ಸಾಗರದ 8ನೇ ವಾರ್ಡ್ ಶ್ರೀನಗರದಲ್ಲಿ ಇಂದು ಮಹಾತ್ಮಾ ಗಾಂಧೀಜಿ ಅವರ 152 ನೇ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ 117 ನೇ ಜನ್ಮದಿನದಂದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು
ಸುಬ್ರಹ್ಮಣ್ಯ ಮಾತನಾಡಿ ಗಾಂಧೀಜಿಯ ಜೀವನವೇ 1ಸಂದೇಶವಾಗಿದ್ದು ಅವರ ಹೆಸರು ಭಾರತೀಯರ ಮನಸ್ಸಿನಲ್ಲಿ ಇಂದಿಗೂ ಉಳಿದಿದೆ ಭಾರತದಲ್ಲಿ ಮಾತ್ರವಲ್ಲದೇ ದಕ್ಷಿಣ ಆಫ್ರಿಕಾದಲ್ಲೂ ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಮನೆಮಾತಾದರು….
ಸಾಗರದೊಂದಿಗೆ ಅವಿನಾಭಾವ ಸಂಬಂಧ
ಹೌದು ಆಗಿನ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಲಿಂಗನಮಕ್ಕಿ ಜಲಾಶಯದಿಂದ ತಲಕಳಲೆ ಬ್ಯಾಲೆನ್ಸಿಂಗ್ ರಿಸರ್ವಾಯರ್ ಗೆ ನೀರನ್ನು ಸಾಗಿಸುವ ಸುರಂಗದ ಕಾಮಗಾರಿ ನಡೆದಿದ್ದ ಸ್ಥಳಕ್ಕೆ ಅವರು ಭೇಟಿ ನೀಡಿದ್ದರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು….
ಸಾಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಲ್ ಬಿ ಕಾಲೇಜಿಗೆ 1964 ರಲ್ಲಿ ಭೇಟಿ ನೀಡಿ ಅಡಿಗಲ್ಲು ಹಾಕುವುದರ ಮೂಲಕ ಚಾಲನೆ ನೀಡಿದರು ಆದ್ದರಿಂದ ಇಂದು ಕಾಲೇಜಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಎಂದು ನಾಮಕರಣ ಮಾಡಲಾಗಿದೆ ಎಂದು ಉಪನ್ಯಾಸಕ ದಯಾನಂದ್ ನಾಯಕ್ ಹೇಳಿದರು….

ಕಾರ್ಯಕ್ರಮದಲ್ಲಿ ದಿನೇಶ್, ಚೇತನ್, ಗಣೇಶ್ ಕಿಣಿ ,ಜವೀರ್, ಕಲ್ಲೇಶಪ್ಪ,ಅನಿಲ್,ಕಿರಣ್, ಚಂದನ್ ಮತ್ತಿತರರು ಹಾಜರಿದ್ದರು…….
-ಸೂರಜ್ ನಾಯರ್

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ