ್ಗ ನಗರದ ಜನತೆಯ ಬಹುದೊಡ್ಡ ಕನಸಾಗಿದ್ದ ಸ್ಮಾರ್ಟ್ ಸಿಟಿ ಯೋಜನೆಯು ಶಿವಮೊಗ್ಗ ನಗರದ ಜನತೆಯ ಹಿಡಿಶಾಪಕ್ಕೇ ಕಾರಣವಾಗಿದೆ. ನಗರದ ನಾಗರಿಕರೆಲ್ಲ ಸ್ಮಾರ್ಟ್ ಸಿಟಿ ಯೋಜನೆಯು ನಮ್ಮ ಶಿವಮೊಗ್ಗದ ಪಾಲಿಗೆ ವರವಾಗಿದೆ ಎಂಬ ಭಾವನೆ ಯಲ್ಲಿದ್ದ ಜನರಿಗೆ ಈಗ ಸ್ಮಾರ್ಟ್ ಸಿಟಿ ಜನರ ಶಿಮೊಗ್ಗದ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಸ್ಮಾರ್ಟ್ ಸಿಟಿ ಯೋಜನೆಯ ಅವೈಜ್ಞಾನಿಕ ಕಾಮಗಾರಿಗಳ ಕುರಿತು ನಗರದ ಎಲ್ಲೆಡೆ ಹೋರಾಟಗಳು ಪ್ರತಿಭಟನೆಗಳು ನಡೆಯುತ್ತಿದ್ದರೂ ಅಧಿಕಾರಿಗಳಿಗೆ ಇದರ ಬಿಸಿ ತಟ್ಟುತ್ತಿಲ್ಲ. ನಗರದ ಅನೇಕ ಭಾಗಗಳಲ್ಲಿ ರಸ್ತೆಗಳನ್ನು ಅಗೆದು ಬಿಟ್ಟಿದ್ದು ನಾಗರಿಕರ ಸಾವು-ನೋವಿಗೆ ನೇರ ಕಾರಣವಾಗಿದೆ. ಯೋಜನೆಯ ಕಳಪೆ ಕಾಮಗಾರಿಯ ಬಗ್ಗೆ ನಮ್ಮ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು , ನಗರಾಭಿವೃದ್ಧಿ ಸಚಿವರು ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಜನಗಳ ಆಶೋತ್ತರ ಈಡೇರಿಸುವಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ವಿಫಲವಾಗಿದೆ. ಕಳೆದ ಸುಮಾರು ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಇನ್ನು ಕೂಡ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದಿರುವುದಿಲ್ಲ. ಕಾಮಗಾರಿಗಳಿಗೆ ನಿಗದಿತ ಅವಧಿ ಮುಗಿದಿದ್ದರೂ ಕಂಟ್ರಾಕ್ಟರ್ ಗಳಿಗೆ ಇನ್ನು ಹೆಚ್ಚಿನ ಅವಧಿ ವಿಸ್ತರಣೆ ಮಾಡುವ ಮೂಲಕ ಸ್ಮಾರ್ಟ್ ಸಿಟಿ ಅಧಿಕಾರಿಗಳು ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ. ಈ ಕೂಡಲೇ ಅಧಿಕಾರಿಗಳು ಇದರ ಬಗ್ಗೆ ಎಚ್ಚೆತ್ತು ಶಿವಮೊಗ್ಗ ನಗರವನ್ನು ಗುಂಡಿಮುಕ್ತ ದೂಳು ಮುಕ್ತ ಮಾಡಬೇಕಾಗಿ ಆಗ್ರಹಿಸುತ್ತಿದ್ದೇವೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ