ಮಾದಕ ದ್ರವ್ಯ ವ್ಯಸನಿಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ವಿಶೇಷ ಟೆಸ್ಟಿಂಗ್ ಕಿಟ್ ಅನ್ನು ವಿತರಿಸಲಾಗಿದ್ದು, ಸದರಿ ಕಿಟ್ ನ ಸಹಾಯದಿಂದ ಮಾದಕ ದ್ರವ್ಯವನ್ನು ಸೇವನೆ ಮಾಡಿದ ವ್ಯಕ್ತಿಗಳ ಮೂತ್ರವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೂಡಲೇ ಪಾಸಿಟಿವ್ / ನೆಗಟಿವ್ ಫಲಿತಾಂಶವನ್ನು ನೀಡುತ್ತದೆ. ಪರೀಕ್ಷೆ ವೇಳೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದ ವ್ಯಕ್ತಿಗಳ ವಿರುದ್ಧ ಕಲಂ 27(ಬಿ) NDPS ಕಾಯ್ದೆ ರೀತ್ಯಾ ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ಕಲಂ ನ ಅಡಿಯಲ್ಲಿ ಆರೋಪಿತರಿಗೆ ರೂ 10,000/- ದ ವರೆಗೆ ದಂಡ ಮತ್ತು 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ.
ಈ ದಿನ ದಿನಾಂಕಃ- 02-10-2021 ರಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ ಎರಡು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಸದರಿ ವ್ಯಕ್ತಿಗಳ ಪರೀಕ್ಷಾ ವರದಿಯು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿಇವರುಗಳ ವಿರುದ್ಧ ಪ್ರತ್ಯೇಖವಾಗಿ ಗುನ್ನೆ ನಂ 322/2021 ಮತ್ತು 323/2021 ಕಲಂ 27(ಬಿ) NDPS ಕಾಯ್ದೆ ರೀತ್ಯಾ 02 ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ