ದಿನಾಂಕ 28-09-2021 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೀಟಲು ಗ್ರಾಮದ ಹುಣಸೆ ಕೊಪ್ಪ ಅರಣ್ಯ ಪ್ರದೇಶದಲ್ಲಿ ಒಂದು ಶಿಫ್ಟ್ ಕಾರು ಸಂಪೂರ್ಣ ಸುಟ್ಟು ಹೋಗಿ ಅದರಲ್ಲಿ ಯಾವುದೋ ಅಪರಿಚಿತ ವ್ಯಕ್ತಿಯ ಮೂಳೆಗಳು ಕಂಡು ಬಂದಿರುತ್ತದೆ ಎಂದು ಜೆಡಿಕುಡಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ನೀಡಿದ ದೂರಿನ ಮೇರೆಗೆ ಯು ಆರ್ ನಂಬರ್ 34/2021 ಕಲಂ 174(ಸಿ) ಸಿ ಆರ್ ಪಿ ಸಿ ಪ್ರೀತಿಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಡಿ ಎಸ್ ಪಿ ತೀರ್ಥಹಳ್ಳಿ ಉಪವಿಭಾಗ ಪಿ ಐ ತೀರ್ಥಹಳ್ಳಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ತನಿಖೆ ಕೈಗೊಂಡು ಕಾಡಿನಲ್ಲಿ ಸುಟ್ಟು ಕರಕಲಾಗಿದ್ದ ಕಾರಿನ ಬಗ್ಗೆ ಪತ್ತೆಹಚ್ಚಿದ್ದು ಸಾಗರ ತಾಲೂಕು ಆಶಾಪುರ ಗ್ರಾಮದ ಮುಸ್ಲಿಂ ಪೇಟೆ ವಾಸಿ ವಿನೋದ್ 45 ವರ್ಷ ರವರಿಗೆ ಸೇರಿದ್ದಾಗಿ ಇರುತ್ತದೆ. ದಿನಾಂಕ 26-09-2021 ರಂದು ಆರೋಪಿಗಳಾದ ಮೃತರ ಪತ್ನಿ ಹಿರಿಯ ಮಗ ಕಿರಿಯ ಮಗ ಹೆಂಡತಿಯ ಅಕ್ಕನ ಮಗ ಹಾಗೂ ಮೃತನ ತಮ್ಮ ಎಲ್ಲರೂ ಸೇರಿ ಮನೆಯಲ್ಲಿ ಅಪರಾಧಿಕ ಒಳಸಂಚು ನಡೆಸಿ ದಿನಾಂಕ 26-09-2021 ರಂದು ಬೆಳಗ್ಗೆ ಆನಂದಪುರದ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಕರಿದಿಸಿ ಮನೆಯಲ್ಲಿ ತಂದಿಟ್ಟುಕೊಂಡು ಅದೇ ದಿನ ರಾತ್ರಿ ಸುಮಾರು 8.30 ಗಂಟೆಯಿಂದ 9.00 ಗಂಟೆಯ ವೇಳೆಯಲ್ಲಿ ವಿನೋದ್ ರವರನ್ನು ಅವರ ಮನೆಯಲ್ಲಿ ತಂತಿ ಬಿಗಿಯುವ ರಾಡು ಸುತ್ತಿಗೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆ. ನಂತರ ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿ ಮನೆಯಲ್ಲಿ ಬಿಟ್ಟು ಮೃತದೇಹವನ್ನು ಉದ್ದೇಶದಿಂದ ಮಾಲಿಕತ್ವದ ಸ್ವಿಫ್ಟ್ ಕಾರಿನಲ್ಲಿ ಯಡಿಹಳ್ಳಿ ರಿಪ್ಪನ್ ಪೇಟೆ ಹುಂಚದಕಟ್ಟೆ ಮಾರ್ಗವಾಗಿ ತೀರ್ಥಹಳ್ಳಿ ತಾಲೂಕು ಮಿಟ್ಲು ಗೋಡು ಗ್ರಾಮದ ಹುಣಸೆ ಕೊಪ್ಪದ ಅರಣ್ಯ ಪ್ರದೇಶಕ್ಕೆ ರಾತ್ರಿ ಸುಮಾರು 10.30 ಗಂಟೆಗೆ ಮೃತದೇಹ ಮತ್ತು ಪೆಟ್ರೋಲನ್ನು ತಂದು ಯಾವುದೇ ಸಾಕ್ಷ್ಯಾಧಾರ ಲಭ್ಯವಾಗ ಬಾರದೆಂದು ದುರುದ್ದೇಶದಿಂದ ಕಾರಿನಲ್ಲಿ ಮೃತದೇಹವನ್ನು ಇಟ್ಟು ಬೆಂಕಿ ಹಚ್ಚಿ ನಂಬರನ್ನು ಮತ್ತು ಮೊಬೈಲನ್ನು ವಾಪಸ್ ಹೋಗುವ ಮಾರ್ಗದಲ್ಲಿ ಹೆಸರು ಮನೆಗೆ ಹೋಗಿ ಕೊಲೆಮಾಡಿದ ಸ್ಥಳವನ್ನು ಸಿನಾಯಿ ಬಳಸಿ ಸ್ವಚ್ಛ ಮಾಡಿ ಆರೋಪಿತರು ಧರಿಸಿದ ಬಟ್ಟೆ ಮತ್ತು ಚಪ್ಪಲಿಯನ್ನು ಮನೆ ಹಿಂಭಾಗದಲ್ಲಿ ಸುಟ್ಟು ಹಾಕಿರುವುದು ತನಿಖೆಯಿಂದ ಗೊತ್ತಾಗಿರುತ್ತದೆ. ಕಲಂ 302 201 ಸಹಿತ 34 ಐಪಿಸಿ ಅನ್ವಯ ಪ್ರಕರಣ ದಾಖಲಿಸಿ ಸದರಿ ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು ಐದು ಜನ ಆರೋಪಿತರನ್ನು ದಸ್ತಗಿರಿ ಮಾಡಿ ತನಿಖೆ ಕೈಗೊಳ್ಳಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ