30/9/21 ಶಿವಮೊಗ್ಗ ನಗರದ ರಿಂಗ್ ರೋಡ್ ನ ವಿನೋಬಾ ನಗರದ ಪೊಲೀಸ್ ಚೌಕಿ ತರಕಾರಿ ಮಾರ್ಕೆಟ್, ಲಕ್ಷ್ಮೀ ಟ್ಯಾಕೀಸ್ ವೃತ್ತದಲ್ಲಿ 5ನೇ ದಿನದ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸ್ವಚ್ಛತಾ ಸಪ್ತಾಹ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ನಗರದ ಬೀದಿ ಬದಿಯ ವ್ಯಾಪಾರಿಗಳಿಗೆ ನಿವೂ ದಿನನಿತ್ಯ ಸ್ವಚ್ಛತೆ ಮಾಡಿದ ಸಂಗ್ರಹ ವಾಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಘಂಟೆ ಗಾಡಿಗೆ ನೀಡಿ, ಐದು ಜನ ಕುಳಿತು ವ್ಯಾಪಾರ ಮಾಡುವ ಸ್ಥಳವನ್ನು ಒಬ್ಬರೇ ಆಕ್ರಮಿಸಬೇಡಿ. ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುವಂತೆ ವ್ಯಾಪಾರ ವಹಿವಾಟು ನಡೆಸಬೇಡಿ. ಪಾಲಿಕೆ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವ ನಿಯಮಗಳನ್ನು ಪಾಲನೆ ಮಾಡಿ ಅವರುಗಳು ಬಂದಾಗ ನಿಮ್ಮ ಬೀದಿ ಬದಿಯ ಗುರುತಿನ ಚೀಟಿಯನ್ನು ತೋರಿಸಿ. ತೋರಿಸದಿದ್ದಾಗ ಅವರು ನಿಮ್ಮ ಸರಕು ಸಾಮಗ್ರಿಗಳನ್ನು ಎತ್ತಿಕೊಂಡು ಹೋಗುವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಟಿವಿಸಿ ಸದಸ್ಯರಾದ ಚಂದ್ರಮ್ಮ, ವಾರ್ಡ್ ಅಧ್ಯಕ್ಷರಾದ ಶ್ರೀಮಣಿ, ಬೂತ್ ಅಧ್ಯಕ್ಷರಾದ ಶ್ರೀಗೋಪಿ, ಬಾಬು, ಪುಟ್ಟಸ್ವಾಮಿ, ಬೀದಿ ಬದಿ ವ್ಯಾಪಾರಸ್ಥರು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ