ಸರಸ್ವತಿ ಪ್ರತಿಷ್ಠಾನ ಶಿರಸಿ ಮತ್ತು ಅಮೆರಿಕ ಸಿಯಾಟಲ್ ಭಗವದ್ಗೀತೆ ಅಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಸಂಪೂರ್ಣ ಭಗವದ್ಗೀತಾ ಅಧ್ಯಯನ ಗಾಂಧಿ ಜಯಂತಿಯಂದು ದಿನಾಂಕ 02-10-2021 ಸಂಜೆ 7.30 ಕ್ಕೆ ಪ್ರಾರಂಭವಾಗಲಿದೆ. ಮಹಾತ್ಮ ಗಾಂಧಿ ಭಗವದ್ಗೀತೆ ಮೇಲೆ ಅಪಾರ ವಿಶ್ವಾಸ ಮತ್ತು ನಂಬಿಕೆಯಿಂದ ಸ್ವತಂತ್ರ ಹೋರಾಟಗಾರ ಸಂದರ್ಭಗಳನ್ನು ಎದುರಿಸಿದ್ದರು. ಆದ್ದರಿಂದ ಗಾಂಧಿ ಜಯಂತಿಯಂದು ಈ ಕಾರ್ಯಕ್ರಮವನ್ನು ಸಂಯೋಜಿತವಾಗಿ ಪ್ರಾರಂಭವಾಗಲಿದೆ.
ಶಿವಮೊಗ್ಗ ಶ್ರೀ ಶಿವಸ್ವಾಮಿ ಕೆ ವಿ ಯವರ 70 ದಿನಗಳ ಈ ತರಗತಿಯನ್ನು ನಡೆಸಲಿದ್ದಾರೆ. ಈ ತರಗತಿಗಳು ದಿನಾಂಕ 02-10-2021 ಸಂಜೆ 7.30 ರಿಂದ 8.30ರ ಹೊರಗೆ ಝೂಮ್ ಆ್ಯಪ್ ನಲ್ಲಿ ನಡೆಯಲಿದ್ದು ಅದರಲ್ಲಿ ಗರಿಷ್ಠ ಸಂಖ್ಯೆ 300 ಜನ ನೋಂದಾಯಿಸಿದ್ದಾರೆ. ಎಲ್ಲರಿಗೂ ತಲುಪಬೇಕೆಂಬ ಅಭಿಲಾಷೆಯಿಂದ ಈ ಕಾರ್ಯಕ್ರಮ ಅದೇ ಸಮಯದಲ್ಲಿ ಕ್ಲಬ್ ಹೌಸಿನಲ್ಲಿ ಪ್ರಸಾರವಾಗಲಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವ ಕನ್ನಡಿಗರು ಇದರಲ್ಲಿ ಭಾಗವಹಿಸಬಹುದಾಗಿದೆ.
ಗೀತಾ ಪ್ರಸ್ ಗೋರಕ್ ಪುರದ ಶ್ರೀಮದ್ಭಗವದ್ಗೀತಾ 726 ವನ್ನು ಪಠ್ಯ ಪುಸ್ತಕವಾಗಿ ಬಳಸಲಾಗುತ್ತದೆ. ಈ ತರಗತಿಯಲ್ಲಿ ಮಂತ್ರವನ್ನು ಓದಿ ಅದರ ಅರ್ಥವನ್ನು ಸರಳ ಕನ್ನಡದಲ್ಲಿ ವಿವರಿಸಲಾಗುತ್ತದೆ. ಹಾಗೂ ಮಂತ್ರವನ್ನು ಎರಡು ಬಾರಿ ಹೇಳಿಕೊಡಲಾಗುತ್ತದೆ.
ಈ ತರಗತಿಗಳು ಮೂಲಕ ಆಧ್ಯಾತ್ಮ ಆಸಕ್ತರಿಗೆ ಅಂದರೆ ಪ್ರೌಢರನ್ನು ದೃಷ್ಟಿಯಲ್ಲಿರಿಸಿಕೊಂಡು ನಡೆಸಲಾಗುತ್ತದೆ. ಹತ್ತು ಹನ್ನೆರಡು ವರ್ಷ ಮೇಲ್ಪಟ್ಟು ಮಕ್ಕಳು ಭಾಗವಹಿಸಬಹುದು.
ಈ ತರಗತಿಗೆ ಸೇರುವವರಿಗೆ ಸಂಸ್ಕೃತ ತಿಳುವಳಿಕೆ ಇದ್ದರೆ ಒಳ್ಳೆಯದು.ಆದರೆ ಕನ್ನಡವನ್ನು ಚೆನ್ನಾಗಿ ಬಲ್ಲ ಎಲ್ಲರಿಗೂ ಅರ್ಥವಾಗುವಷ್ಟು ಸುಲಭವಾಗಿ ಸಂಸ್ಕೃತ ಮಂತ್ರವನ್ನು ಕನ್ನಡದಲ್ಲಿ ವಿವರಿಸಲಾಗುವುದು. ಸಂಪೂರ್ಣ ಕಾರ್ಯಕ್ರಮದ ಉದ್ದೇಶ ಭಗವದ್ಗೀತೆ ತತ್ವಗಳ ಪ್ರಸಾರ 20 ದಿವಸಗಳ ಅಭಿಯಾನ ನಂತರ 14 ನೇ ಡಿಸೆಂಬರ್ 2021 ರಂದು ಈತ ಜಯಂತಿಯಂದು ಸಂಪೂರ್ಣ ಹದಿನೆಂಟು ಅಧ್ಯಾಯಗಳ ಮರಣದೊಂದಿಗೆ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ.
ಹೆಚ್ಚಿನ ಮಾಹಿತಿಗಾಗಿ-ಕೆ.ವಿ ಶಿವಸ್ವಾಮಿ 9481252454

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ