ರೋಟರಿ ಶಿವಮೊಗ್ಗ ಪೂರ್ವ ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ.
ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಮತ್ತು ರಾಷ್ಟ್ರೀಯ ಮಧುಮೇಹ ರಿಸರ್ಚ್ ಸೆಂಟರ್ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಂಯೋಜನೆಯೊಂದಿಗೆ ರಾಷ್ಟ್ರೀಯ ಮಧುಮೇಹ ತಪಾಸಣಾ ಶಿಬಿರ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಈ ದಿನ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ 3 ಕಡೆ ಆಯೋಜಿಸಲಾಗಿತ್ತು ಸಂಗಮ್ ಹೆಲ್ತ್ ಕೇರ್ ಸೆಂಟರ್ನಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಐ ಎಂ ಎ ಶಿವಮೊಗ್ಗ ಅಧ್ಯಕ್ಷರಾದ ಡಾಕ್ಟರ್ ಪರಮೇಶ್ವರ್ ಸಿಗ್ಗಾವ್ ಉದ್ಘಾಟಿಸಿ ಮಾತನಾಡುತ್ತಾ ಈ ದಿನ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಮಧುಮೇಹ ತಪಾಸಣಾ ಶಿಬಿರ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ತುಂಬಾ ಸಾರ್ವಜನಿಕರಲ್ಲಿ ಅನುಕೂಲವಾಗುತ್ತದೆ ಈ ಕಾರ್ಯಕ್ರಮವನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಎಲ್ಲರೂ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಗಮ್ ಹೆಲ್ತ್ಕೇರ್ ಎಂ ಡಿ ಡಾಕ್ಟರ್ ವರುಣ್ ರವರು ಮಾತನಾಡುತ್ತಾ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಈ ದಿನ ಸುಮಾರು 200 ರಿಂದ 500 ಜನಗಳಿಗೆ ಶಿವಮೊಗ್ಗ ಆದ್ಯಂತ ಮಧುಮೇಹ ತಪಾಸಣಾ ಶಿಬಿರ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ ಈ ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ರವರು ಮಾತನಾಡುತ್ತಾ ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಹಾಗೂ ರಾಷ್ಟ್ರೀಯ ಮಧುಮೇಹ ರಿಸರ್ಚ್ ಸೆಂಟರ್ ಹಾಗೂ ಆಟೋ ಕ್ಲೀನಿಂಗ್ ಸಂಸ್ಥೆಯ ಸಂಯೋಜನೆಯೊಂದಿಗೆ ಈ ದಿನ ಉಚಿತ ಮಧುಮೇಹ ತಪಾಸಣಾ ಕಾರ್ಯಕ್ರಮವನ್ನು ಶಿವಮೊಗ್ಗ ನಗರದಲ್ಲಿ ಮೂರು ಕಡೆ ಮಾಡುತ್ತಿದ್ದು ಸಂಗಮ್ ಹೆಲ್ತ್ ಕೇರ್, ಏ ಡಿ ಆರ್ ನರ್ಸಿಂಗ್ ಹೋಮ್, ಸ್ವಸ್ತ್ಯ ಆಯುರ್ವೇದ ಚಿಕಿತ್ಸಾಲಯ ಸಹಕಾರ ಗಳೊಂದಿಗೆ ಮೂರುಕಡೆ ಕಾರ್ಯಕ್ರಮವನ್ನು ಉದ್ಘಾಟನೆಯಾಗಿದ್ದು ಡಾ. ವರುಣ್ , ಡಾ.ಅವಿನಾಶ್ , ಡಾ ದರ್ಶನ್, ಡಾ ರಾಘವೇಂದ್ರ, ಡಾ ತೇಜಸ್ವಿನಿ ಜಿ ಏನ್, ಡಾ ರಮೇಶ್ ರವರು ಉಚಿತ ಮಧುಮೇಹ ತಪಾಸಣಾ ಶಿಬಿರಕ್ಕೆ ಸಹಕರಿಸಿದ್ದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ವತಿಯಿಂದ ಹಾಗೂ ವೈಯಕ್ತಿಕವಾಗಿ ಎಲ್ಲಾ ವೈದ್ಯರಿಗೂ ಹಾಗೂ ಅವರ ಸಿಬ್ಬಂದಿ ವರ್ಗದವರಿಗೂ ಧನ್ಯವಾದಗಳನ್ನು ತಿಳಿಸಿದರು, ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಮಾಜಿ ಅಸಿಸ್ಟೆಂಟ್ ಗೌರ್ನರ್ ವಿಜಯ್ ಕುಮಾರ್ ಜಿ ಮಾತನಾಡುತ್ತಾ ಮಧುಮೇಹ ರೋಗಕ್ಕೆ ನಮ್ಮ ದೈನಂದಿನ ಜೀವನದ ಚಟುವಟಿಕೆಗಳು ಬಹುಮುಖ್ಯವಾಗಿ ಕಾರಣವಾಗುತ್ತದೆ ವ್ಯಾಯಾಮ ಇಲ್ಲದೆ ಬೊಜ್ಜುತನ ತಂದ ನಿತ್ಯ ಆಹಾರದ ವ್ಯತ್ಯಾಸ ದಲ್ಲಿಯೂ ಕೂಡ ಮಧುಮೇಹಕ್ಕೆ ತುತ್ತಾಗುತ್ತಾರೆ ಆದ್ದರಿಂದ 35 ವರ್ಷದ ಮೇಲ್ಪಟ್ಟ ಎಲ್ಲಾ ಜನರು ಮಧುಮೇಹ ತಪಾಸಣಾ ವನ್ನು ಮೂರು ತಿಂಗಳಿಗೆ ಒಮ್ಮೆ ಮಾಡಿಸಲೇಬೇಕು ಎಂದು ತಿಳಿಸಿದರು ಈ ದಿನ ಶಿವಮೊಗ್ಗ ನಗರದ ಅಂತ ರೋಟರಿ ಸಂಗಾಪುರ ಸಂಸ್ಥೆಯು ಹಮ್ಮಿಕೊಂಡಿದ್ದ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಎಲ್ಲಾ ಸಾರ್ವಜನಿಕರು ಉಪಯೋಗ ಪಡಿಸಿಕೊಂಡು ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ,,ರೋಟರಿ ಜಿಲ್ಲಾ ಸಂಪಾದಕ ವಸಂತ್ ಹೋಬಳಿದಾರ್, ಅರುಣ್ ದೀಕ್ಷಿತ್, ನಿಕಟಪೂರ್ವ ಅಧ್ಯಕ್ಷ ಗಣೇಶ ಎಸ್ , ಹಾಗೂ ಎಲ್ಲಾ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ