ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 152 ನೇ ಜಯಂತೋತ್ಸವದ ಅಂಗವಾಗಿ ಇಂದು 23ನೇ ವಾರ್ಡ್ ನ ವೀರಾಂಜನೇಯ ದೇವಸ್ಥಾನದ ಐತಿಹಾಸಿಕ ಪುಷ್ಕರಣಿಯನ್ನು ಸಂಪೂರ್ಣ ಸ್ವಚ್ಛಗೊಳಿಸಲು ತೀರ್ಮಾನಿಸಿ, ಅಂತರ್ಜಲವನ್ನು ಪುನರುಜ್ಜೀವನ ಗೊಳಿಸುವ ದೃಷ್ಟಿಯಿಂದ ಪುಷ್ಕರಣಿಯ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು….
ಈ ಕಾರ್ಯಕ್ರಮವನ್ನು KSSIDC ಯ ಉಪಾಧ್ಯಕ್ಷರಾದ ಶ್ರೀ ಎಸ್ ದತ್ತಾತ್ರಿ ಯವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು…
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿಯವರು ಸ್ವಚ್ಛ ಭಾರತದ ಕನಸನ್ನು ಕಂಡವರು, ಅವರ ದೃಷ್ಟಿಯಲ್ಲಿ ಸ್ವಚ್ಛತೆ ಎಂದರೆ ಕೇವಲ ಪರಿಸರದ ಸ್ವಚ್ಛತೆಯಲ್ಲ ಅದರ ಜೊತೆಗೆ ನಮ್ಮ ಮನಸ್ಸಿನ ಅಂತರಾಳದ ಸ್ವಚ್ಛತೆ ಯಾಗಬೇಕು…
ಸ್ವಚ್ಛ ಭಾರತ ಎಂದರೆ ಮೊದಲಿಗೆ ನಮ್ಮ ಮನಸ್ಸಿನ, ದೇಹದ ಸ್ವಚ್ಛತೆ. ನಂತರ ನಮ್ಮ ಮನೆ, ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ. ಇದರಿಂದ ದೇಶ ಸ್ವಚ್ಛವಾಗಿ ಇರುವುದಲ್ಲದೆ ಪ್ರತಿಯೊಬ್ಬರ ಮನಸ್ಸಿನ ಸ್ವಚ್ಛ ಭಾವದಿಂದ ರಾಮರಾಜ್ಯದ ಕನಸನ್ನು ನಾವು ಕಾಣಬಹುದು ಎಂದರು
ಗಾಂಧೀಜಿಯವರ ಸರಳತೆ ಮತ್ತು ಅವರ ತತ್ವ ಸಿದ್ಧಾಂತವನ್ನು ನಾವು ಅನುಸರಿಸಿ ಕಾರ್ಯರೂಪಕ್ಕೆ ತರಬೇಕು ಹಾಗೂ ಖಾದಿ ಮತ್ತು ಸ್ವದೇಶಿಯ ವಸ್ತುವನ್ನೇ ಹೆಚ್ಚು ಹೆಚ್ಚು ಬಳಸುವುದರ ಮೂಲಕ ಜನತೆಯಲ್ಲಿ ಸ್ವದೇಶಿ ಜಾಗೃತಿ ಮೂಡಿಸಬೇಕು ಎಂದರು…
ಇಂದಿನ ಈ ಸ್ವಚ್ಛತಾ ಕಾರ್ಯಕ್ರಮವು ಐತಿಹಾಸಿಕ ಪುಷ್ಕರಣಿಯನ್ನು ಉಳಿಸಿಕೊಳ್ಳುವ ಹಾಗೂ ಅಂತರ್ಜಲವನ್ನು ಪುನರುಜ್ಜೀವನ ಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದು ಇನ್ನು ಮುಂದೆ ನಿರಂತರವಾಗಿ ಪುಷ್ಕಕರಣಿಯನ್ನು ಸ್ವಚ್ಛಗೊಳಿಸಲು ಅಲ್ಲಿನ ಕಾರ್ಯಕರ್ತರು ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಹಾಗೂ ಅಲ್ಲಿನ ಸ್ಥಳೀಯರ, ಹಿರಿಯ ನಾಗರಿಕರ ಹಾಗೂ ಹಿತೈಷಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ಪುಷ್ಕರಣಿಯ ಜೀರ್ಣೋದ್ಧಾರಕ್ಕಾಗಿ ಸುಣ್ಣ, ಬಣ್ಣ, ನಿರಂತರ ಸ್ವಚ್ಛತೆಯ ಯೋಜನೆಯನ್ನು ನಡೆಸಲಾಗಿದೆ…
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕೋಶಾಧ್ಯಕ್ಷರಾದ ಮಾಜಿ ಉಪ ಮೇಯರ್ ಶ್ರೀ ರಮೇಶ್ (ರಾಮು), ಕಾರ್ಪೊರೇಟರ್ ಶ್ರೀಮತಿ ಕಲ್ಪನಾ ರಮೇಶ್, ಮಹಾಶಕ್ತಿ ಕೇಂದ್ರ ಪ್ರಮುಖ್ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್, ಶ್ರೀ ದೀನ ದಯಾಳ್ 23ನೇ ವಾರ್ಡ್ ನ ಅಧ್ಯಕ್ಷರಾದ ಅಜಯ್ ಸೇರಿದಂತೆ ಇದರ ಪ್ರಮುಖರು ಉಪಸ್ಥಿತರಿದ್ದರು…
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ